For the best experience, open
https://m.newskannada.com
on your mobile browser.
Advertisement

ಕೇಜ್ರಿವಾಲ್ ನಿವಾಸದಲ್ಲಿ ಸ್ವಾತಿ ಮಲಿವಾಲ್ ಜಗಳದ ವಿಡಿಯೋ ತುಣುಕು ವೈರಲ್

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದೆಹಲಿ ಮುಖ್ಯಮಂತ್ರಿಯ ಮನೆಯೊಳಗೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಎಎಪಿ ನಾಯಕಿ ಸ್ವಾತಿ ಮಲಿವಾಲ್ ಇಂದು ಮಧ್ಯಾಹ್ನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ 52 ಸೆಕೆಂಡುಗಳ ವಿಡಿಯೊಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
05:26 PM May 17, 2024 IST | Ashitha S
ಕೇಜ್ರಿವಾಲ್ ನಿವಾಸದಲ್ಲಿ ಸ್ವಾತಿ ಮಲಿವಾಲ್ ಜಗಳದ ವಿಡಿಯೋ ತುಣುಕು ವೈರಲ್

ದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದೆಹಲಿ ಮುಖ್ಯಮಂತ್ರಿಯ ಮನೆಯೊಳಗೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಎಎಪಿ ನಾಯಕಿ ಸ್ವಾತಿ ಮಲಿವಾಲ್ ಇಂದು ಮಧ್ಯಾಹ್ನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ 52 ಸೆಕೆಂಡುಗಳ ವಿಡಿಯೊಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಈ ವಿಡಿಯೊದಲ್ಲಿ ಆಕೆಯನ್ನು ಅಸ್ಪಷ್ಟವಾಗಿ ಕಾಣಬಹುದು. ಈಕೆ ಕಟ್ಟಡದಿಂದ ಹೊರಹೋಗುವಂತೆ ಹೇಳಿದ ಭದ್ರತಾ ಅಧಿಕಾರಿಗಳೊಂದಿಗೆ ವಾದ ಮಾಡಿ ಬೈದಾಡುತ್ತಿರುವುದನ್ನೂ ಕಾಣಬಹುದು.

ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಮಲಿವಾಲ್ ಅವರು “ಪೊಲಿಟಿಕಲ್ ಹಿಟ್‌ಮ್ಯಾನ್” ಎಂದು ಉಲ್ಲೇಖಿಸಿದ್ದಾರೆ. ಇದು ಕೇಜ್ರಿವಾಲ್ ಎಂದು ಹಲವರು ಊಹಿಸಿದ್ದಾರೆ. ಪಕ್ಷವನ್ನು ರಕ್ಷಿಸಲು ಮತ್ತು ಈ ಅಪರಾಧವನ್ನು ಮಾಡಿದ ನಂತರ ತನ್ನನ್ನು ಉಳಿಸಿಕೊಳ್ಳಲು ಒಂದು ನಿರೂಪಣೆಯನ್ನು ನಿರ್ಮಿಸಲು ಹಿಟ್‌ಮ್ಯಾನ್ ಈ ವಿಡಿಯೊವನ್ನು ಹಂಚಿಕೊಳ್ಳಲು “ತನ್ನ ಜನರಿಗೆ” ನಿರ್ದೇಶಿಸಿದ್ದಾರೆ ಎಂದು ಹೇಳಿದ್ದಾರೆ.

Advertisement

ಯಾವ ಮಟ್ಟಕ್ಕೆ ಬೇಕಾದರೂ ಇಳಿಯಿರಿ, ದೇವರು ನೋಡುತ್ತಿದ್ದಾನೆ. ಒಂದಲ್ಲ ಒಂದು ದಿನ ಸತ್ಯ ಬಯಲಾಗುತ್ತದೆ ಎಂದು ಮಲಿವಾಲ್ ಹೇಳಿದ್ದಾರೆ.

https://x.com/Iyervval/status/1791382050987286683

Advertisement
Tags :
Advertisement