ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜೆರೋಸಾ ಸ್ಕೂಲ್ ವಿವಾದ: ಜಿಲ್ಲಾಡಳಿತದ ಕ್ರಮ ಖಂಡಿಸಿ ವಿಹೆಚ್‌ಪಿಯಿಂದ ಫೆ.19ರಂದು ಪ್ರತಿಭಟನೆ

ಮಂಗಳೂರು ಜೆರೋಸಾ ಸ್ಕೂಲ್ ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್‌ವೆಲ್, ಶಾಸಕರುಗಳಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಮತ್ತು ಪಾಲಿಕೆ ಸದಸ್ಯರುಗಳ ಮೇಲೆ ಕೇಸು ದಾಖಲಿಸಿದ ಜಿಲ್ಲಾಡಳಿತದ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.
05:22 PM Feb 15, 2024 IST | Gayathri SG

ಮಂಗಳೂರು: ಮಂಗಳೂರು ಜೆರೋಸಾ ಸ್ಕೂಲ್ ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್‌ವೆಲ್, ಶಾಸಕರುಗಳಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಮತ್ತು ಪಾಲಿಕೆ ಸದಸ್ಯರುಗಳ ಮೇಲೆ ಕೇಸು ದಾಖಲಿಸಿದ ಜಿಲ್ಲಾಡಳಿತದ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.

Advertisement

ಈ ಬಗ್ಗೆ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಹೆಚ್‌ಪಿ ಜಿಲ್ಲಾಧ್ಯಕ್ಷ ಎಚ್‌ಕೆ ಪುರುಷೋತ್ತಮ ಜಿಲ್ಲಾಡಳಿತದ ಈ ಕ್ರಮವನ್ನು ಖಂಡಿಸಿ ಫೆಬ್ರವರಿ 19 ರಂದು ನಗರದ ಎಲ್ಲಾ ಪೊಲೀಸ್ ಠಾಣೆಗಳ ಎದುರು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಂತ ಜೆರೆಸೋ ಸ್ಕೂಲ್‌ನಲ್ಲಿ ಶಿಕ್ಷಕಿ ಸಿಸ್ಟರ್ ಪ್ರಭಾ ಶ್ರೀ ರಾಮದೇವರನ್ನು ನಿಂದಿಸಿ ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ದರಿಂದ ಪೋಷಕರು ಶಾಸಕರು ಶಾಲೆಗೆ ಹೋಗಿ ಅರೋಪಿತ ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಈ ಸಂದರ್ಭ ಮಕ್ಕಳು ಶಾಲೆಯ ಗೇಟಿನ ಹೊರಗಡೆ ಜೈ ಶ್ರೀ ರಾಮ್ ಘೋಷಣೆ ಕೂಗಿದ್ದಾರೆ. ಶ್ರೀ ರಾಮ ಕೋಟ್ಯಾಂತರ ಭಕ್ತರ ಆರಾಧ್ಯ ದೇವರು. ಅಂತಹ ಶ್ರೀ ರಾಮ ದೇವರಿಗೆ ಜೈಕಾರ ಹಾಕಿದ್ದಕ್ಕೆ ಶರಣ್ ಪಂಪ್‌ವೆಲ್, ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆ್ಟ್ಟಿ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲು ಮಾಡಿದ್ದು ಖಂಡನೀಯ ಎಂದರು. ಹಿಂದೂಗಳ ದೇವರನ್ನು ಅವಮಾನ ಮಾಡಿದ್ದ ಶಿಕ್ಷಕಿ ಸಿಸ್ಟರ್ ಪ್ರಭಾ ಮೇಲೆ ದೂರು ಕೊಟ್ಟರೂ ದೂರು ದಾಖಲು ಮಾಡಿಲ್ಲ. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಕೇಸು ದಾಖಲಿಸಿ ಶ್ರೀ ರಾಮ ದೇವರಿಗೆ ಅವಮಾನ ಮಾಡಿರುವುದನ್ನು ಇಂದೂ ಸಮಾಜ ಸಹಿಸಲ್ಲ ಆದ್ದರಿಂದ ಸಿಸ್ಟರ್ ಪ್ರಭಾ ಅವರನ್ನು ಬಂಧಿಸಿ, ಕೇಸು ದಾಖಲಿಸಿ , ಹಿಂದೂ ಪರ ನಾಯಕರ ಕೇಸುಗಳನ್ನು ವಾಪಾಸ್ ಪಡೆಯಬೇಕೆಂದು ಫೆಬ್ರವರಿ 19 ರಂದು ಮಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳ ಎದುರು ಪ್ರತಿಭಟನೆ ನಡೆಯಲಿದೆ ಎಂದರು. ವಿಹೆಚ್‌ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂ ಮೆಂಡನ್, ಭುಜಂಗ ಕುಲಾಲ್, ಮನೋಹರ ಸುವರ್ಣ, ಸಂದೀಪ್ ಸರಿಪಲ್ಲ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Advertisement

Advertisement
Tags :
LatestNewsNewsKannadaVHPಮಂಗಳೂರು
Advertisement
Next Article