For the best experience, open
https://m.newskannada.com
on your mobile browser.
Advertisement

ಪಾಕಿಸ್ತಾನದಲ್ಲಿ ಜಪಾನ್ ಪ್ರಜೆಗಳ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ : ಇಬ್ಬರು ಸಾವು

ಪಾಕಿಸ್ತಾನದ ಕರಾಚಿಯಲ್ಲಿ ಜಪಾನ್ ಪ್ರಜೆಗಳು ಪ್ರಯಾಣಿಸುತ್ತಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ. ಈ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
01:05 PM Apr 19, 2024 IST | Chaitra Kulal
ಪಾಕಿಸ್ತಾನದಲ್ಲಿ ಜಪಾನ್ ಪ್ರಜೆಗಳ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ   ಇಬ್ಬರು ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಜಪಾನ್ ಪ್ರಜೆಗಳು ಪ್ರಯಾಣಿಸುತ್ತಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ. ಈ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Advertisement

ವಾಹನದಲ್ಲಿದ್ದ ಎಲ್ಲಾ ಐವರು ವಿದೇಶಿಗರು ದಾಳಿಯಲ್ಲಿ ಬದುಕುಳಿದಿದ್ದಾರೆ. ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಬದುಕುಳಿದಿರುವ ಹಾಗೂ ಗಾಯಗೊಂಡು ಜಪಾನೀಸ್‌ ಪ್ರಜೆಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ವಕ್ತಾರ ಅಬ್ರಾರ್ ಹುಸೇನ್ ಬಲೋಚ್ ಹೇಳಿದ್ದಾರೆ.

ಇದು ಆತ್ಮಾಹುತಿ ದಾಳಿ ಎಂದು ಕರಾಚಿ ಪೊಲೀಸರು ಖಚಿತಪಡಿಸಿದ್ದಾರೆ. ಸ್ಫೋಟದಲ್ಲಿ ಮತ್ತೊಂದು ವಾಹನಕ್ಕೂ ಹಾನಿಯಾಗಿದೆ. ಪೊಲೀಸರು ಹಂಚಿಕೊಂಡ ಆರಂಭಿಕ ವರದಿಗಳ ಪ್ರಕಾರ, ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಎರಡನೇ ಭಯೋತ್ಪಾದಕ ಸಹ ಆತ್ಮಹತ್ಯಾ ಬಾಂಬರ್ ಆಗಿದ್ದಾನೆ. ಭಯೋತ್ಪಾದಕರು ದೇಹಕ್ಕೆ ಆತ್ಮಹತ್ಯಾ ಜಾಕೆಟ್ ಮತ್ತು ಗ್ರೆನೇಡ್ ಅನ್ನು ಕಟ್ಟಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Advertisement

ಮೂವರು ಗಾಯಾಳುಗಳನ್ನು ವೈದ್ಯಕೀಯ ಕೇಂದ್ರಕ್ಕೆ ತಂದಿದ್ದಾರೆ. ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿನ್ನಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ದಾರಿಹೋಕ ಸೇರಿದಂತೆ ಗಾಯಗೊಂಡವರನ್ನು ನೂರ್ ಮುಹಮ್ಮದ್, ಲಂಗರ್ ಖಾನ್ ಮತ್ತು ಸಲ್ಮಾನ್ ರಫೀಕ್ ಎಂದು ಗುರುತಿಸಲಾಗಿದೆ.

ಏತನ್ಮಧ್ಯೆ, ಸಿಂಧ್ ಗವರ್ನರ್ ಕಮ್ರಾನ್ ಟೆಸ್ಸೋರಿ ಅವರು ಲಾಂಧಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯನ್ನು ಖಂಡಿಸಿದರು. ನಗರದಲ್ಲಿ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Advertisement
Tags :
Advertisement