ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತದ ಈಶಾನ್ಯ ಗಡಿಯಲ್ಲಿ ಉದ್ವಿಗ್ನತೆ: ಮಯನ್ಮಾರ್ ಬಂಡುಕೋರರಿಂದ ದಾಳಿ

ಮಯನ್ಮಾರ್‌ನಲ್ಲಿ ಬಂಡಾಯ ಹೋರಾಟಗಾರರು ಸೇನಾ ಆಡಳಿತದ ವಿರುದ್ಧ ದಾಳಿ ನಡೆಸುತ್ತಿದ್ದು, ಸೇನೆಯ ಅಧಿಕಾರಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ. ಇದರಿಂದಾಗಿ ಈಶಾನ್ಯ ಭಾರತದ ರಾಜ್ಯಗಳ ಜನರು ಗಡಿ ಪ್ರದೇಶಗಳಿಗೂ ಉದ್ವಿಗ್ನತೆ ಹರಡಿದರೆ ಎಂದು ಆತಂಕ ಪಡುತ್ತಿದ್ದಾರೆ. ಭಾರತ ತನ್ನ ನೆರೆಯ ಮಯನ್ಮಾರ್‌ ನಲ್ಲಿ ಹೆಚ್ಚುತ್ತಿರುವ ದ ತ್ರೀ ಬ್ರದರ್‌ಹುಡ್ ಅಲಯನ್ಸ್ (3ಬಿಎಚ್ಎ) ದಾಳಿಗಳ ಕುರಿತು ಸೂಕ್ಷ್ಮವಾದ ಕಣ್ಣಿಟ್ಟಿದೆ.
08:34 PM Nov 24, 2023 IST | Ashitha S

ಮಯನ್ಮಾರ್‌ನಲ್ಲಿ ಬಂಡಾಯ ಹೋರಾಟಗಾರರು ಸೇನಾ ಆಡಳಿತದ ವಿರುದ್ಧ ದಾಳಿ ನಡೆಸುತ್ತಿದ್ದು, ಸೇನೆಯ ಅಧಿಕಾರಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ. ಇದರಿಂದಾಗಿ ಈಶಾನ್ಯ ಭಾರತದ ರಾಜ್ಯಗಳ ಜನರು ಗಡಿ ಪ್ರದೇಶಗಳಿಗೂ ಉದ್ವಿಗ್ನತೆ ಹರಡಿದರೆ ಎಂದು ಆತಂಕ ಪಡುತ್ತಿದ್ದಾರೆ. ಭಾರತ ತನ್ನ ನೆರೆಯ ಮಯನ್ಮಾರ್‌ ನಲ್ಲಿ ಹೆಚ್ಚುತ್ತಿರುವ ದ ತ್ರೀ ಬ್ರದರ್‌ಹುಡ್ ಅಲಯನ್ಸ್ (3ಬಿಎಚ್ಎ) ದಾಳಿಗಳ ಕುರಿತು ಸೂಕ್ಷ್ಮವಾದ ಕಣ್ಣಿಟ್ಟಿದೆ.

Advertisement

ತ್ರೀ ಬ್ರದರ್‌ಹುಡ್ ಅಲಯನ್ಸ್ (3ಬಿಎಚ್ಎ) ಎನ್ನುವುದು ಮಯನ್ಮಾರಿನ ಮೂರು ಪ್ರತ್ಯೇಕತಾವಾದಿ ಸಂಘಟನೆಗಳ ಒಕ್ಕೂಟವಾಗಿದೆ. ಈ ಒಕ್ಕೂಟ ಕಚಿನ್ ಇಂಡಿಪೆಂಡೆನ್ಸ್ ಆರ್ಮಿ (ಕೆಐಎ), ಅರಾಕನ್ ಆರ್ಮಿ (ಎಎ), ಹಾಗೂ ತಾಂಗ್ ನ್ಯಾಷನಲ್ ಲಿಬರೇಶನ್ ಆರ್ಮಿ (ಟಿಎನ್ಎಲ್ಎ) ಎಂಬ ಮೂರು ಸಂಘಟನೆಗಳನ್ನು ಒಳಗೊಂಡಿದೆ.

ಇನ್ನು ಭಾರತ ಪ್ರಸ್ತುತ ಮಯನ್ಮಾರ್ ಜೊತೆ ಗಡಿ ಹಂಚಿಕೊಂಡಿರುವ ತನ್ನ ರಾಜ್ಯಗಳಾದ ಮಣಿಪುರ ಮತ್ತು ಮಿಜೋರಾಂಗಳ ಸುರಕ್ಷತೆಯ ಕುರಿತು ಹೆಚ್ಚಿನ ಚಿಂತೆಗೊಳಗಾಗಿದೆ. ಅಕ್ಟೋಬರ್ 27ರಂದು, 3ಬಿಎಚ್ಎ ಮಯನ್ಮಾರ್ ಉತ್ತರದಲ್ಲಿರುವ ಶಾನ್ ಸ್ಟೇಟ್‌ನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು.

Advertisement

ಪ್ರಸ್ತುತ ದಾಳಿಯನ್ನು ‘ಆಪರೇಶನ್ 1027’ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದು ದಿನೇ ದಿನೇ ವ್ಯಾಪಕಗೊಳ್ಳುತ್ತಿದೆ. ಇದು ಈಗಾಗಲೇ 135 ಮಿಲಿಟರಿ ತಾಣಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಇನ್ನು ಭಾರತ ಈ ಹಿಂಸಾಚಾರಗಳು ಕೊನೆಯಾಗಬೇಕೆಂದು ಆಗ್ರಹಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗ್ಚಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ನಾವು ಮಯನ್ಮಾರ್‌ನಲ್ಲಿ ಶಾಂತಿ, ಸ್ಥಿರತೆ ಹಾಗೂ ಪ್ರಜಾಪ್ರಭುತ್ವ ಮರಳಬೇಕೆಂದು ಆಗ್ರಹಿಸುತ್ತಿದ್ದೇವೆ” ಎಂದಿದ್ದಾರೆ.

Advertisement
Tags :
indiaLatestNewsNewsKannadaನವದೆಹಲಿ
Advertisement
Next Article