For the best experience, open
https://m.newskannada.com
on your mobile browser.
Advertisement

ಪಾಕಿಸ್ತಾನದ ನೌಕಾ ವಾಯುನೆಲೆಯ ಮೇಲೆ ಉಗ್ರದಾಳಿ; ಹೊಣೆ ಹೊತ್ತ ಬಿಎಲ್‌ಎ

ಪಾಕಿಸ್ತಾನದ ಎರಡನೇ ಅತಿದೊಡ್ಡ ನೌಕಾಪಡೆಯ ವಾಯುನೆಲೆಯ ಮೇಲೆ ಉಗ್ರ ದಾಳಿ ನಡೆದಿದ್ದು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಗ್ರೆನೇಡ್‌ಗಳನ್ನು ಬಳಸಿಕೊಂಡು ನಡೆಸಿದ ಸುಸಜ್ಜಿತ ದಾಳಿ ಇದಾಗಿದೆ.
08:00 PM Mar 26, 2024 IST | Maithri S
ಪಾಕಿಸ್ತಾನದ ನೌಕಾ ವಾಯುನೆಲೆಯ ಮೇಲೆ ಉಗ್ರದಾಳಿ  ಹೊಣೆ ಹೊತ್ತ ಬಿಎಲ್‌ಎ

ಇಸ್ಲಾಮಾಬಾದ್:‌ ಪಾಕಿಸ್ತಾನದ ಎರಡನೇ ಅತಿದೊಡ್ಡ ನೌಕಾಪಡೆಯ ವಾಯುನೆಲೆಯ ಮೇಲೆ ಉಗ್ರ ದಾಳಿ ನಡೆದಿದ್ದು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಗ್ರೆನೇಡ್‌ಗಳನ್ನು ಬಳಸಿಕೊಂಡು ನಡೆಸಿದ ಸುಸಜ್ಜಿತ ದಾಳಿ ಇದಾಗಿದೆ.

Advertisement

ಪಾಕಿಸ್ತಾನದ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ನಾಲ್ವರು ಉಗ್ರರನ್ನು ಹತ್ಯೆಗೈದಿದ್ದಾರೆ. ನಂತರ ದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪಾಕಿಸ್ತಾನದ ಈ ನೌಕಾ ನೆಲೆಯಲ್ಲಿ ಚೀನಾದ ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿದೆ.

ಮೂಲಗಳ ಪ್ರಕಾರ ಈ ದಾಳಿಯಲ್ಲಿ ಆರು ಭಯೋತ್ಪಾದಕರು ಭಾಗಿಯಾಗಿದ್ದು, ನಾಲ್ವರು ಹತರಾಗಿ ಇಬ್ಬರು ತಪ್ಪಿಸಿಕೊಂಡಿದ್ದಾರೆ.

Advertisement

ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಬೇಡಿಕೆ ಇಡುತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

Advertisement
Tags :
Advertisement