For the best experience, open
https://m.newskannada.com
on your mobile browser.
Advertisement

ಕಾಶಿಗೆ ಭೆಟಿನೀಡಿದ ತಮನ್ನಾ ಭಾಟಿಯಾ: ವಿಶ್ವನಾಥನಿಗೆ ವಿಷೇಶ ಪೂಜೆ ಸಲ್ಲಿಕೆ

ಮಿಲ್ಕಿಬ್ಯೂಟಿ  ಎಂದೆ  ಹೆಸರಾಗಿರುವ ತಮನ್ನಾ  ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ವಿಷೇಶ ಪೂಜೆ ಸಲ್ಲಿಸಿದ್ದಾರೆ. ಕಾಶಿಗೆ ಭೇಟಿ ಕೊಟ್ಟಿರುವ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಿವರಾತ್ರಿ ಮುನ್ನವೆ ವಿಶ್ವನಾಥ ದರ್ಶನ ಪಡೆದು ವಿಶ್ವನಾಥನ ಆಶಿರ್ವಾದಕ್ಕೆ ಪಾತ್ರರಾಗಿದ್ದಾರೆ.
04:44 PM Mar 02, 2024 IST | Nisarga K
ಕಾಶಿಗೆ ಭೆಟಿನೀಡಿದ ತಮನ್ನಾ ಭಾಟಿಯಾ  ವಿಶ್ವನಾಥನಿಗೆ ವಿಷೇಶ ಪೂಜೆ ಸಲ್ಲಿಕೆ
ಕಾಶಿಗೆ ಭೇಟಿ ನೀಡಿದ ತಮನ್ನಾ ಭಾಟಿಯಾ; ವಿಶ್ವನಾಥನಿಗೆ ವಿಷೇಶ ಪೂಜೆ ಸಲ್ಲಿಕೆ

ಮಿಲ್ಕಿಬ್ಯೂಟಿ  ಎಂದೆ  ಹೆಸರಾಗಿರುವ ತಮನ್ನಾ  ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ವಿಷೇಶ ಪೂಜೆ ಸಲ್ಲಿಸಿದ್ದಾರೆ. ಕಾಶಿಗೆ ಭೇಟಿ ಕೊಟ್ಟಿರುವ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಿವರಾತ್ರಿ ಮುನ್ನವೆ ವಿಶ್ವನಾಥ ದರ್ಶನ ಪಡೆದು ವಿಶ್ವನಾಥನ ಆಶಿರ್ವಾದಕ್ಕೆ ಪಾತ್ರರಾಗಿದ್ದಾರೆ.

Advertisement

ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ತಮನ್ನಾ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.  ಜ್ಯೋತಿರ್ಲಿಂಗಕ್ಕೆ ನಟಿ ಪೂಜೆ ಸಲ್ಲಿಸಿದ್ದಾರೆ. ಸದ್ಯದಲ್ಲೇ ವಿಜಯ್ ವರ್ಮಾ ಜೊತೆ ತಮನ್ನಾ ಮದುವೆಯಾಗಲು ನಿರ್ಧರಿಸಿದ್ದಾರೆ.  ಶುಭಕಾರ್ಯಕ್ಕೆ ಚಾಲನೆ ನೀಡುವ ಮುನ್ನ ದೇವರ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ.

ಕಳೆದ 2 ವರ್ಷಗಳಿಂದ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ತಮನ್ನಾ ಭಾಟಿಯಾ ಎಂಗೇಜ್ ಆಗಿದ್ದಾರೆ. ಇತ್ತೀಚಿನ ಸಂದರ್ಶನಗಳಲ್ಲಿ ಡೇಟಿಂಗ್ ಬಗ್ಗೆ ತಮನ್ನಾ ರಿವೀಲ್ ಮಾಡಿದ್ದರು. ಮದುವೆ ಪ್ಲ್ಯಾನಿಂಗ್ ಬಗ್ಗೆ ಇಬ್ಬರು ಮುಕ್ತವಾಗಿ ಸಂದರ್ಶನಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.

Advertisement

ಲಸ್ಟ್ ಸ್ಟೋರಿಸ್ 2’ನಲ್ಲಿ ತಮನ್ನಾ- ವಿಜಯ್ ವರ್ಮಾ ಬೋಲ್ಡ್ ಆಗಿ ನಟಿಸಿದ್ದರು ಚಿತ್ರೀಕರಣದ ವೇಳೆ ಪರಿಚಯವಾದ ಸ್ನೇಹ, ಪ್ರೀತಿಗೆ ತಿರುಗಿತ್ತು. ಇನ್ನೂ ಮದುವೆ ಯಾವಾಗ ಎಂದು ಈ ಜೋಡಿ ಅಧಿಕೃತ ಡೇಟ್ ಅನೌನ್ಸ್ ಮಾಡುವವರೆಗೂ ಕಾಯಬೇಕಿದೆ.

Advertisement
Tags :
Advertisement