For the best experience, open
https://m.newskannada.com
on your mobile browser.
Advertisement

ರಾಮಲಲ್ಲಾನಿಗೆ ಸೂರ್ಯನ ತಿಲಕ: ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತರು

ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ ಮುಗಿಲು ಮುಟ್ಟಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಳಿಕ ಮೊದಲ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
12:30 PM Apr 17, 2024 IST | Ashitha S
ರಾಮಲಲ್ಲಾನಿಗೆ ಸೂರ್ಯನ ತಿಲಕ  ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತರು

ಉತ್ತರಪ್ರದೇಶ: ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ ಮುಗಿಲು ಮುಟ್ಟಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಳಿಕ ಮೊದಲ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

Advertisement

ಶ್ರೀರಾಮನವಿಮಿಯಂದು ಬಾಲರಾಮನಿಗೆ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಸೂರ್ಯವಂಶದ ರಘುರಾಮನಿಗೆ ಸೂರ್ಯ ಭಗವಾನನಿಂದ ಅಭಿಷೇಕ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಾಮಲಲ್ಲಾನಿಗೆ ಸೂರ್ಯ ರಶ್ಮಿ ಸ್ಪರ್ಶ ಮಾಡಿದ್ದು, ಸುಮಾರು 70 ಮಿ.ಮೀ ಉದ್ದದ ತಿಲಕ ಹಣೆ ಮೇಲೆ ಮೂಡಿದೆ.

ಚೈತ್ರ ಮಾಸ ಶುಕ್ಲ ಪಕ್ಷದ ನವಮಿಯಂದು ಬಾಲ ರಾಮನಿಗೆ ಸೂರ್ಯ ರಶ್ಮಿ ಸ್ಪರ್ಶಿಸಿದೆ. ರಾಮಲಲ್ಲಾನಿಗೆ ಸುಮಾರು ಮೂರರಿಂದ ಮೂರುವರೆ ನಿಮಿಷ ಸೂರ್ಯನ ಕಿರಣಗಳು ಸ್ಪರ್ಶಿಸಿದ್ದು, 2 ನಿಮಿಷಗಳ ಕಾಲ ಸಂಪೂರ್ಣ ತಿಲಕ ಗೋಚರಿಸಿದೆ. ಈ ಅದ್ಭುತ ದೃಶ್ಯವನ್ನು ಅಯೋಧ್ಯೆಯಲ್ಲಿ ಭಕ್ತರು ಕಣ್ತುಂಬಿಕೊಂಡಿದ್ದಾರೆ.

Advertisement

Advertisement
Tags :
Advertisement