For the best experience, open
https://m.newskannada.com
on your mobile browser.
Advertisement

ಮಂಗಳೂರು ಉಡುಪಿಯಲ್ಲೂ 60 ದಾಟಿದ ಎಳನೀರು ರೇಟ್

ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ ದಗೆ ಏರುತ್ತಲೇ ಇದ್ದರೆ ಇನ್ನೊಂದೆಡೆ ಬಿಸಿಲ ಬೇಗೆ ತಣಿಸಲುವ ಬೊಂಡ ರೇಟು ಕೂಡ ಏರಿಕೆಯಾಗಿದೆ. 30 ರಿಂದ 35 ಕ್ಕೆ ಸಿಗುತ್ತಿದ್ದ ಬೊಂಡ ಇದೀಗ 60ಕ್ಕೆ ಏರಿಕೆಯಾಗಿದೆ.
03:25 PM May 14, 2024 IST | Ashitha S
ಮಂಗಳೂರು ಉಡುಪಿಯಲ್ಲೂ 60 ದಾಟಿದ ಎಳನೀರು ರೇಟ್

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ ದಗೆ ಏರುತ್ತಲೇ ಇದ್ದರೆ ಇನ್ನೊಂದೆಡೆ ಬಿಸಿಲ ಬೇಗೆ ತಣಿಸಲುವ ಬೊಂಡ ರೇಟು ಕೂಡ ಏರಿಕೆಯಾಗಿದೆ. 30 ರಿಂದ 35 ಕ್ಕೆ ಸಿಗುತ್ತಿದ್ದ ಬೊಂಡ ಇದೀಗ 60ಕ್ಕೆ ಏರಿಕೆಯಾಗಿದೆ.

Advertisement

ಮಂಗಳೂರು ಹಾಗೂ ಉಡುಪಿಯಲ್ಲಿ ಎಳನೀರಿನ ದರ ಸುಮಾರು 60 ರೂ.ಗೆ ಏರಿಕೆಯಾಗಿದೆ. ಈ ಮಧ್ಯೆ, ಪೂರೈಕೆ ಕೊರತೆಯೂ ಉಂಟಾಗಿದೆ. ಸಾಕಷ್ಟು ಪೂರೈಕೆ ಇಲ್ಲದ ಮತ್ತು ಮಾರಾಟ ಹೆಚ್ಚಿರುವ ಕಾರಣ ಬೆಳಗ್ಗೆ 11 ಗಂಟೆ ಸುಮಾರಿಗೆಲ್ಲ ಮಾರುಕಟ್ಟೆಗೆ ಬಂದಿದ್ದ ಎಳನೀರು ಖಾಲಿಯಾಗಿದ್ದು ದಿನದ ವ್ಯಾಪಾರವೇ ಮುಗಿದಿದೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.

ಎಳನೀರಿನ ಬೆಲೆಯಲ್ಲಿ ಈ ಮಟ್ಟದ ಏರಿಕೆ ಇದೇ ಮೊದಲು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಮಂಗಳೂರು, ಉಡುಪಿಯಲ್ಲಿ ಎಳನೀರಿನ ದರ 30 ರಿಂದ 35 ರೂ.ಗಳ ಆಸುಪಾಸಿನಲ್ಲಿರುತ್ತದೆ. ಪ್ರಸ್ತುತ, ಕುಂದಾಪುರ ಮತ್ತು ಉಡುಪಿಯಲ್ಲಿ ಎಳನೀರಿಗೆ 60 ರೂ. ಇದ್ದರೆ, ಮಂಗಳೂರಿನಲ್ಲಿ 50 ರಿಂದ 55 ರೂ.ಗೆ ಮಾರಾಟವಾಗುತ್ತಿದೆ. ಎಳನೀರು ದುಬಾರಿಯಾಗಿರುವುದು ಮತ್ತು ಪೂರೈಕೆ ಕೊರತೆಯ ಪರಿಣಾಮವಾಗಿ ಅನೇಕ ಗ್ರಾಹಕರು ಪರ್ಯಾಯವಾಗಿ ಕಬ್ಬಿನ ಜ್ಯೂಸ್ ಆರಿಸಿಕೊಳ್ಳುತ್ತಿದ್ದಾರೆ.

Advertisement

ವ್ಯಾಪಾರಿಗಳಿಗೆ ಲಾಭ?
ಕಡೂರು, ಬೀರೂರು, ಹಾಸನ ಕಡೆಯಿಂದ ಬಸ್‌ ಅಪ್ ವಾಹನದಲ್ಲಿ ಬಳಸಿದು ತಂದು ಉಡುಪಿ ಜಿಲ್ಲೆಯ ಅಂಗಗಳಿಗೆ ಪೂರೈಸು ಅರಸರಿಗೆ ಕೇವಲ 30ರಿಂದ 35 ರೂ. ನೀಡಲಾಗುತ್ತಿದೆ.

Advertisement
Tags :
Advertisement