For the best experience, open
https://m.newskannada.com
on your mobile browser.
Advertisement

ಐತಿಹಾಸಿಕ ಸಾಧನೆ ಮಾಡಿದ ಉಗಾಂಡ ಕ್ರಿಕೆಟ್​ ಟೀಂ

ಉಗಾಂಡ ದೇಶವು ಐತಿಹಾಸಿಕ ಸಾಧನೆ ಮಾಡಿದ್ದು ರುವಾಂಡಾ ತಂಡವನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ T20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.
06:56 AM Dec 01, 2023 IST | Ashitha S
ಐತಿಹಾಸಿಕ ಸಾಧನೆ ಮಾಡಿದ ಉಗಾಂಡ ಕ್ರಿಕೆಟ್​ ಟೀಂ

ನಮೀಬಿಯಾ: ಉಗಾಂಡ ದೇಶವು ಐತಿಹಾಸಿಕ ಸಾಧನೆ ಮಾಡಿದ್ದು ರುವಾಂಡಾ ತಂಡವನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ T20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.

Advertisement

ನಮೀಬಿಯಾದ ವಿಂಡ್‌ಹೋಕ್​ನ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದುಕೊಂಡು ಉಗಾಂಡ ಫೀಲ್ಡಿಂಗ್​ ಆಯ್ದುಕೊಂಡಿತು. ಬ್ಯಾಟಿಂಗ್ ಮಾಡಲು ಬಂದ ಎದುರಾಳಿ ರುವಾಂಡಾವನ್ನು 18.5 ಓವರ್​ಗಳಲ್ಲಿ ಕೇವಲ 65 ರನ್​ಗಳಿಗೆ ಆಲೌಟ್ ಮಾಡಿತು. ಬಳಿಕ ಬ್ಯಾಟಿಂಗ್ ಮಾಡಿದ ಉಗಾಂಡ 8.1 ಓವರ್​​ನಲ್ಲಿ 1 ವಿಕೆಟ್​​ ನಷ್ಟಕ್ಕೆ 66 ರನ್​ ಗಳಿಸುವ ಮೂಲಕ ವಿಜಯ ಮಾಲೆ ಧರಿಸಿಕೊಂಡಿತು.

ಇದರಿಂದ 2024ರ T20 ವಿಶ್ವಕಪ್ ಟೂರ್ನಿಗೆ ಇದೇ ಮೊದಲ ಬಾರಿಗೆ ಎಂಟ್ರಿ ಪಡೆದುಕೊಂಡು ಇತಿಹಾಸ ನಿರ್ಮಿಸಿದೆ. ವಿಶ್ವಕಪ್​ಗೆ ಅರ್ಹತೆ ಪಡೆದುಕೊಳ್ಳುತ್ತಿದ್ದಂತೆ ಆಟಗಾರರೆಲ್ಲ ಮೈದಾನದಲ್ಲೇ ಕುಣಿದು ಸಂಭ್ರಮಿಸಿದ್ದಾರೆ. 2024ರ T20 ವಿಶ್ವಕಪ್ ಈ ಬಾರಿ ವೆಸ್ಟ್​​ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿದೆ.

Advertisement

Advertisement
Tags :
Advertisement