For the best experience, open
https://m.newskannada.com
on your mobile browser.
Advertisement

ಬಿಗ್‌ ಬಾಸ್‌ ಬೆಂಕಿಯ ಖಡಕ್‌ ಪೊಲೀಸ್‌ ಅವತಾರ

ಬಿಗ್‌ ಬಾಸ್‌ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ತನಿಷಾ ಕುಪ್ಪಂಡ ಈಗ ಒಂದು ಹೊಸ ಲುಕ್‌ ಮೂಲಕ ಕಾಣಿಸಿಕೊಂಡಿದ್ದಾರೆ. ಬಿಗ್‌ ಬಾಸ್‌ ನಲ್ಲಿ ತನ್ನ ಖಡಕ್‌ ಮಾತುಗಳಿಂದ ಬೆಂಕಿ ಎಂದೇ ಫೇಮಸ್‌ ಆಗಿದ್ದಾರೆ. ಬಿಗ್‌ ಬಾಸ್‌ ಬಳಿಕ ಅವರಿಗೆ ಒಂದರಮೇಲೊಂದು ಬೇಡಿಕೆಗಳು ಬರುತ್ತಿವೆ.
05:43 PM Mar 16, 2024 IST | Nisarga K
ಬಿಗ್‌ ಬಾಸ್‌ ಬೆಂಕಿಯ  ಖಡಕ್‌  ಪೊಲೀಸ್‌ ಅವತಾರ
ಬಿಗ್‌ ಬಾಸ್‌ ಬೆಂಕಿಯ ಖಡಕ್‌ ಪೊಲೀಸ್‌ ಅವತಾರ

ಬಿಗ್‌ ಬಾಸ್‌ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ತನಿಷಾ ಕುಪ್ಪಂಡ ಈಗ ಒಂದು ಹೊಸ ಲುಕ್‌ ಮೂಲಕ ಕಾಣಿಸಿಕೊಂಡಿದ್ದಾರೆ. ಬಿಗ್‌ ಬಾಸ್‌ ನಲ್ಲಿ ತನ್ನ ಖಡಕ್‌ ಮಾತುಗಳಿಂದ ಬೆಂಕಿ ಎಂದೇ ಫೇಮಸ್‌ ಆಗಿದ್ದಾರೆ. ಬಿಗ್‌ ಬಾಸ್‌ ಬಳಿಕ ಅವರಿಗೆ ಒಂದರಮೇಲೊಂದು ಬೇಡಿಕೆಗಳು ಬರುತ್ತಿವೆ.

Advertisement

ತನಿಷಾ ಕುಪ್ಪಂಡ ಅವರು ‘ಶೇರ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಸೆಟ್​ನ ಫೋಟೋಗಳನ್ನು ತನಿಷಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡತಿ ಸಿರೀಯಲ್‌ನ ಹೀರೋ ಕಿರಣ ರಾಜ್‌ ನಟನೆಯ ‘ಶೇರ್​’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ.

Advertisement

ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ತನಿಷಾ ನಿಮ್ಮ ಶತ್ರುವಿಗಾಗಿ ನೀವು ಹೊತ್ತಿಸುವ ಬೆಂಕಿಯು ಅವರಿಗಿಂತ ಹೆಚ್ಚಾಗಿ ನಿಮ್ಮನ್ನು ಸುಡುತ್ತದೆ ಎಂದು ನಟಿ ಕ್ಯಾಪ್ಷನ್‌ ನೀಡಿದ್ದಾರೆ. ಹಾಗೂ ಅವರ ಫೊಟೊಗಳನ್ನ ನೋಡಿ ನೆಟ್ಟಿಗರು ಕಮೆಂಟ್ಸ್‌ ಮಾಡಿದ್ದು ಅವರ ಖಡಕ್‌ ಪೊಲೀಸ್‌ ಗೆಟಪ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ.

Advertisement
Tags :
Advertisement