For the best experience, open
https://m.newskannada.com
on your mobile browser.
Advertisement

ಮಾಸ್ಕೋದಲ್ಲಿ ಉಗ್ರರ ಅಟ್ಟಹಾಸ : 150ಕ್ಕೂ ಅಧಿಕ ಮೃತದೇಹಗಳು ಪತ್ತೆ

ಮಾಸ್ಕೋದಲ್ಲಿ ಉಗ್ರರ ಹಟ್ಟಹಾಸ ಮಿತಿ ಮೀರಿದ್ದು 150ಕ್ಕೂ ಅಧಿಕ ಮೃತದೇಹಗಳು ಈಗಾಗಲೇ ಪತ್ತೆಯಾಗಿದೆ ಹಾಗೂ 107 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.28 ಮಂದಿಯ ಶವ ಶೌಚಾಲಯದಲ್ಲಿ ಪತ್ತೆಯಾಗಿದೆ. 14 ಮೃತ ದೇಹಗಳು ಮೆಟ್ಟಿಲುಗಳ ಮೇಲೆ ಬಿದ್ದಿರುವುದು ಕಂಡುಬಂದಿದೆ. ಇದೀಗ 4 ಬಂದೂಕುಧಾರಿಗಳು ಸೇರಿದಂತೆ 11 ಜನರನ್ನು ವಶಕ್ಕೆ ಪಡೆಯುವಲ್ಲಿ ಮಾಸ್ಕೋ ಪೊಲೀಸರು ಯಶಸ್ವಿಯಾಗಿದ್ದಾರೆ.
02:19 PM Mar 24, 2024 IST | Nisarga K
ಮಾಸ್ಕೋದಲ್ಲಿ ಉಗ್ರರ ಅಟ್ಟಹಾಸ   150ಕ್ಕೂ ಅಧಿಕ ಮೃತದೇಹಗಳು ಪತ್ತೆ
ಮಾಸ್ಕೋದಲ್ಲಿ ಉಗ್ರರ ಹಟ್ಟಹಾಸ : 150ಕ್ಕೂ ಅಧಿಕ ಮೃತದೇಹಗಳು ಪತ್ತೆ

ರಷ್ಯಾ: ಮಾಸ್ಕೋದಲ್ಲಿ ಉಗ್ರರ ಹಟ್ಟಹಾಸ ಮಿತಿ ಮೀರಿದ್ದು 150ಕ್ಕೂ ಅಧಿಕ ಮೃತದೇಹಗಳು ಈಗಾಗಲೇ ಪತ್ತೆಯಾಗಿದೆ ಹಾಗೂ 107 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.28 ಮಂದಿಯ ಶವ ಶೌಚಾಲಯದಲ್ಲಿ ಪತ್ತೆಯಾಗಿದೆ. 14 ಮೃತ ದೇಹಗಳು ಮೆಟ್ಟಿಲುಗಳ ಮೇಲೆ ಬಿದ್ದಿರುವುದು ಕಂಡುಬಂದಿದೆ. ಇದೀಗ 4 ಬಂದೂಕುಧಾರಿಗಳು ಸೇರಿದಂತೆ 11 ಜನರನ್ನು ವಶಕ್ಕೆ ಪಡೆಯುವಲ್ಲಿ ಮಾಸ್ಕೋ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ದಾಳಿ ನಡೆದ 24 ಗಂಟೆಗಳ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಪತ್ರಿಕಾಗೋಷ್ಠಿ ನಡೆಸಿ ಶತ್ರುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಯಾರೇನು ಮಾಡಿದರೂ ರಷ್ಯಾವನ್ನು ವಿಭಜಿಸಲು ಸಾಧ್ಯವಾಗುವುದಿಲ್ಲ. ರಷ್ಯಾದ ಭದ್ರತಾ ಮುಖ್ಯಸ್ಥರು ತಮ್ಮ ತಂಡವು ಬಿಳಿ ಕಾರಿನಲ್ಲಿ ಪರಾರಿಯಾಗುತ್ತಿದ್ದ 4 ಶಂಕಿತರನ್ನು ಹಿಡಿದಿದೆ.

ಅಲ್ಲದೇ ಭಯಾನಕ ವಿಡಿಯೋ ಒಂದು ವೈರಲ್‌ ಆಗಿದ್ದು ಭಯೋತ್ಪಾದಕನೊಬ್ಬ ಗಾಯಗೊಂಡ ವ್ಯಕ್ತಿಯ ಕತ್ತು ಸೀಳುತ್ತಿರುವುದು ಕಂಡುಬಂದಿದೆ. ಈ ಭಯಾನಕ ದೃಶ್ಯ ಸಭಾಂಗಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

ಇಷ್ಟೆ ಅಲ್ಲ, ಇದ್ದಕಿದ್ದಂತೆ ಕನ್ಸರ್ಟ್‌ ಹಾಲ್‌ ಪ್ರವೇಶಿದ ಉಗ್ರರು,ಪೆಟ್ರೋಲ್ ಬಳಸಿ ಸ್ಫೋಟಿಸಿ ಬೆಂಕಿ ಹಚ್ಚಿದ್ದರು.ಅಲ್ಲದೇ ಪೆಟ್ರೋಲ್ ಬಾಂಬ್ ಎಸೆದು ಮನಬಂದಂತೆ ಗುಂಡು ಹಾರಿಸಿದ್ದಾರೆ.ಇದಾದ ಸ್ವಲ್ಪ ಸಮಯದಲ್ಲೆ ರಾಶಿ ರಾಶಿ ಮೃತದೇಹಗಳು ಉರುಳಿವೆ. 5 ಮಂದಿ ದಾಳಿಕೋರರಿದ್ದು, ಅವರು ಸೇನಾ ಸಮವಸ್ತ್ರ ಧರಿಸಿದ್ದರು ಎಂದು ಹೇಳಲಾಗಿದೆ.

Advertisement
Tags :
Advertisement