For the best experience, open
https://m.newskannada.com
on your mobile browser.
Advertisement

ಪಾರ್ಟ್ ಟೈಂ ಜಾಬ್ ಆಫರ್ ನಂಬಿ 2.77 ಕೋಟಿ ಕಳೆದುಕೊಂಡ ಶಿಕ್ಷಕಿ

ರಾಯಚೂರು ಜಿಲ್ಲೆಯಲ್ಲಿ ಪಾರ್ಟ್ ಟೈಂ ಜಾಬ್ ಆಫರ್  ನಂಬಿ ಸರ್ಕಾರಿ ಶಾಲೆ  ಶಿಕ್ಷಕಿಯೊಬ್ಬರು ಬರೋಬ್ಬರಿ 2.77 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
08:16 AM Feb 15, 2024 IST | Ashika S
ಪಾರ್ಟ್ ಟೈಂ ಜಾಬ್ ಆಫರ್ ನಂಬಿ 2 77 ಕೋಟಿ ಕಳೆದುಕೊಂಡ ಶಿಕ್ಷಕಿ

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಪಾರ್ಟ್ ಟೈಂ ಜಾಬ್ ಆಫರ್  ನಂಬಿ ಸರ್ಕಾರಿ ಶಾಲೆ  ಶಿಕ್ಷಕಿಯೊಬ್ಬರು ಬರೋಬ್ಬರಿ 2.77 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ರಾಯಚೂರಿನ  ಮಸ್ಕಿ ಪಟ್ಟಣದ ನಿವಾಸಿಯಾಗಿರುವ ಶಿಕ್ಷಕಿ 2023ರ ಸೆಪ್ಟೆಂಬರ್ 3ರಿಂದ ಈ ವರ್ಷದ ಜನವರಿ 12ರ ನಡುವಣ ಅವಧಿಯಲ್ಲಿ ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದರು. ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಈ ವರ್ಷದ ಜನವರಿ 14 ರಂದು ದೂರು ನೀಡಿದ್ದರು.

ಪಾರ್ಟ್ ಟೈಮ್ ಕೆಲಸ ಹುಡುಕುತ್ತಿದ್ದ ಶಿಕ್ಷಕಿಗೆ ವಾಟ್ಸಾಪ್‌ನಲ್ಲಿ ಸಂದೇಶ ಬಂದಿತ್ತು. ಪ್ರತಿನಿತ್ಯ ಇತರರಿಗೆ ವಿಮಾನ ಟಿಕೆಟ್ ಕಾಯ್ದಿರಿಸಲು ಪಾರ್ಟ್‌ಟೈಮ್ ಕೆಲಸ ಮಾಡುವವರನ್ನು ಹುಡುಕುತ್ತಿದ್ದೇವೆ ಎಂಬ ಸಂದೇಶ ಬಂದಿತ್ತು. ಈ ಕೆಲಸದ ಮೂಲಕ ದಿನಕ್ಕೆ 1,000 ರಿಂದ 3,600 ರೂ. ವರೆಗೆ ಸಂಪಾದಿಸಬಹುದು ಎಂದು ಆಫರ್ ನೀಡಿದವರು ಆಮಿಷವೊಡ್ಡಿದ್ದರು. ಜತೆಗೆ ಆ ಕುರಿತು ಸಂದೇಶದಲ್ಲಿ ಲಿಂಕ್ ಅನ್ನು ಸಹ ಒದಗಿಸಿದ್ದರು.

Advertisement

ಶಿಕ್ಷಕಿಯು ಆ ಕೆಲಸದ ಆಫರ್​ ಅನ್ನು ಒಪ್ಪಿ ಸೆಪ್ಟೆಂಬರ್‌ನಿಂದ ಕೆಲಸ ಮಾಡಲು ಪ್ರಾರಂಭಿಸಿದ್ದರು. ವಂಚಕರು ಆಕೆಗೆ ಲಿಂಕ್‌ಗಳನ್ನು ಕಳುಹಿಸುತ್ತಿದ್ದರು ಮತ್ತು ಅವುಗಳನ್ನು ಭರ್ತಿ ಮಾಡಲು ಕೇಳುತ್ತಿದ್ದರು. ದಿನಗಳು ಕಳೆದಂತೆ, ಸೈಬರ್ ವಂಚಕರು ಮಹಿಳೆಯ ಗಳಿಕೆಯನ್ನು ತೋರಿಸಲು ಪ್ರಾರಂಭಿಸಿದರು. ಆದರೆ ಆಕೆ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ವಂಚಕರು ಹಣವನ್ನು ಬಿಡುಗಡೆ ಮಾಡಲು ವಿವಿಧ ಶುಲ್ಕಗಳನ್ನು ಪಾವತಿಸುವಂತೆ ಕೇಳಿದ್ದರು.

ಮಹಿಳೆ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಲೇ ಇದ್ದರು ಮತ್ತು ಜನವರಿವರೆಗೆ ಕನಿಷ್ಠ 82 ವಿವಿಧ ಖಾತೆಗಳಿಗೆ 2.77 ಕೋಟಿ ರೂ. ವರ್ಗಾವಣೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಇತರರಿಗೆ ಶಿಕ್ಷಕಿಯಾರಿಂದ ಅವರು ಲಕ್ಷಗಟ್ಟಲೆ ಹಣವನ್ನು ಸಾಲವಾಗಿ ನೀಡಿದ್ದರು. ಈ ಬಗ್ಗೆ ಶಿಕ್ಷಕಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಹಣ ಪಡೆಯಲು ತನ್ನ ಮನೆಯನ್ನೂ ಅಡಮಾನ ಇಟ್ಟಿದ್ದರು. ವಂಚಕರಿಂದ ಬೇಡಿಕೆ ಹೆಚ್ಚಾದಾಗ ಮತ್ತು ಸಾಲ ನೀಡಿದವರು ಅದನ್ನು ಕೇಳಲು ಪ್ರಾರಂಭಿಸಿದಾಗ, ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.

Advertisement
Tags :
Advertisement