ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹುಣಸೆ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಹುಣಸೆ ಹಣ್ಣು ಅಥವಾ ಹುಳಿ ಭಾರತೀಯ ಮೇಲೊಗರಗಳು ಚಟ್ನಿಗಳು ಸಾಸ್ ಗಳು ಮತ್ತು ಸೂಪ್ಗಳಲ್ಲಿ ಸಿಹಿ ಮತ್ತು ಹುಳಿಯರುಚಿಗಾಗಿ ಬಳಸಲಾಗುವಂತಹ ಒಂದು ಪದಾರ್ಥವಾಗಿದೆ. ಈ ಹುಣಸೆಹಣ್ಣು ಸಿಹಿ ಮತ್ತು ಆಮ್ಲಿಯ ಸ್ವಭಾವವನ್ನು ಹೊಂದಿದೆ.
11:00 AM Feb 08, 2024 IST | Ashika S

ಹುಣಸೆ ಹಣ್ಣು ಅಥವಾ ಹುಳಿ ಭಾರತೀಯ ಮೇಲೊಗರಗಳು ಚಟ್ನಿಗಳು ಸಾಸ್ ಗಳು ಮತ್ತು ಸೂಪ್ ಗಳಲ್ಲಿ ಸಿಹಿ ಮತ್ತು ಹುಳಿಯರುಚಿಗಾಗಿ ಬಳಸಲಾಗುವಂತಹ ಒಂದು ಪದಾರ್ಥವಾಗಿದೆ. ಈ ಹುಣಸೆಹಣ್ಣು ಸಿಹಿ ಮತ್ತು ಆಮ್ಲಿಯ ಸ್ವಭಾವವನ್ನು ಹೊಂದಿದೆ.

Advertisement

ಇದು ಘಾಬೇಸಿ ಕುಟುಂಬದ ಕಾಸಲ್ಪಿ ನಿಯ ಉಪ ಕುಟುಂಬಕ್ಕೆ ಸೇರಿದೆ. ಈ ಮರವು ಮೂಲತಃ ಆಫ್ರಿಕಾ ಖಂಡದ ಪೂರ್ವ ಭಾಗದ್ದು. ಇದು ಈಗ ಸಾಲುಮರಗಳಾಗಿ ನಡು ತೋಪುಗಳಾಗಿ ಬಳಸಲ್ಪಡುತ್ತಿದೆ.

ಭಾರತದಲ್ಲಿ ಹುಣಸೆ ಹಣ್ಣುಗಳನ್ನು ಒಡಿಸ್ಸಾ ಬಿಹಾರ ಮಹಾರಾಷ್ಟ್ರ ತಮಿಳುನಾಡು ತೆಲಂಗಾಣ ಆಂಧ್ರಪ್ರದೇಶ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಬೆಳೆಸುತ್ತಾರೆ.

Advertisement

ಹುಣಸೆ ಮರ ಬೆಳೆಯಲು ಅಗತ್ಯವಾದ ಹವಾಮಾನ: ಈ ಹುಣಸೆ ಮರ 0 ಡಿಗ್ರಿ ಸೆಲ್ಸಸ್ ತಿಂದ 46 ಡಿಗ್ರಿ ಸೆಲ್ಸಿಯಸ್ವರೆಗಿನ ಯಾವುದೇ ರೀತಿ ಹವಾಮಾನ ಪರಿಸ್ಥಿತಿಯಲ್ಲಿ ಬದುಕಬಲ್ಲದು. ಇದು ಅರೆ ಶುಷ್ಕ ಉಷ್ಣವಲಯದ ಪ್ರದೇಶಗಳಲ್ಲಿ 5cm ನಿಂದ 15 cm ಗಳ ಸರಾಸರಿ ವಾರ್ಷಿಕ ಮಳೆಯೊಂದಿಗೆ ಚೆನ್ನಾಗಿ ಬೆಳೆಯುತ್ತದೆ. ಹುಣಸೆ ಹಣ್ಣಿನ ಗರಿಷ್ಟ ಎತ್ತರವು ಸರಾಸರಿ ಸಮುದ್ರ ಮಟ್ಟಕ್ಕಿಂತ ಒಂದು ಸಾವಿರ ಮೀಟರ್ ಗಳಷ್ಟು ಇರುತ್ತದೆ.

ಮಣ್ಣಿನ ಅವಶ್ಯಕತೆ: ಹುಣಸೆ ಮರಗಳು ಆಳವಾದ ಲೋಮ್ ಮತ್ತು ಮೆಕ್ಕಲು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದರ ಉತ್ತಮ ಭಾಗವೆಂದರೆ ಇದನ್ನು ಕಳಪೆ ಮಣ್ಣಿನಲ್ಲಿಯೂ ಸಹ ಬೆಳೆಸಬಹುದು.

ನೀರಾವರಿ ಅವಶ್ಯಕತೆ: ಮೊಳಕೆ ನಾಟಿ ಮಾಡಿದ ತಕ್ಷಣ ನೀರಾವರಿ ಮಾಡಬೇಕು ಮಣ್ಣಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಅವಲಂಬಿಸಿ ನೀರು ಹಾಕುವುದು ಅಗತ್ಯವಾಗಿರುತ್ತದೆ. ಮಳೆಗಾಲದಲ್ಲಿ ಇವುಗಳಿಗೆ ನೀರಿನ ಅವಶ್ಯಕತೆ ಇರುವುದಿಲ್ಲ.

ಸಸಿಗಳು ಬೆಳೆದು 8 ನೇ ವರ್ಷದಿಂದ ಇಳುವರಿಯನ್ನು ಪ್ರಾರಂಭಿಸಬಹುದು. ಹಾಗೂ ನಾಟಿ ಮತ್ತು ಮೊಗ್ಗುಗಳಿಂದ ಸಸ್ಯಗಳು ನಾಲ್ಕನೇ ವರ್ಷದಿಂದ ಇಳುವರಿ ಪ್ರಾರಂಭಿಸಬಹುದು.

ಹುಣಸೆ ಹಣ್ಣಿನ ಆರೋಗ್ಯ ಪ್ರಯೋಜನಗಳು : ಹುಣಸೆಹಣ್ಣು ಸಿಹಿ ಮತ್ತು ಹುಲಿಯ ರುಚಿಯನ್ನು ಹೊಂದಿದ್ದು ಟಾರ್ಟರಿಕ್ ಆಮ್ಲ, ಸಕ್ಕರೆ ಬಿ ಜೀವ ಸತ್ವಗಳು ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿದೆ.

ಹುಣಸೆಹಣ್ಣು ಜೀರ್ಣಕ್ರಿಯ ಆರೋಗ್ಯವನ್ನು ಬೆಂಬಲಿಸುತ್ತದೆ

ಹುಣಸೆ ಹಣ್ಣಿನ ಹೃದಯದ ಆರೋಗ್ಯಕ್ಕೆ ಉತ್ತಮ

ಹುಣಸೆಹಣ್ಣು ಕಬ್ಬಿನಾಂಶದ ಉತ್ತಮ ಮೂಲವಾಗಿದೆ ಆದ್ದರಿಂದ ರಕ್ತ ಪರಿಚಲನಿಗೆ ಉತ್ತಮ

ಮಧುಮೇಹವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

Advertisement
Tags :
LatetsNewsNewsKannadaಕೃಷಿಪದಾರ್ಥಭಾರತೀಯಹುಣಸೆ ಹಣ್ಣುಹುಳಿ
Advertisement
Next Article