ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಟಿ ತಾರಾ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್

ಖ್ಯಾತ ನಟಿ ತಾರಾ ಅನುರಾಧ ಅವರ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್ ಹಾಕಲಾಗಿದೆ. ಈ ಕುರಿತಾಗಿ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾರಾ ಅವರ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.
06:49 AM Dec 21, 2023 IST | Ashitha S

ಬೆಂಗಳೂರು: ಖ್ಯಾತ ನಟಿ ತಾರಾ ಅನುರಾಧ ಅವರ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್ ಹಾಕಲಾಗಿದೆ. ಈ ಕುರಿತಾಗಿ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾರಾ ಅವರ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

Advertisement

ಫೇಸ್ಬುಕ್ ನಲ್ಲಿ ತಾರಾ ಅನುರಾಧ ಮತ್ತು ತಾರಾ ಅನುರಾಧ ವೇಣು ಹೆಸರಿನ ಎರಡು ಅಧಿಕೃತ ಖಾತೆಗಳಿದ್ದು, ತಾರಾ ಅನುರಾಧ ವೇಣು ಹೆಸರಿನ ಖಾತೆಯನ್ನು ಅವರು ಹೆಚ್ಚಾಗಿ ಬಳಸುತ್ತಿದ್ದಾರೆ.

ತಾರಾ ಅನುರಾಧ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಬಂದ ಬಗ್ಗೆ ಪರಿಚಿತರೊಬ್ಬರು ತಿಳಿಸಿದ್ದಾರೆ. ತಮಗೆ ಸಂಬಂಧವಿಲ್ಲದ ಪೋಸ್ಟ್ ಹಾಕಲಾಗಿದೆ. ಅಪರಿಚಿತರು ಖಾತೆ ಹ್ಯಾಕ್ ಮಾಡಿ ಪೋಸ್ಟ್ ಹಾಕಿದ್ದು, ಇದನ್ನು ಡಿಲೀಟ್ ಮಾಡಿಸಿ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

Advertisement

Advertisement
Tags :
crimeindiaLatestNewsNewsKannadaತಾರಾನವದೆಹಲಿಬೆಂಗಳೂರು
Advertisement
Next Article