For the best experience, open
https://m.newskannada.com
on your mobile browser.
Advertisement

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ‌ಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.
07:22 PM May 19, 2024 IST | Ashika S
ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ತೆಹ್ರಾನ್: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ‌ ಅಪಘಾತಕ್ಕೀಡಾಗಿದೆ.

Advertisement

ಅಪಘಾತದಲ್ಲಿ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ ಎನ್ನಲಾಗುತ್ತಿದೆ.

ಹೆಲಿಕಾಪ್ಟರ್‌ನಲ್ಲಿದ್ದ ಅಧ್ಯಕ್ಷರ ಕೆಲವು ಸಹಚರರು, ಕೇಂದ್ರ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅಧ್ಯಕ್ಷರ ಬೆಂಗಾವಲು ಪಡೆ ಮೂರು ಹೆಲಿಕಾಪ್ಟರ್‌ಗಳನ್ನು ಒಳಗೊಂಡಿತ್ತು.

Advertisement

ಈ ಪೈಕಿ ಎರಡು ಹೆಲಿಕಾಪ್ಟರ್‌ಗಳು ವಿವಿಧ ಸಚಿವರು ಮತ್ತು ಅಧಿಕಾರಿಗಳನ್ನು ಹೊತ್ತು ತಮ್ಮ ಗಮ್ಯಸ್ಥಾನವನ್ನು ಯಶಸ್ವಿಯಾಗಿ ತಲುಪಿವೆ. ಆದರೆ ಅಧ್ಯಕ್ಷ ರೈಸಿ ಅವರನ್ನು ಹೊತ್ತ ಹೆಲಿಕಾಪ್ಟರ್ ತೊಂದರೆ ಎದುರಿಸಿತು.

ಅಧ್ಯಕ್ಷ ರೈಸಿ ಅವರ ಜೊತೆ ವಿದೇಶಾಂಗ ಸಚಿವ ಹೊಸೈನ್ ಅಮಿರಬ್ದೊಲ್ಲಾಹಿಯಾನ್ ಕೂಡ ಇದ್ದರು ಎನ್ನಲಾಗಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ.

ಪ್ರಯಾಣಿಕರ ಸ್ಥಿತಿಯ ಕುರಿತು ಹೆಚ್ಚಿನ ವಿವರ ಇನ್ನೂ ಬಹಿರಂಗವಾಗಿಲ್ಲ.

Advertisement
Tags :
Advertisement