ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜ್ವರಕ್ಕೆ ಐಬುಪ್ರೊಫೇನ್ ಮಾತ್ರೆ ಸೇವನೆ: ಮಹಿಳೆಯ ಮುಖ ವಿಚಿತ್ರವಾಗಿ ಬದಲಾವಣೆ

ಇರಾನ್ ಮೂಲದ ಮಹಿಳೆಗೆ ಮೈಕೈ ನೋವು ಕಾಣಿಸಿಕೊಂಡಿದ್ದು, ತಕ್ಷಣ 400 ಮಿಗ್ರಾಂ ಐಬುಪ್ರೊಫೇನ್ ವೈದ್ಯರ ಸಲಹೆ ಇಲ್ಲದೆ ಮಾತ್ರೆ ಸೇವನೆ ಮಾಡಿ  ಕೆಲ ಗಂಟೆಯಲ್ಲೇ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ.
05:11 PM Apr 17, 2024 IST | Chaitra Kulal

ಇರಾನ್:  ಇರಾನ್ ಮೂಲದ ಮಹಿಳೆಗೆ ಮೈಕೈ ನೋವು ಕಾಣಿಸಿಕೊಂಡಿದ್ದು, ತಕ್ಷಣ 400 ಮಿಗ್ರಾಂ ಐಬುಪ್ರೊಫೇನ್ ವೈದ್ಯರ ಸಲಹೆ ಇಲ್ಲದೆ ಮಾತ್ರೆ ಸೇವನೆ ಮಾಡಿ  ಕೆಲ ಗಂಟೆಯಲ್ಲೇ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ.

Advertisement

ಆಕೆಯ ಕಣ್ಣು ಆರಂಭದಲ್ಲಿ ಕೆಂಪಾಗಿ, ನಂತರ ರಕ್ತ ಬರಲು ಶುರುವಾಯ್ತು. ಮುಖ ಊದಿಕೊಂಡಿತು. ತುಟಿಗಳಲ್ಲಿ ಹಳದಿ ಬಣ್ಣದ ಪ್ಯಾಚ್ ಕಾಣಿಸಿಕೊಂಡಿತು. ಅಲ್ಲದೆ ಚರ್ಮ ಹಾವಿನಂತಾಯ್ತು.

ಕೊನೆಗೆ ಮಹಿಳೆಯನ್ನು ಐಸಿಯುವಿಗೆ ಸೇರಿಸುವ ಸ್ಥಿತಿ ನಿರ್ಮಾಣವಾಯ್ತು. ಮಹಿಳೆ ಆತಂರಿಕ ಅಂಗಕ್ಕೆ ಮಾತ್ರೆ ಯಾವುದೇ ಪರಿಣಾಮ ಬೀರಿಲ್ಲ. ಹೃದಯ ಹಾಗೂ ಶ್ವಾಸಕೋಶ ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Advertisement

ಇಷ್ಟರ ಮಧ್ಯೆಯೂ ಆಕೆ ಪರಿಸ್ಥಿತಿ ಎಷ್ಟು ಹದಗೆಟ್ಟಿತೆಂದರೆ ಆಕೆ ಯಾವುದೇ ಆಹಾರವನ್ನು ಕುಡಿಯಲು, ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯನ್ನು ಇನ್ನೂ ಏಳು ದಿನ ಆಸ್ಪತ್ರೆಯಲ್ಲಿಟ್ಟು ಪರಿಶೀಲನೆ ನಡೆಸುವುದಾಗಿ ವೈದ್ಯರು ಹೇಳಿದ್ದಾರೆ.

ಹೊಸ ಗುಳ್ಳೆ, ಊತ ಕಾಣಿಸದೆ ಇದ್ದಲ್ಲಿ ಆಕೆಯನ್ನು ಮನೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.. ಟ್ಯೂಬ್ ಮೂಲಕ ಆಕೆಗೆ ಆಹಾರ ನೀಡಲಾಗ್ತಿದೆ. ಡ್ರಿಪ್ ಏರಿಸಲಾಗಿದ್ದು, ವಿವಿಧ ಪ್ರತಿ ಜೀವಕಗಳನ್ನು ಇಂಜೆಕ್ಟ್ ಮಾಡಲಾಗಿದೆ.

ಐಬುಪ್ರೊಫೇನ್ ಮಾತ್ರೆ ಪರಿಣಾಮ : ವೈದ್ಯರ ಪ್ರಕಾರ, ಐಬುಪ್ರೊಫೇನ್ ಮಾತ್ರೆ ಹಾನಿಕಾರಕವಲ್ಲ. ಆದ್ರೆ ವೈದ್ಯರ ಸಲಹೆ ಇಲ್ಲದೆ ಅದನ್ನು ತೆಗೆದುಕೊಂಡಲ್ಲಿ ಅದು ಸಾವಿಗೆ ಕಾರಣವಾಗಬಹುದು. ಗಂಭೀರ ಚರ್ಮದ ಸೋಂಕು ಕೂಡ ಕಾಣಿಸಿಕೊಳ್ಳಬಹುದು.

ಆರೋಗ್ಯಕರ ರಕ್ತನಾಳ ಹಾಗೂ ಜೀವಕೋಶದ ಮೇಲೆ ಇದು ಪರಿಣಾಮ ಬೀರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದು ಅಪರೂಪದ ಸೋಂಕು ಎನ್ನುತ್ತಾರೆ ವೈದ್ಯರು.

Advertisement
Tags :
DOCTORFEVERIbuprofenLatestNewsNewsKarnatakaWOMANಇರಾನ್
Advertisement
Next Article