For the best experience, open
https://m.newskannada.com
on your mobile browser.
Advertisement

ಇರಾನ್-ಇಸ್ರೇಲ್ ಮಧ್ಯೆ ಉದ್ವಿಗ್ನತೆ: ಮತ್ತೆ ಯುದ್ಧ ಆರಂಭದ ಭೀತಿ

ಆರು ತಿಂಗಳ ಮುಂಚೆ ನಡೆದ ಇಸ್ರೇಲ್-ಪ್ಯಾಲೆಸ್ತೈನ್ ನಡುವೆ ನಡೆದ ಭಯಾನಕ ಯುದ್ಧಕ್ಕೆ ಇದೀಗ ಮತ್ತೆ ಬೆಂಕಿ ಹಚ್ಚಲು ಇರಾನ್‌ ದೇಶ ನೋಡುತ್ತಿದೆ.
07:55 AM Apr 13, 2024 IST | Ashika S
ಇರಾನ್ ಇಸ್ರೇಲ್ ಮಧ್ಯೆ ಉದ್ವಿಗ್ನತೆ  ಮತ್ತೆ ಯುದ್ಧ ಆರಂಭದ ಭೀತಿ

ಇಸ್ರೇಲ್: ಆರು ತಿಂಗಳ ಮುಂಚೆ ನಡೆದ ಇಸ್ರೇಲ್-ಪ್ಯಾಲೆಸ್ತೈನ್ ನಡುವೆ ನಡೆದ ಭಯಾನಕ ಯುದ್ಧಕ್ಕೆ ಇದೀಗ ಮತ್ತೆ ಬೆಂಕಿ ಹಚ್ಚಲು ಇರಾನ್‌ ದೇಶ ನೋಡುತ್ತಿದೆ.

Advertisement

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಮತ್ತಷ್ಟು ಭೀಕರ ಸ್ವರೂಪ ಪಡೆಯುತ್ತಿದೆ. ಕಳೆದ ಏಪ್ರಿಲ್ 1 ರಂದು ಸಿರಿಯಾದಲ್ಲಿನ ಇರಾನಿನ ಧೂತವಾಸದ ಮೇಲೆ ನಡೆದ ಮಾರಣಾಂತಿಕ ದಾಳಿಗೆ ಇಸ್ರೇಲ್ ವಿರುದ್ಧ ಇರಾನ್ ಸೇನೆ ಕೆಂಡಕಾರಲು ಶುರುಮಾಡಿದೆ.

ಈ ಬಾಂಬ್​ ದಾಳಿಯಲ್ಲಿ ಇಬ್ಬರು ಸೇನಾ ಮುಖ್ಯಸ್ಥರು ಸೇರಿದಂತೆ ಏಳು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸದಸ್ಯರು ಬಲಿಯಾಗಿದ್ದಾರೆ. ಇದು ಹಿಂಸಾಚಾರ ಉಲ್ಬಣಗೊಳ್ಳುವ ಭಯಕ್ಕೆ ಕಾರಣಗಿದ್ದು, ಬೆನ್ನಲ್ಲೇ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆಯನ್ನು ಇಸ್ರೇಲ್ ನೀಡಿದೆ.

Advertisement

ಮುಂದಿನ ಕೆಲ ಗಂಟೆಗಳಲ್ಲಿ ಅಂದ್ರೆ ಇಂದು ಅಥವಾ ನಾಳೆಯೊಳಗೆ ಇಸ್ರೇಲ್​ ಮೇಲೆ ಇರಾನ್​ ಯುದ್ಧದ ದಾಳಿ ಮಾಡುವ ಸಾಧ್ಯತೆ ಇದೆ ಎಂಬ ಸೂಚನೆ ಸಿಕ್ಕಿದೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಸೂಚನೆಯವರೆಗೆ ಇರಾನ್, ಲೆಬನಾನ್, ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಪ್ರದೇಶಗಳಿಗೆ ಪ್ರಯಾಣಿಸದಂತೆ ಭಾರತವೂ ತನ್ನ ಪ್ರಜೆಗಳಿಗೆ ಸೂಚಿಸಿದೆ. ಫ್ರಾನ್ಸ್, ಭಾರತ, ರಷ್ಯಾ, ಪೋಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವು ದೇಶಗಳು ಇದೇ ಸೂಚನೆಯನ್ನ ಕೊಟ್ಟಿದೆ.

ಈ ಎರಡು ದೇಶಗಳಲ್ಲಿ ಸದ್ಯ ವಾಸಿಸುತ್ತಿರುವವರು ಭಾರತೀಯ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಿ, ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಎಂದೂ ಸಲಹೆ ನೀಡಿದೆ.

Advertisement
Tags :
Advertisement