ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಜೆಟ್ ತಯಾರಿಯಲ್ಲಿ ಐಎಎಸ್ ಅಧಿಕಾರಿಗಳ ಪಾತ್ರ; ಸೀತಾರಾಮನ್‌ರ ೬ನೇ ಬಜೆಟ್‌ಗೆ ಸಹಕರಿಸಿದವರು ಇವರು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಆರನೇ ಬಜೆಟ್ ಮಂಡಿಸಿದ್ದು, ಲೋಕಸಭಾ ಚುನಾವಣೆಯ ನಂತರ ಹೊಸ ಸರ್ಕಾರ ರಚನೆಯಾಗುವ ತನಕ ಇದು ಜಾರಿಯಲ್ಲಿರಲಿದೆ. ಮಧ್ಯಂತರ ಬಜೆಟ್ ನಲ್ಲಿ ಹೊಸ ಯೋಜನೆಗಳ ಘೋಷಣೆ ಮಾಡಲಾಗಿಲ್ಲ. ಈಗಾಗಲೇ ಇರುವ ಯುವಕರು, ಮಹಿಳೆಯರು, ರೈತರು ಹಾಗು ಬಡವರ ಕೇಂದ್ರಿತ ಯೋಜನೆಗಳಿಗೆ ಇನ್ನಷ್ಟು ಒತ್ತು ನೀಡಲಾಗಿದೆ.
07:06 PM Feb 01, 2024 IST | Maithri S

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಆರನೇ ಬಜೆಟ್ ಮಂಡಿಸಿದ್ದು, ಲೋಕಸಭಾ ಚುನಾವಣೆಯ ನಂತರ ಹೊಸ ಸರ್ಕಾರ ರಚನೆಯಾಗುವ ತನಕ ಇದು ಜಾರಿಯಲ್ಲಿರಲಿದೆ.

Advertisement

ಮಧ್ಯಂತರ ಬಜೆಟ್ ನಲ್ಲಿ ಹೊಸ ಯೋಜನೆಗಳ ಘೋಷಣೆ ಮಾಡಲಾಗಿಲ್ಲ. ಈಗಾಗಲೇ ಇರುವ ಯುವಕರು, ಮಹಿಳೆಯರು, ರೈತರು ಹಾಗು ಬಡವರ ಕೇಂದ್ರಿತ ಯೋಜನೆಗಳಿಗೆ ಇನ್ನಷ್ಟು ಒತ್ತು ನೀಡಲಾಗಿದೆ.

ಬಜೆಟ್‌ತಯಾರಿಯಲ್ಲಿ ಹಲವಾರು ಅಧಿಕಾರಿಗಳು ಕೈಜೋಡಿಸಿದ್ದು, ಯಶಸ್ವಿ ಮಂಡನೆಗೆ ಸಹಕಾರಿಯಾಗಿದ್ದಾರೆ.

Advertisement

ಟಿ.ವಿ.ಸೋಮನಾಥ್: ಕೇಂದ್ರ ಸರ್ಕಾರದ ಹಣಕಾಸು ಹಾಗು ವೆಚ್ಚ ಇಲಾಖೆ ಕಾರ್ಯದರ್ಶಿಯಯಾಗಿರುವ ಇವರು ತಮಿಳುನಾಡು ಕೇಡರ್ ನ ೧೯೮೧ ಬ್ಯಾಚ್ ನ ಐಎಎಸ್ ಅಧಿಕಾರಿ. ʼಆತ್ಮನಿರ್ಭರ ಭಾರತʼ ಯೋಜನೆಯಲ್ಲಿ ಮಹತ್ವದ ಪಾತ್ರವಹಿಸಿರುವ ಸೋಮನಾಥ್ ಹಣಕಾಸು ಹಂಚಿಕೆಯಲ್ಲಿ ವಿತ್ತ ಸಚಿವರಿಗೆ ಸಲಹೆ ನೀಡುತ್ತಾರೆ.

ವಿ.ಅನಂತ ನಾಗೇಶ್ವರನ್: ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಇವರು ಭಾರತದ ಆರ್ಥಿಕತೆಯ ವಿಷಯದಲ್ಲಿ ಸಲಹೆ ನೀಡಿದ್ದಾರೆ.

ಅಜಯ್ ಸೇಠ್: ಭಾರತದ ಮೊದಲ ಹಸಿರು ಬಾಂಡ್ ವಿತರಣೆ ಮತ್ತು ಮೂಲಸೌಕರ್ಯ, ಹಣಕಾಸು ಸಚಿವಾಲಯದ ರಚನೆಯ ಮುಖ್ಯಸ್ಥರಾಗಿದ್ದ ಇವರು ಕರ್ನಾಟಕ ಕೆಡರ್ ನ ೧೯೮೭ ತಂಡದ ಐಎಎಸ್ ಅಧಿಕಾರಿ. ಪ್ರಸ್ತುತ ಆರ್ಥಿಕ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಂಜಯ್ ಮಲ್ಹೋತ್ರಾ: ರಾಜಸ್ಥಾನ ಕೆಡರ್ ನ ೧೯೯೦ ತಂಡದ ಐಎಎಸ್ ಅಧಿಕಾರಿಯಾದ ಇವರು ಆದಾಯ ತೆರಿಗೆ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಮಧ್ಯಂತರ ಬಜೆಟ್ ಭಾಷಣದ ಎರಡನೇ ಭಾಗವನ್ನು ಇವರು ಸಿದ್ಧಪಡಿಸಿದ್ದಾರೆ.

ತುಹಿನ್ ಕಾಂತ್ ಪಾಂಡೆ: ಈ ಹಿಂದೆ ಏರ್ ಇಂಡಿಯಾದ ಯಶಸ್ವಿ ಮಾರಾಟದಲ್ಲಿ ಮುಖ್ಯ ಪಾತ್ರವಹಿಸಿದ್ದ ಇವರು ಸರ್ಕಾರದ ಹೂಡಿಕೆ ತಂತ್ರಗಳು ಮತ್ತು ನಿರ್ಧಾರಗಳ ಉಸ್ತುವಾರಿ.

ವಿವೇಕ್ ಜೋಶಿ: ರಾಜ್ಯ ಹಣಕಾಸು ಸಂಸ್ಥೆಗಳಿಗೆ ಸರ್ಕಾರದ ಸುಧಾರಣಾ ಕಾರ್ಯಸೂಚಿ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳು, ಯೋಜನೆಗಳಿಗೆ ಮಾರ್ಗದರ್ಶಕರಾಗಿರುವ ಇವರು, RBI ಮಂಡಳಿಯ ಸದಸ್ಯರಾಗಿದ್ದಾರೆ. ಈ ಮುಂಚೆ ಭಾರತದ ರೆಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾಗಿದ್ದವರು, ರಾಷ್ಟ್ರೀಯ ಪಂಚಣಿ ವ್ಯವಸ್ಥೆ ಸ್ಥಾಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

Advertisement
Tags :
Budget 2024FINANCE MINISTER NIRMALA SEETHARAMANindiaLatestNewsNewsKannada
Advertisement
Next Article