For the best experience, open
https://m.newskannada.com
on your mobile browser.
Advertisement

ಆಸ್ಪತ್ರೆಯಿಂದ ಬಂದು ಮತ ಚಲಾಯಿಸಿದ ಇನ್ಫೋಸಿಸ್ ಎನ್. ಆರ್. ನಾರಾಯಣ ಮೂರ್ತಿ

ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ಅನಾರೋಗ್ಯದ ನಡುವೆಯೂ ತಮ್ಮ ನಾಗರಿಕ ಕರ್ತವ್ಯದಲ್ಲಿ ಅಚಲ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅವರು ತಮ್ಮ ಪತ್ನಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಜೊತೆಗೆ ಮತದಾನ ಮಾಡಿದ್ದಾರೆ.
04:56 PM Apr 26, 2024 IST | Ashitha S
ಆಸ್ಪತ್ರೆಯಿಂದ ಬಂದು ಮತ ಚಲಾಯಿಸಿದ ಇನ್ಫೋಸಿಸ್ ಎನ್  ಆರ್  ನಾರಾಯಣ ಮೂರ್ತಿ

ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ಅನಾರೋಗ್ಯದ ನಡುವೆಯೂ ತಮ್ಮ ನಾಗರಿಕ ಕರ್ತವ್ಯದಲ್ಲಿ ಅಚಲ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅವರು ತಮ್ಮ ಪತ್ನಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಜೊತೆಗೆ ಮತದಾನ ಮಾಡಿದ್ದಾರೆ.

Advertisement

77 ವರ್ಷ ವಯಸ್ಸಿನ ಐಟಿ ದಿಗ್ಗಜ ನಾರಾಯಣ ಮೂರ್ತಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿ ಕರೆ ತರಲಾಗಿದ್ದು, ಮತದಾನ ಮಾಡಿದ ಬಳಿಕ ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಸುಧಾಮೂರ್ತಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಮೂರ್ತಿ ಅವರು, ಮತದಾನ ಶ್ರೇಷ್ಠ ದಾನ, ಮತ ಚಲಾಯಿಸುವ ದಿನ ಸುಮ್ಮನೆ ಮನೆಯಲ್ಲಿ ಕೂರಬೇಡಿ ಎಂದು ಹೇಳಿದರು. ಮಾತನಾಡುವುದಕ್ಕಿಂತಾ ಮತ ಚಲಾಯಿಸುವುದು ಮುಖ್ಯ. ಮನೆಯಿಂದ ಹೊರ ಬನ್ನಿ ಮತ ಚಲಾಯಿಸಿ, ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಸುಧಾಮೂರ್ತಿ ಎಂದರು.

Advertisement

ನಗರದ ಜಯನಗರದಲ್ಲಿ ಇರುವ ಮತಗಟ್ಟೆಯಲ್ಲಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಇಬ್ಬರೂ ಮತ ಚಲಾವಣೆ ಮಾಡಿದರು.

Advertisement
Tags :
Advertisement