For the best experience, open
https://m.newskannada.com
on your mobile browser.
Advertisement

ಶಸ್ತ್ರಚಿಕಿತ್ಸೆಗೆ ಒಳಗಾದ ಸೂರ್ಯಕುಮಾರ್ ಯಾದವ್

ಭಾರತದ   ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ಹರ್ನಿಯಾ ಸಮಸ್ಯೆ ಹೊಂದಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರೆ ಸ್ವತಃ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. 
12:46 PM Jan 18, 2024 IST | Ramya Bolantoor
ಶಸ್ತ್ರಚಿಕಿತ್ಸೆಗೆ ಒಳಗಾದ  ಸೂರ್ಯಕುಮಾರ್ ಯಾದವ್

ನವದೆಹಲಿ: ಭಾರತದ   ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ಹರ್ನಿಯಾ ಸಮಸ್ಯೆ ಹೊಂದಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರೆ ಸ್ವತಃ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

ಕಳೆದ ತಿಂಗಳು ನಡೆದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ವಿಶ್ವದ ಅಗ್ರ ಟಿ20 ಬ್ಯಾಟರ್ ಗಾಯಗೊಂಡಿದ್ದರು.  ಶಸ್ತ್ರಚಿಕಿತ್ಸೆ ಜರ್ಮನಿಯಲ್ಲಿ ನಡೆಯಿತು.  ಅವರು ಪೂರ್ಣ ಚೇತರಿಕೆಯಾಗಿಲ್ಲ. ಇನ್ನೂ  ಒಂದು ತಿಂಗಳು ಚೇತರಿಕೆ ತೆಗೆದುಕೊಳ್ಳುತ್ತಾರೆ.

"ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಶುಭಾಶಯಗಳಿಗಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ನಿಮಗೆ ಹೇಳಲು ನನಗೆ ಸಂತೋಷವಾಗಿದೆ" ಎಂದು ಸೂರ್ಯ ಎಕ್ಸ್  ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Advertisement
Tags :
Advertisement