ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರು ರಸ್ತೆಯಲ್ಲಿ ಕಾಣಿಸಿಕೊಂಡ ಟೆಸ್ಲಾ ಕಾರು: ಫೋಟೊ ವೈರಲ್

ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಟೆಸ್ಲಾ ಕಾರು, ಭಾರತಕ್ಕೆ ಬರುವ ಬಗ್ಗೆ ಊಹಾಪೋಹಗಳಿವೆ. ಭಾರತದಲ್ಲಿ ಟೆಸ್ಲಾ ಕಾರು ಬಂದರು, ಅಮೆರಿಕದಂತೆ ಸ್ವಯಂಚಾಲಿತ ವಾಹನವಾಗಿರದೆ, ಚಾಲಕ ಸಹಿತ ಕಾರು ಬಿಡುಗಡೆ ಮಾಡುವುದಾಗಿ ಟೆಸ್ಲಾ ಹೇಳಿದೆ.
10:28 PM Jan 01, 2024 IST | Ashika S

ಬೆಂಗಳೂರು: ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಟೆಸ್ಲಾ ಕಾರು, ಭಾರತಕ್ಕೆ ಬರುವ ಬಗ್ಗೆ ಊಹಾಪೋಹಗಳಿವೆ. ಭಾರತದಲ್ಲಿ ಟೆಸ್ಲಾ ಕಾರು ಬಂದರು, ಅಮೆರಿಕದಂತೆ ಸ್ವಯಂಚಾಲಿತ ವಾಹನವಾಗಿರದೆ, ಚಾಲಕ ಸಹಿತ ಕಾರು ಬಿಡುಗಡೆ ಮಾಡುವುದಾಗಿ ಟೆಸ್ಲಾ ಹೇಳಿದೆ.

Advertisement

ಟೆಸ್ಲಾ ಕಾರು ಉತ್ಪಾದನ ಘಟಕ ಭಾರತಕ್ಕೆ ಬರುವ ಸುದ್ದಿಯ ನಡುವೆಯೇ ಬೆಂಗಳೂರಿನ ರಸ್ತೆಯಲ್ಲಿ ಟೆಸ್ಲಾ ಕಾರೊಂದು ಕಾಣಿಸಿಕೊಂಡಿದ್ದು, ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

ಬೆಂಗಳೂರಿನ ರಸ್ತೆಯೊಂದರಲ್ಲಿ ಕೆಂಪು ಟೆಸ್ಲಾ ಮಾಡೆಲ್ ಎಕ್ಸ್ ಎಸ್‌ಯುವಿ ಕಂಡುಬಂದಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪವಿರುವ ಮಿನ್ಸ್ಕ್ ಸ್ಕ್ವೇರ್ ಬಳಿ ಟೆಸ್ಲಾ ಕಾರು ಚಲಿಸುವಾಗಿ ಫೋಟೊಗಳನ್ನು ಕ್ಲಿಕ್ಕಿಸಲಾಗಿದೆ.

Advertisement

ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿವೆ. ಹಲವಾರು ಬಳಕೆದಾರರು ಕಾರಿನ ಬಗ್ಗೆ ಮರುಟ್ವೀಟ್ ಮತ್ತು ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಇದು ದುಬೈನಲ್ಲಿ ನೋಂದಾಯಿಸಲಾದ "ಖಾಸಗಿ ಕಾರು" ಎಂದು ಊಹಿಸಿದ್ದಾರೆ.

"ಅದು ಕಾರ್ನೆಟ್‌ನಲ್ಲಿ ದುಬೈ ನೋಂದಾಯಿತ ಟೆಸ್ಲಾ. ಕೇರಳಕ್ಕೆ ಬನ್ನಿ, ಇಲ್ಲಿ ತುಂಬಾ ಸಾಮಾನ್ಯವಾಗಿದೆ." ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Advertisement
Tags :
LatetsNewsNewsKannadaಅಮೆರಿಕಕಾರುಟೆಸ್ಲಾಭಾರತ
Advertisement
Next Article