For the best experience, open
https://m.newskannada.com
on your mobile browser.
Advertisement

ಸಿಡ್ನಿ ಚರ್ಚ್‌ ನಲ್ಲಿ ಧರ್ಮೋಪದೇಶ ವೇಳೆ ಲೈವ್‌ನಲ್ಲಿ ಬಿಷಪ್‌ಗೆ ಚೂರಿ ಇರಿತ

ಸಿಡ್ನಿ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ನಿಂದ ಪಶ್ಚಿಮಕ್ಕೆ 30 ಕಿ.ಮೀ ದೂರದಲ್ಲಿರುವ ವಾಕ್ಲಿಯಲ್ಲಿರುವ ಚರ್ಚ್ ನಲ್ಲಿ ನಡೆದ ಚೂರಿ ಇರಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
05:12 PM Apr 15, 2024 IST | Ashitha S
ಸಿಡ್ನಿ ಚರ್ಚ್‌ ನಲ್ಲಿ ಧರ್ಮೋಪದೇಶ ವೇಳೆ ಲೈವ್‌ನಲ್ಲಿ ಬಿಷಪ್‌ಗೆ ಚೂರಿ ಇರಿತ

ಸಿಡ್ನಿ: ಇಲ್ಲಿನ ವೆಸ್ಟ್‌ನಲ್ಲಿರುವ ವೇಕ್ಲಿಯಲ್ಲಿನ ಚರ್ಚ್‌ ಒಂದರಲ್ಲಿ ಧರ್ಮೋಪದೇಶ ಸಮಾರಂಭ ನಡೆಯುತ್ತಿದ್ದಾಗ ಉಪದೇಶ ಮಾಡುತ್ತಿದ್ದ ಬಿಷಪ್ ಮೇಲೆ ಏಕಾಏಕಿ ಕಿಡಿಗೇಡಿಗಳು ಚೂರಿಯಿಂದ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಹಲವರಿಗೆ ಕಿಡಿಗೇಡಿಗಳು ಇರಿದಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳ ವರದಿ ತಿಳಿಸಿದೆ. ಇಂದು ಈ ಘಟನೆ ನಡೆದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

Advertisement

ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಬಗ್ಗೆ ವರದಿಯಾಗಿಲ್ಲ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೇಕ್ಲಿಯಲ್ಲಿರುವ ಕ್ರೈಸ್ಟ್ ದಿ ಗುಡ್ ಶೆಫರ್ಡ್ ಚರ್ಚ್‌ನಲ್ಲಿ ಬಿಷಪ್ ಲೈವ್‌ ನಲ್ಲಿ ಧರ್ಮೋಪದೇಶ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್‌ ಆಗಿದೆ.

Advertisement

ಸಿಡ್ನಿಯ ವೆಸ್ಟ್‌ಫೀಲ್ಡ್ ಬೋಂಡಿ ಜಂಕ್ಷನ್ ಶಾಪಿಂಗ್ ಸೆಂಟರ್‌ನಲ್ಲಿ ಆರು ಮಂದಿಯನ್ನು ಇರಿದು ಕೊಂದ ಮೂರು ದಿನಗಳ ಅಂತರದಲ್ಲಿ ಈ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ನಗರದ ಬೋಂದಿ ಜಂಕ್ಷನ್‌ ಬಳಿಯಿರುವ ವೆಸ್ಟ್‌ಫೀಲ್ಡ್‌ ಶಾಪಿಂಗ್‌ ಮಾಲ್‌ನಲ್ಲಿ ವ್ಯಕ್ತಿಯೊಬ್ಬ ಇರಿಯುವ ಮೂಲಕ ಆರು ಮಂದಿಯ ದಾರುಣ ಸಾವಿಗೆ ಕಾರಣನಾಗಿದ್ದ ಇದು ಇಡೀ ಸಿಡ್ನಿಯನ್ನು ತಲ್ಲಗೊಳಿಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಚರ್ಚ್‌ನಲ್ಲಿ ದಾಳಿಯಾಗಿದೆ.

Advertisement
Tags :
Advertisement