ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಯಾವ ಮಾಹಿತಿ ಒದಗಿಸಬೇಕೆಂದು ಸ್ಪಷ್ಟವಾಗಿ ಹೇಳಿ: ಸಂಜಯ್ ಕುಮಾರ್ ವರ್ಮಾ

ಖಲಿಸ್ತಾನ್  ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ತನ್ನ ಆರೋಪವನ್ನು ಸಾಬೀತುಪಡಿಸಲು ಪುರಾವೆಗಳನ್ನು ಬಿಡುಗಡೆ ಮಾಡುವಂತೆ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಒತ್ತಾಯಿಸಿದ್ದಾರೆ.
02:43 PM Nov 25, 2023 IST | Ashika S

ದೆಹಲಿ: ಖಲಿಸ್ತಾನ್  ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ತನ್ನ ಆರೋಪವನ್ನು ಸಾಬೀತುಪಡಿಸಲು ಪುರಾವೆಗಳನ್ನು ಬಿಡುಗಡೆ ಮಾಡುವಂತೆ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಒತ್ತಾಯಿಸಿದ್ದಾರೆ.

Advertisement

ಈ ವರ್ಷದ ಆರಂಭದಲ್ಲಿ ನಿಜ್ಜಾರ್ ಹತ್ಯೆಯಲ್ಲಿ ಭಾರತ ಸರ್ಕಾರವು ಭಾಗಿಯಾಗಿರುವ ಸಾಧ್ಯತೆಯಿದೆ ಎಂಬ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪದ ಮೇಲೆ ಭಾರತ ಮತ್ತು ಕೆನಡಾ ಭಾರಿ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದ್ದು ಈ ನಿಟ್ಟಿನಲ್ಲಿ ತನಿಖೆಗೆ ಭಾರತ ಸಹಕಾರ ಒದಗಿಸಬೇಕೆಂದು ಕೆನಡಾ ಹೇಳಿರುವುದಕ್ಕೆ ಪ್ರತಿಯಾಗಿ ಈ ರೀತಿ ಹೇಳಿದ್ದಾರೆ.

ತನಿಖೆ ಪೂರ್ಣಗೊಳ್ಳುವ ಮೊದಲೇ ಭಾರತಕ್ಕೆ ಶಿಕ್ಷೆಯಾಯಿತು. ಅದು ಕಾನೂನಿನ ನಿಯಮವೇ? ಎಂದು ವರ್ಮಾ ಕೇಳಿದ್ದಾರೆ. ಕೆನಡಾ ಅಥವಾ ಅದರ ಮಿತ್ರರಾಷ್ಟ್ರಗಳು ನಿಜ್ಜಾರ್ ಹತ್ಯೆಗೆ ಸಂಬಂಧಿಸಿದ ಸ್ಪಷ್ಟ ಪುರಾವೆಗಳನ್ನು ತೋರಿಸಿಲ್ಲ ಎಂದು ವರ್ಮಾ ಪುನರುಚ್ಚರಿಸಿದ್ದು ತನಿಖೆಯಲ್ಲಿ ಅವರಿಗೆ ಸಹಾಯ ಮಾಡಲು ನಮಗೆ ಈ ಪ್ರಕರಣದಲ್ಲಿ ಯಾವುದೇ ನಿರ್ದಿಷ್ಟ ಅಥವಾ ಸಂಬಂಧಿತ ಮಾಹಿತಿಯನ್ನು ಒದಗಿಸಲಾಗಿಲ್ಲ” ಎಂದು ವರ್ಮಾ ತಿಳಿಸಿದ್ದಾರೆ.

Advertisement

Advertisement
Tags :
LatetsNewsNewsKannadaಉಗ್ರಗಾಮಿಖಲಿಸ್ತಾನ್ನಿಜ್ಜಾರ್ಸಂಜಯ್ ಕುಮಾರ್ ವರ್ಮಾಹತ್ಯೆಹರ್ದೀಪ್ ಸಿಂಗ್ಹೈಕಮಿಷನರ್
Advertisement
Next Article