For the best experience, open
https://m.newskannada.com
on your mobile browser.
Advertisement

ಮುರುಘಾ ಶರಣರ ವಿರುದ್ಧದ ಕೇಸ್‍ನ ಎಲ್ಲಾ ದಾಖಲಾತಿಗಳನ್ನು ಒಪ್ಪಿಸಿ: ಹೈಕೋರ್ಟ್ ಆದೇಶ

ಚಿತ್ರದುರ್ಗ: ಮುರುಘಾಶ್ರೀ ವಿರುದ್ಧದ ಪೋಕ್ಸೋ ಕೇಸ್‍ನ ಎಲ್ಲಾ ದಾಖಲಾತಿಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಹೈಕೋರ್ಟ್ ಆದೇಶಿಸಿದೆ. ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಏಕಸದಸ್ಯ ಪೀಠ, ಕೆಳ ನ್ಯಾಯಾಲಯದ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನವೆಂಬರ್ 8 ರಂದು ಹೈಕೋರ್ಟ್ ಜಾಮೀನು ನೀಡಿದ್ದರೂ ನವೆಂಬರ್ 16ಕ್ಕೆ ರಿಲೀಸ್ ಆದೇಶ ನೀಡಿದ್ದು ಯಾಕೆ…? ಕೆಳಹಂತದ ನ್ಯಾಯಾಲಯದ ನಡೆ ಹೈಕೋರ್ಟ್ ಆದೇಶದ ನಿಯಮ ಉಲ್ಲಂಘನೆಯಾಗಿದೆ.
10:42 PM Nov 21, 2023 IST | Umesha HS
ಮುರುಘಾ ಶರಣರ ವಿರುದ್ಧದ ಕೇಸ್‍ನ ಎಲ್ಲಾ ದಾಖಲಾತಿಗಳನ್ನು ಒಪ್ಪಿಸಿ  ಹೈಕೋರ್ಟ್ ಆದೇಶ

ಚಿತ್ರದುರ್ಗ: ಮುರುಘಾಶ್ರೀ ವಿರುದ್ಧದ ಪೋಕ್ಸೋ ಕೇಸ್‍ನ ಎಲ್ಲಾ ದಾಖಲಾತಿಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಹೈಕೋರ್ಟ್ ಆದೇಶಿಸಿದೆ. ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಏಕಸದಸ್ಯ ಪೀಠ, ಕೆಳ ನ್ಯಾಯಾಲಯದ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನವೆಂಬರ್ 8 ರಂದು ಹೈಕೋರ್ಟ್ ಜಾಮೀನು ನೀಡಿದ್ದರೂ ನವೆಂಬರ್ 16ಕ್ಕೆ ರಿಲೀಸ್ ಆದೇಶ ನೀಡಿದ್ದು ಯಾಕೆ…? ಕೆಳಹಂತದ ನ್ಯಾಯಾಲಯದ ನಡೆ ಹೈಕೋರ್ಟ್ ಆದೇಶದ ನಿಯಮ ಉಲ್ಲಂಘನೆಯಾಗಿದೆ.

Advertisement

ಕೋರ್ಟ್ ಜಾಮೀನು ಆದೇಶ ನೀಡಿದ ನಂತರ ಬಾಡಿ ವಾರಂಟ್ ತಾನಾಗಿಯೇ ರದ್ದಾಗುತ್ತದೆ. ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಷರತ್ತು ಇದ್ದರೂ ವಾರಂಟ್ ಹೊರಡಿಸಿರೋದು ಸಮಂಜಸ ಅಲ್ಲ, ಟ್ರಯಲ್ ಕೋರ್ಟ್ ಇರುವ ದಾಖಲೆಗಳನ್ನ ರಿಜಿಸ್ಟ್ರಾರ್ ತರಿಸಿ ಇಟ್ಟುಕೊಳ್ಳಬೇಕು. ತಕ್ಷಣ ಫೋನ್ ಮಾಡಿ ಕೋರ್ಟ್ ಮುಂದೆ ಇರುವ ಎಲ್ಲಾ ದಾಖಲೆ ಸೀಜ್ ಮಾಡಬೇಕು. ಎಸ್‍ಪಿಪಿ ವಿರುದ್ಧ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಚಿತ್ರದುರ್ಗ ಜೈಲರ್ ವಿರುದ್ಧದ ತನಿಖಾ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಮುಂದಿನ ತೀರ್ಮಾನದ ತನಕ ಎಲ್ಲಾ ದಾಖಲಾತಿ ಹೈಕೋರ್ಟ್ ಸುಪರ್ದಿಯಲ್ಲಿ ಇರಲಿವೆ.

Advertisement
Advertisement
Tags :
Advertisement