For the best experience, open
https://m.newskannada.com
on your mobile browser.
Advertisement

ಫೇಸ್​ಬುಕ್​ ಲೈವ್​ನಲ್ಲಿ ಠಾಕ್ರೆ ಬಣದ ನಾಯಕನ ಹತ್ಯೆ

ಫೇಸ್​ಬುಕ್​ ಲೈವ್​ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕನನ್ನು ಹತ್ಯೆ ಮಾಡಿ ಆರೋಪಿ ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಡೆದಿದೆ.
09:54 AM Feb 09, 2024 IST | Ashika S
ಫೇಸ್​ಬುಕ್​ ಲೈವ್​ನಲ್ಲಿ ಠಾಕ್ರೆ ಬಣದ ನಾಯಕನ ಹತ್ಯೆ

ಮಹಾರಾಷ್ಟ್ರ: ಫೇಸ್​ಬುಕ್​ ಲೈವ್​ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕನನ್ನು ಹತ್ಯೆ ಮಾಡಿ ಆರೋಪಿ ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಡೆದಿದೆ.

Advertisement

ಶಿವಸೇನೆ  ನಾಯಕ ಅಭಿಷೇಕ್ ಘೋಸಲ್ಕರ್ ಅವರನ್ನು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮೌರಿಸ್ ನೊರೊನ್ಹಾ ಅವರು ಫೇಸ್‌ಬುಕ್ ಲೈವ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಇದಾದ ಬಳಿಕ ನೊರೊನ್ಹಾ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಘಟನೆಯ ಫೇಸ್‌ಬುಕ್ ಲೈವ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಅಭಿಷೇಕ್ ಹೊಟ್ಟೆ ಮತ್ತು ಭುಜಕ್ಕೆ ಗುಂಡು ಹಾರಿಸಿರುವುದನ್ನು ಕಾಣಬಹುದು. ಘೋಸಲ್ಕರ್ ಮತ್ತು ನೊರೊನ್ಹಾ ನಡುವೆ ಪರಸ್ಪರ ದ್ವೇಷವಿತ್ತು ಎಂದು ಹೇಳಲಾಗಿದೆ.

ಈ  ಪ್ರಕರಣದ ತನಿಖೆಯನ್ನು ಮುಂಬೈ ಕ್ರೈಂ ಬ್ರಾಂಚ್‌ಗೆ ವಹಿಸಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821

Advertisement
Tags :
Advertisement