For the best experience, open
https://m.newskannada.com
on your mobile browser.
Advertisement

ಟಿ20 ವಿಶ್ವಕಪ್​ಗೆ ಭಯೋತ್ಪಾದಕರ ಬೆದರಿಕೆ !

ಜೂನ್ 2 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ಗೆ ಭಯೋತ್ಪಾದಕರು ಬೆದರಿಕೆಯೊಡ್ಡಿದ್ದಾರೆ. ಟೂರ್ನಿಯ ಸಂದರ್ಭದಲ್ಲಿ ದಾಳಿ ನಡೆಸುವುದಾಗಿ ಪಾಕ್ ಮೂಲದ ಉಗ್ರಗಾಮಿ ಸಂಘಟನೆ IS-K (ISKhorasan) ಹೇಳಿಕೊಂಡಿದೆ. ಈ ಬೆದರಿಕೆ ಬೆನ್ನಲ್ಲೇ ಭದ್ರತಾ ಕಾಳಜಿವಹಿಸಲು ಟೂರ್ನಿ ಆಯೋಜಕರು ಮುಂದಾಗಿದ್ದಾರೆ.
09:57 AM May 06, 2024 IST | Ashitha S
ಟಿ20 ವಿಶ್ವಕಪ್​ಗೆ ಭಯೋತ್ಪಾದಕರ ಬೆದರಿಕೆ

ಮುಂಬೈ: ಜೂನ್ 2 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ಗೆ ಭಯೋತ್ಪಾದಕರು ಬೆದರಿಕೆಯೊಡ್ಡಿದ್ದಾರೆ. ಟೂರ್ನಿಯ ಸಂದರ್ಭದಲ್ಲಿ ದಾಳಿ ನಡೆಸುವುದಾಗಿ ಪಾಕ್ ಮೂಲದ ಉಗ್ರಗಾಮಿ ಸಂಘಟನೆ IS-K (ISKhorasan) ಹೇಳಿಕೊಂಡಿದೆ. ಈ ಬೆದರಿಕೆ ಬೆನ್ನಲ್ಲೇ ಭದ್ರತಾ ಕಾಳಜಿವಹಿಸಲು ಟೂರ್ನಿ ಆಯೋಜಕರು ಮುಂದಾಗಿದ್ದಾರೆ.

Advertisement

ಕೆರಿಬಿಯನ್ ಮಾಧ್ಯಮಗಳ ವರದಿ ಪ್ರಕಾರ, ಉತ್ತರ ಪಾಕಿಸ್ತಾನದಿಂದ ಬೆದರಿಕೆಯೊಡ್ಡಲಾಗಿದ್ದು, ಪಾಕ್-ಅಫ್ಘಾನಿಸ್ತಾನದ ಉಗ್ರಗಾಮಿ ಸಂಘಟನೆ ಐಎಸ್‌ಖೋರಾಸನ್ ಟೂರ್ನಿ ನಡುವೆ ಹಿಂಸಾಚಾರವನ್ನು ಪ್ರಚೋದಿಸಲು ಮುಂದಾಗಿದೆ ಎಂದು ಗುಪ್ತಚರ ವರದಿಗಳು ತಿಳಿಸಿದೆ. ಹೀಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಹಾಗೂ ಯುಎಸ್​ಎ ಟಿ20 ವಿಶ್ವಕಪ್​ ವೇಳೆ ಬಿಗಿ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಸಂಪೂರ್ಣ ಭದ್ರತೆಯೊಂದಿಗೆ ಯಶಸ್ವಿಯಾಗಿ ಟಿ20 ವಿಶ್ವಕಪ್ ಆಯೋಜಿಸುವುದಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ಸಿಇಒ ಜಾನಿ ಗ್ರೇವ್ಸ್ ತಿಳಿಸಿದ್ದಾರೆ.

Advertisement

Advertisement
Tags :
Advertisement