ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರೈತರ ಪ್ರತಿಭಟನೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ !

ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಭಾರಿ ಸಂಖ್ಯೆಯಲ್ಲಿ ರೈತರು ದೆಹಲಿಯತ್ತ ನುಗ್ಗಿದ್ದಾರೆ. ಅತೀ ದೊಡ್ಡ ರೈತ ಪ್ರತಿಭಟನೆ ಆರಂಭಗೊಂಡಿದೆ. ದೆಹಲಿಯ ಗಡಿ ಭಾಗಗಳನ್ನು ದೆಹಲಿ ಪೊಲೀಸರು ಮುಚ್ಚಿದ್ದಾರೆ.
03:34 PM Feb 13, 2024 IST | Ashitha S

ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಭಾರಿ ಸಂಖ್ಯೆಯಲ್ಲಿ ರೈತರು ದೆಹಲಿಯತ್ತ ನುಗ್ಗಿದ್ದಾರೆ. ಅತೀ ದೊಡ್ಡ ರೈತ ಪ್ರತಿಭಟನೆ ಆರಂಭಗೊಂಡಿದೆ. ದೆಹಲಿಯ ಗಡಿ ಭಾಗಗಳನ್ನು ದೆಹಲಿ ಪೊಲೀಸರು ಮುಚ್ಚಿದ್ದಾರೆ.

Advertisement

ಪ್ರತಿಭಟನಾಕಾರರ ಮೇಲೆ ಆಶ್ರುವಾಯು ಸಿಡಿಸಲಾಗಿದೆ. ಇತ್ತಪ್ರತಿಭಟನಾ ನಿರತ ರೈತರು ಟ್ರಾಕ್ಟರ್ ಸೇರಿದಂತೆ ಹಲವು ವಾಹನಗಳ ಮೂಲಕ ದೆಹಲಿಯತ್ತ ಧಾವಿಸಿದ್ದಾರೆ. ಈ ಪ್ರತಿಭಟನೆ ಜೋರಾಗುತ್ತಿದ್ದಂತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಮುಖ್ಯ ನ್ಯಾಯಮೂರ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ರೈತ ಪ್ರತಿಭಟನೆ ನಡೆಸುವವರ ವಿರುದ್ದ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದೆಹಲಿ ಚಲೋ ರೈತ ಪ್ರತಿಭಟನೆ ಹಮ್ಮಿಕೊಂಡವರ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕ್ರಮ ಜರುಗಿಸಬೇಕು ಎಂದು ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ಗೆ ಬಾರ್ ಅಸೋಸಿಯೇಶನ್ ಅಧ್ಯಕ್ಷ ಆದಿಶ್ ಅಗರ್ವಾಲ್ ಅರ್ಜಿ ಸಲ್ಲಿಸಿದ್ದಾರೆ.

Advertisement

ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ರೈತರು ಪ್ರತಿಭಟನೆ ಹೆಸರಿನಲ್ಲಿ ದೆಹಲಿಗೆ ಆಗಮಿಸಿದ್ದಾರೆ. ಇದರಿಂದ ಸಾಮಾನ್ಯರ ಜನಜೀವನ ಅಸ್ತವ್ಯಸ್ಥವಾಗಿದೆ. ತುರ್ತು ಚಿಕಿತ್ಸೆ ಬೇಕಿದ್ದ ರೋಹಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರ ಯೋಜನೆ ರೂಪಿಸುತ್ತಿದೆ. ರೈತರ ಬೇಡಿಕೆ ಕುರಿತು ಚರ್ಚೆಗಳು ಆಗಬೇಕು. ಆದರೆ ನೇರವಾಗಿ ಸಂಘರ್ಷವಲ್ಲ, ಶಾಂತಿಯುತ ಪ್ರತಿಭಟನೆ ಬದಲು ಸಂಘರ್ಷದ ಹಾದಿಯಿಂದ ಹಲವರಿಗೆ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Read More:

1. https://newskannada.com/?p=335481

 

Advertisement
Tags :
BarAssociationGOVERNMENTindiaLatestNewsNewsKannadaನವದೆಹಲಿಸುಪ್ರೀಂಕೋರ್ಟ್
Advertisement
Next Article