For the best experience, open
https://m.newskannada.com
on your mobile browser.
Advertisement

ಹಮಾಸ್‌ ಉಗ್ರನಿಗೆ ತನ್ನನ್ನು ರೇಪ್‌ ಆತುರವಿತ್ತು ಆದರೆ . . : ಹಮಾಸ್‌ ಒತ್ತೆಯಾಳು

ಹಮಾಸ್‌ ಉಗ್ರರಿಂದ ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳು ಮಿಯಾ ಸ್ಕೆಮ್ ತಾನು ಅನುಭವಿಸಿದ    ಹಾರರ್‌ ಸ್ಟೋರಿಯನ್ನು ಬಿಚ್ಚಿಟ್ಟದ್ದಾರೆ.
12:52 PM Jan 02, 2024 IST | Ramya Bolantoor
ಹಮಾಸ್‌ ಉಗ್ರನಿಗೆ ತನ್ನನ್ನು ರೇಪ್‌  ಆತುರವಿತ್ತು ಆದರೆ        ಹಮಾಸ್‌ ಒತ್ತೆಯಾಳು

ಟೆಲ್‌ ಅವಿವ್‌: ಹಮಾಸ್‌ ಉಗ್ರರಿಂದ ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳು ಮಿಯಾ ಸ್ಕೆಮ್ ತಾನು ಅನುಭವಿಸಿದ   ಹಾರರ್‌ ಸ್ಟೋರಿಯನ್ನು ಬಿಚ್ಚಿಟ್ಟದ್ದಾರೆ. ತನ್ನನ್ನು ಒತ್ತೆಯಾಗಿಟ್ಟುಕೊಂಡಿದ್ದ ಹಮಾಸ್‌ ಉಗ್ರನಿಗೆ ತನ್ನ ಮೇಲೆ ಅತ್ಯಾಚಾರ ನಡೆಸುವ ಆತುರವಿತ್ತು, ಆದರೆ ಹಾಗೆ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾಳೆ.

Advertisement

ಮಿಯಾ ಸ್ಕೆಮ್‌ ಇಸ್ರೇಲಿ- ಫ್ರೆಂಚ್‌ ನಾಗರಿಕಳಾಗಿದ್ದು, ಆಕೆಯನ್ನು ಅಕ್ಟೋಬರ್‌ 7ರಂದು ನೋವಾ ಮ್ಯೂಸಿಕ್‌ ಫೆಸ್ಟಿವಲ್‌ನಿಂದ ಅಪಹರಿಸಲಾಗಿತ್ತು. ಮಿಯಾ ಸ್ಕೆಮ್‌ಳನ್ನು ಗಾಜಾದ ನಾಗರಿಕ ಬಡಾವಣೆಯ ಒಂದು ಮನೆಯಲ್ಲಿ ಬಂಧಿಸಿ ಇಟ್ಟಿದ್ದರು. ಆ ಮನೆಯ ಹೊರಭಾಗದಲ್ಲಿ ಉಗ್ರ, ಆತನ ಹೆಂಡತಿ ಹಾಗೂ ಮಕ್ಕಳು ಇದ್ದರು. ಒಳಗೆ ಕತ್ತಲಿನ ಕೋಣೆಯಲ್ಲಿ ಮಿಯಾ ಸ್ಕೆಮ್‌ಳನ್ನು ಕೂಡಿಹಾಕಲಾಗಿತ್ತು. ಜೊತೆಗೆ ಆತನ ಹೆಂಡತಿ ಮಕ್ಕಳಿದ್ದ ಕಾರಣಕ್ಕೆ ಆತ ತನ್ನನ್ನು ಅತ್ಯಾಚಾರ ಮಾಡಲಿಲ್ಲ.

ಆಕೆಯ ತೋಳಿಗೆ ಗುಂಡಿಟ್ಟ ಉಗ್ರರು ಆಕೆಯ ಕಾರನ್ನು ಸುಟ್ಟುಹಾಕಿದ್ದರು. ಗಾಜಾದ ಹಮಾಸ್‌ ಉಗ್ರನ ಮನೆಯಲ್ಲಿ ಆಕೆಯನ್ನು ಒತ್ತೆಯಾಳಾಗಿಟ್ಟಿದ್ದು, ಆಕೆ ಹೊರಗೆ ಕಾಣಿಸಿಕೊಳ್ಳುವಂತಿರಲಿಲ್ಲ. ಆತ ನಿರಂತರ ಆಕೆಯನ್ನು ಗಮನಿಸುತ್ತಿದ್ದ. ಆತನ ಹೆಂಡತಿ ಕೂಡ ಆಕೆಯನ್ನು ಕ್ರೂರವಾಗಿ ನಡೆಸಿಕೊಂಡಿದ್ದಳು ಎಂದು ಮಿಯಾ ಹೇಳಿದ್ದಾಳೆ.

Advertisement

ಈ ಕುಟುಂಬ ಕೂಡ ಹಮಾಸ್‌ ಉಗ್ರರ ಜೊತೆಗೆ ಕೈಜೋಡಿಸಿತ್ತು. ನಾನೇಕೆ ಫ್ಯಾಮಿಲಿಯ ಜೊತೆಗೆ ಇದ್ದೇನೆ ಎಂಬುದು ನನಗೆ ಮೊದಲು ಆಶ್ಚರ್ಯ ಉಂಟುಮಾಡಿತ್ತು. ನಂತರ ಅವರೂ ಹಮಾಸ್‌ ಜೊತೆಗೆ ಶಾಮೀಲಾಗಿದ್ದಾರೆ ಎಂದು ತಿಳಿಯಿತು. ಅಲ್ಲಿರುವ ಎಲ್ಲರೂ ಭಯೋತ್ಪಾದಕರೇ, ಬೇರೇನಲ್ಲ” ಎಂದು ಮಿಯಾ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ.

Advertisement
Tags :
Advertisement