For the best experience, open
https://m.newskannada.com
on your mobile browser.
Advertisement

ಥಾಯ್ಲೆಂಡ್‌ ಓಪನ್‌ ಟೂರ್ನಿ : ಗೆಲುವಿನ ಭರವಸೆಯಲ್ಲಿ ಸಾತ್ವಿಕ್-ಚಿರಾಗ್ ಜೋಡಿ

ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿ ಇಂದು(ಮಂಗಳವಾರ) ಆರಂಭಗೊಳ್ಳಲಿದ್ದು ಲಕ್ಷ್ಯ ಸೇನ್‌ ಮತ್ತು ಪಿ.ವಿ. ಸಿಂಧು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇತ್ತ ಸಾತ್ವಿಕ್-ಚಿರಾಗ್ ಜೋಡಿ ಗೆಲುವಿನ ಭರವಸೆಯಲ್ಲಿ ಸಿದ್ಧತೆ ನಡೆಸಿದ್ದಾರೆ.
10:15 AM May 14, 2024 IST | Nisarga K
ಥಾಯ್ಲೆಂಡ್‌ ಓಪನ್‌ ಟೂರ್ನಿ   ಗೆಲುವಿನ ಭರವಸೆಯಲ್ಲಿ ಸಾತ್ವಿಕ್ ಚಿರಾಗ್ ಜೋಡಿ
ಥಾಯ್ಲೆಂಡ್‌ ಓಪನ್‌ ಟೂರ್ನಿ : ಗೆಲುವಿನ ಭರವಸೆಯಲ್ಲಿ ಸಾತ್ವಿಕ್-ಚಿರಾಗ್ ಜೋಡಿ

ಬ್ಯಾಂಕಾಕ್‌: ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿ ಇಂದು(ಮಂಗಳವಾರ) ಆರಂಭಗೊಳ್ಳಲಿದ್ದು ಲಕ್ಷ್ಯ ಸೇನ್‌ ಮತ್ತು ಪಿ.ವಿ. ಸಿಂಧು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇತ್ತ ಸಾತ್ವಿಕ್-ಚಿರಾಗ್ ಜೋಡಿ ಗೆಲುವಿನ ಭರವಸೆಯಲ್ಲಿ ಸಿದ್ಧತೆ ನಡೆಸಿದ್ದಾರೆ.

Advertisement

ಚಿರಾಗ್​ ಮತ್ತು ಸಾತ್ವಿಕ್‌ ಮಲೇಷ್ಯಾದ ನೂರ್‌ ಮೊಹಮ್ಮದ್‌ ಅಝ್ರೀನ್‌ ಅಯೂಬ್‌ ಅಝ್ರೀನ್‌-ಟಾನ್‌ ವೀ ಕಿಯೋಂಗ್‌ ವಿರುದ್ಧ ಆಡಲಿದ್ದಾರೆ. ಥಾಮಸ್‌ ಕಪ್‌ನಲ್ಲಿ ಭಾರತೀಯ ಜೋಡಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫ‌ಲರಾಗಿದ್ದರು. ಇದೀಗ ಥಾಯ್ಲೆಂಡ್‌ ಟೂರ್ನಿಯಲ್ಲಿ ತಮ್ಮ ಹಿಂದಿನ ಲಯಕ್ಕೆ ಮರಳಿ ಇದೇ ಜುಲೈನಲ್ಲಿ ಪ್ಯಾರಿಸ್​ ಒಲಿಂಪಿಕ್ಸ್ ನಡೆಯಲಿದ್ದು ಇದಕ್ಕೆ ತಕ್ಕ ಸಿದ್ಧತೆ ನಡೆಸಬೇಕಾಗಿದೆ.

ಸಿಂಧು ಅನುಪಸ್ಥಿತಿಯಲ್ಲಿ, ಅಶ್ಮಿತಾ ಚಲಿಹಾ, ಮಾಳವಿಕಾ ಬನ್ಸೋಡ್ ಮತ್ತು ಆಕರ್ಷಿ ಕಶ್ಯಪ್ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ಮಾಳವಿಕಾ ಅಗ್ರ ಶ್ರೇಯಾಂಕದ ಚೀನಾದ ಹಾನ್ ಯುಯೆ ಮತ್ತು ಆಕರ್ಷಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೆಣಸಾಡಲಿದ್ದಾರೆ.

Advertisement

Advertisement
Tags :
Advertisement