ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇನ್ಮುಂದೆ ಇಲ್ಲಿನ ಶಿಕ್ಷಕರು ಶಾಲೆಗಳಿಗೆ ಬಂದೂಕು ಒಯ್ಯಲಿದ್ದಾರೆ

ಇನ್ಮುಂದೆ ಅಮೆರಿಕದ ದಕ್ಷಿಣ ರಾಜ್ಯವಾದ ಟೆನ್ನೇಸಿಯಲ್ಲಿ ಶಿಕ್ಷಕರು ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಬಹುದು. ಹೌದು. . . ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ ನೀಡುವ ಮಸೂದೆಗೆ ಟೆನ್ನೇಸಿ ಶಾಸನಸಭೆ ಬುಧವಾರ ಅನುಮೋದನೆ ನೀಡಿದೆ.
12:40 PM Apr 25, 2024 IST | Ashitha S

ಅಮೆರಿಕ: ಇನ್ಮುಂದೆ ಅಮೆರಿಕದ ದಕ್ಷಿಣ ರಾಜ್ಯವಾದ ಟೆನ್ನೇಸಿಯಲ್ಲಿ ಶಿಕ್ಷಕರು ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಬಹುದು. ಹೌದು. . . ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ ನೀಡುವ ಮಸೂದೆಗೆ ಟೆನ್ನೇಸಿ ಶಾಸನಸಭೆ ಬುಧವಾರ ಅನುಮೋದನೆ ನೀಡಿದೆ.

Advertisement

ಕಳೆದ ವರ್ಷ ನಾಶ್‌ವಿಲ್ಲೆಯ ಶಾಲೆಯೊಂದರಲ್ಲಿ ಬಂದೂಕುದಾರಿಯೊಬ್ಬ ನಡೆಸಿದ್ದ ಗುಂಡಿನ ದಾಳಿಗೆ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ಶಾಲಾ ಸಿಬ್ಬಂದಿ ಮೃತರಾಗಿದ್ದರು. ಈ ಘಟನೆ ಬೆನ್ನಲ್ಲೇ ಶಾಲೆಗಳಿಗೆ ಹ್ಯಾಂಡ್‌ಗನ್‌ಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂಬ ಕೂಗು ಶಿಕ್ಷಕರ ಕಡೆಯಿಂದ ಎದ್ದಿತ್ತು.

ಶಾಸನಸಭೆಯಲ್ಲಿ ಮಸೂದೆ ಮಂಡನೆಯಾಗಿ ಕಾನೂನಾಗಿರುವುದರಿಂದ ಇನ್ಮುಂದೆ ಶಿಕ್ಷಕರು ನಿಗದಿತ ಕ್ರಮಗಳನ್ನು ಅನುಸರಿಸಿ ಬಂದೂಕುಗಳನ್ನು ತೆಗೆದುಕೊಂಡು ಶಾಲೆಗೆ ಹೋಗಬಹುದು. ಪೊಲೀಸರ ಅನುಮತಿಯೊಂದಿಗೆ 40 ಗಂಟೆಗಳ ತರಬೇತಿ, ಮಾನಸಿಕ ಸ್ಥಿತಿಯ ಬಗ್ಗೆ ಮನಶಾಸ್ತ್ರಜ್ಞರ ಪ್ರಮಾಣಪತ್ರ ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ಪೂರೈಸಿದ ಶಿಕ್ಷಕರು, ಇತರೆ ಸಿಬ್ಬಂದಿ ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಬಹುದು ಎನ್ನಲಾಗಿದೆ.

Advertisement

Advertisement
Tags :
AMERICAGOVERNMENTindiaLatestNewsNewsKarnatakaPOLICE
Advertisement
Next Article