For the best experience, open
https://m.newskannada.com
on your mobile browser.
Advertisement

ಟಾಟಾ ಕಂಪನಿಗಳಿಂದ ಬೆಂಗಳೂರಲ್ಲಿ ಗನ್ ಫ್ಯಾಕ್ಟರಿ, ಎಂಆರ್​ಒ ಘಟಕ

ಕರ್ನಾಟಕದಲ್ಲಿ ಐಫೋನ್ ಫ್ಯಾಕ್ಟರಿ ಸೇರಿದಂತೆ ಹಲವು ಯೋಜನೆಗಳನ್ನು ನಡೆಸುತ್ತಿರುವ ಟಾಟಾ ಗ್ರೂಪ್ ಇದೀಗ ರಾಜ್ಯದಲ್ಲಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ.
05:12 PM Feb 19, 2024 IST | Ashitha S
ಟಾಟಾ ಕಂಪನಿಗಳಿಂದ ಬೆಂಗಳೂರಲ್ಲಿ ಗನ್ ಫ್ಯಾಕ್ಟರಿ  ಎಂಆರ್​ಒ ಘಟಕ

ನವದೆಹಲಿ: ಕರ್ನಾಟಕದಲ್ಲಿ ಐಫೋನ್ ಫ್ಯಾಕ್ಟರಿ ಸೇರಿದಂತೆ ಹಲವು ಯೋಜನೆಗಳನ್ನು ನಡೆಸುತ್ತಿರುವ ಟಾಟಾ ಗ್ರೂಪ್ ಇದೀಗ ರಾಜ್ಯದಲ್ಲಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ.

Advertisement

ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ ಟಾಟಾ ಗ್ರೂಪ್ ಕಂಪನಿಗಳಾದ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್​ಡ್ ಸಿಸ್ಟಮ್ಸ್ ಒಟ್ಟು 2,300 ಕೋಟಿ ರೂ ಹೂಡಿಕೆ ಮಾಡಲಿವೆ. ಈ ಕಂಪನಿಗಳು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ (MoU) ಪತ್ರಕ್ಕೆ ಸಹಿಹಾಕಿವೆ. ಒಂದು ಅಂದಾಜು ಪ್ರಕಾರ ಈ ಯೋಜನೆಗಳಿಂದ 1,650 ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ಜೊತೆಗೆ ಪರೋಕ್ಷವಾಗಿ ಸಾವಿರಾರು ಮಂದಿಎ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

ಏರ್ ಇಂಡಿಯಾ ಸಂಸ್ಥೆ ಬೆಂಗಳೂರಿನಲ್ಲಿ 1,300 ಕೋಟಿ ರೂ ಹೂಡಿಕೆಯಲ್ಲಿ ಎಂಆರ್​ಒ ಕೇಂದ್ರವನ್ನು ಸ್ಥಾಪಿಸಿದೆ. ವಿಮಾನ ಮತ್ತು ಅದರ ಬಿಡಿಭಾಗಗಳ ಮೈಂಟೆನೆನ್ಸ್, ದುರಸ್ತಿ ಕಾರ್ಯಗಳು ಈ ಎಂಆರ್​ಒ ಘಟಕದಲ್ಲಿ ಆಗಲಿದೆ. ದಕ್ಷಿಣ ಭಾರತದಲ್ಲಿ ಏರ್ ಇಂಡಿಯಾ ಬೆಂಗಳೂರನ್ನು ತನ್ನ ಎಂಆರ್​ಒ ಕೇಂದ್ರವನ್ನಾಗಿ ಮಾಡಿಕೊಳ್ಳಲು ಉದ್ದೇಶಿಸಿದೆ.

Advertisement

ಇನ್ನು ಏರೋಸ್ಪೇಸ್, ಮಿಲಿಟರಿ ಎಂಜಿನಿಯರಿಂಗ್, ಡಿಫೆನ್ಸ್ ಟೆಕ್ನಾಲಜಿ ಕಂಪನಿ ಎನಿಸಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಕರ್ನಾಟಕದಲ್ಲಿ 1,030 ಕೋಟಿ ರೂ ಹೂಡಿಕೆಯಲ್ಲಿ ಮೂರು ಯೋಜನೆಗಳನ್ನು ಕೈಗೊಳ್ಳುತ್ತಿದೆ. 420 ಕೋಟಿ ರೂ ಹೂಡಿಕೆಯಲ್ಲಿ ಏರ್​ಕ್ರಾಫ್ಟ್ ಕನ್ವರ್ಷನ್ ಘಟಕ, 310 ಕೋಟಿ ರೂ ಹೂಡಿಕೆಯಲ್ಲಿ ಗನ್ ತಯಾರಿಕೆ ಘಟಕ ಮತ್ತು 300 ಕೋಟಿ ರೂ ಹೂಡಿಕೆಯಲ್ಲಿ ಏರೋಸ್ಪೇಸ್ ಆರ್ ಅಂಡ್ ಡಿ ಸೆಂಟರ್ ಅನ್ನು ಸ್ಥಾಪಿಸಲಿದೆ. ಗನ್ ತಯಾರಿಕಾ ಘಟಕದಿಂದ ಕರ್ನಾಟಕದಲ್ಲಿ ವಿವಿಧ ಉದ್ದಿಮೆಗಳಿಗೆ ಅನುಕೂಲವಾಗಲಿದೆ.

Advertisement
Tags :
Advertisement