For the best experience, open
https://m.newskannada.com
on your mobile browser.
Advertisement

ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ

ತಾಳಿ ಕಟ್ಟಿದ ಪತಿಯೇ ನಡು ರಸ್ತೆಯಲ್ಲೇ ಗಲಾಟೆ ತೆಗೆದು ಚಾಕುವಿನಿಂದ ಚುಚ್ಚಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
08:09 AM May 03, 2024 IST | Chaitra Kulal
ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ

ಬೆಂಗಳೂರು: ತಾಳಿ ಕಟ್ಟಿದ ಪತಿಯೇ ನಡು ರಸ್ತೆಯಲ್ಲೇ ಗಲಾಟೆ ತೆಗೆದು ಚಾಕುವಿನಿಂದ ಚುಚ್ಚಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

Advertisement

ಕಳೆದ ಆರು ತಿಂಗಳಿನಿಂದ ಪತಿ ಸೆಲ್ವಿನ್ ಫ್ರಾನ್ಸಿಸ್​ನಿಂದ ಪತ್ನಿ ಇಂದು ದೂರವಾಗಿದ್ದಳು.. ಹೀಗಾಗಿ, ಮೃತ ಇಂದು ವೆಂಕಟಾಪುರದ ತಾಯಿ ಮನೆಯಲ್ಲಿ ವಾಸವಿದ್ದಳು. ಸೆಲ್ವಿನ್​ ಪದೇ ಪದೇ ಟಾರ್ಚರ್​ ಕೊಡುತ್ತಿದ್ದನು.

ಹೀಗಾಗಿ, ದೂರು ನೀಡಲು ಕೊರಮಂಗಲ ಠಾಣೆಗೆ ಬಂದಿದ್ದಳು. ಆಕೆ ಠಾಣೆಯಿಂದ ಹೊರ ಬರುದನ್ನು ಕಾಯುತ್ತಿದ್ದ ಪತಿ ನಡು ರಸ್ತೆಯಲ್ಲೇ ಗಲಾಟೆ ತೆಗೆದು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪ್ರಕರಣ ಕೋರಮಂಗಳ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ಸೆಲ್ವಿನ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Advertisement

Advertisement
Tags :
Advertisement