ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಒಮ್ಮೆ ಮಾಡಿ ನೋಡಿ ಸಿಹಿ ಗೆಣಸಿನ ಪರೋಟ..

ಸಿಹಿ ಗೆಣಸು ದೇಹದಲ್ಲಿನ ವಿವಿಧ ರೋಗಗಳನ್ನು ಗುಣಪಡಿಸುತ್ತದೆ.
07:24 AM Jan 22, 2024 IST | Ramya Bolantoor

ಸಿಹಿ ಗೆಣಸು ದೇಹದಲ್ಲಿನ ವಿವಿಧ ರೋಗಗಳನ್ನು ಗುಣಪಡಿಸುತ್ತದೆ. ಮಾರುಕಟ್ಟೆಯಲ್ಲಿ ಎರಡು ಬಗೆಯ ಸಿಹಿಗೆಣಸುಗಳು ಸಾಮಾನ್ಯವಾಗಿ ಲಭ್ಯವಿವೆ.. ಇದನ್ನು ಹಾಗೇ ಬೇಯಿಸಿ ತಿನ್ನುವುದುಕ್ಕಿಂತ ರುಚಿಯಾದ ತಿನಿಸುಗಳನ್ನು ಮಾಡಬಹುದು. ಗೆಣಸಿನ ಪರೋಟ ಮಾಡಿಕೊಂಡು ತಿಂದ್ರೆ ನೀವು ಬಾಯಿ ಚಪ್ಪರಿಸದೇ ಇರಲು ಸಾಧ್ಯವೇ ಇಲ್ಲ. ಅಷ್ಟು ರುಚಿಯಾಗಿರುತ್ತೆ ಈ ಗೆಣಸಿನ ಪರೋಟ.

Advertisement

ಬೇಕಾಗುವ ಸಾಮಗ್ರಿ :

300 ಗ್ರಾಂನಷ್ಟು ಗೆಣಸು
2 ಕಪ್ ಗೋಧಿ ಹಿಟ್ಟು
ಕಾಲು ಚಮಚ ಅರಿಶಿನ
ಅರ್ಧ ಚಮಚ ಗರಂ ಮಸಾಲ
ಅರ್ಧ ಚಮಚ ಆಮ್ ಚೂರ್ ಪೌಡರ್
ಕಾಲು ಚಮಚ ಓಮ
ಸಣ್ಣಗೆ ಹೆಚ್ಚಿದ 1 ಹಸಿಮೆಣಸಿನ ಕಾಯಿ
ಅರ್ಧ ಚಮಚ ಶುಂಠಿ ಪೇಸ್ಟ್
1 ಚಮಚ ಕಸೂರಿ ಮೇಥಿ
ಅರ್ಧ ಚಮಚ ಉಪ್ಪು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ಸ್ವಲ್ಪ ಎಣ್ಣೆ

Advertisement

ಮಾಡುವ ವಿಧಾನ :
ಒಂದು ಕುಕ್ಕರ್ ನಲ್ಲಿ ನೀರು ಹಾಕಿ ಸ್ವಲ್ಪ ಉಪ್ಪು ಹಾಗೂ ಗೆಣಸನ್ನು ಹಾಕಿ 3 ವಿಶಲ್ ಕೂಗಿಸಿ. ಅದು ತಣ್ಣಗಾದ ಬಳಿಕ ಗೆಣಸಿನ ಸಿಪ್ಪೆ ತೆಗೆದು ಚೆನ್ನಾಗಿ ಮ್ಯಾಶ್ ಮಾಡಿ. ಅದಕ್ಕೆ ಗೋಧಿ ಹಿಟ್ಟು, ಅರಿಶಿನ, ಗರಂ ಮಸಾಲ, ಆಮ್ ಚೂರ್ ಪೌಡರ್, ಓಮ, ಹಸಿಮೆಣಸಿನ ಕಾಯಿ, ಶುಂಠಿ ಪೇಸ್ಟ್, ಕಸೂರಿ ಮೇಥಿ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕಲಸಿಕೊಳ್ಳಿ. ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು 20 ನಿಮಿಷ ಹಾಗೇ ಬಿಡಿ.

ನಂತರ ಸ್ವಲ್ಪ ಗೋಧಿ ಹಿಟ್ಟನ್ನು ಹಾಕಿಕೊಂಡು ಚಪಾತಿಗಿಂತ ಸ್ವಲ್ಪ ದಪ್ಪಗೆ ಲಟ್ಟಿಸಿ. ಕಾದ ತವಾದ ಮೇಲೆ ಹಾಕಿ ಬೇಯಿಸಿ. ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ ತೆಗೆಯಿರಿ. ಉಪ್ಪಿನಕಾಯಿ ಜೊತೆಗೆ ಸವಿಯಬಹುದು.

Advertisement
Tags :
HEALTHLatestNewsNewsKannada
Advertisement
Next Article