ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೆಂಡತಿಯ ಮೇಲೆಯೇ ಆ್ಯಸಿಡ್‌ ಎರಚಿದ ಪತಿರಾಯ

ಪತಿಯೇ ತನ್ನ ಹೆಂಡತಿಯ ಮೇಲೆ ಆ್ಯಸಿಡ್‌ ದಾಳಿ ನಡೆಸಿದ ಘಟನೆ ಇತ್ತೀಚೆಗೆ ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಗೌರೇನ ಹಳ್ಳಿಯಲ್ಲಿ ನಡೆದಿದೆ.
03:13 PM Mar 19, 2024 IST | Chaitra Kulal
ಹೆಂಡತಿಯ ಮೇಲೆಯೇ ಆ್ಯಸಿಡ್ ಎರಚಿದ ಪತಿರಾಯ

ಬೆಂಗಳೂರು: ಪತಿಯೇ ತನ್ನ ಹೆಂಡತಿಯ ಮೇಲೆ ಆ್ಯಸಿಡ್‌ ದಾಳಿ ನಡೆಸಿದ ಘಟನೆ ಇತ್ತೀಚೆಗೆ ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಗೌರೇನ ಹಳ್ಳಿಯಲ್ಲಿ ನಡೆದಿದೆ.

Advertisement

ಚಾಂದ್‌ ಪಾಷಾ (45) ಎಂಬಾತ ತನ್ನ ಪತ್ನಿಯಾದ ನಾಜಿಯಾ ಬೇಗಂ (40) ಮೇಲೆ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಾಜಿಯಾ ಬೇಗಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಂದ್‌ ಪಾಷಾ ಮತ್ತು ನಾಜಿಯಾ ಬೇಗಂ ನಡುವೆ ಮೊದಲಿನಿಂದಲೂ ಸಂಬಂಧ ಉತ್ತಮವಾಗಿರಲಿಲ್ಲ. ಗಂಡನ ಕಿರಿಕಿರಿಯಿಂದ ನಾಜಿಯಾ ಹತಾಶರಾಗಿದ್ದರು.

ಇವರಿಬ್ಬರ ನಡುವೆ ಕೌಟುಂಬಿಕ ಕಲಹ ಇತ್ತೀಚೆಗೆ ತೀವ್ರವಾಗಿತ್ತು. ಈ ವೇಳೆ ಗಂಡ ತನ್ನ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಮಾರ್ಚ್‌ 17 ರಂದು ರಾತ್ರಿ ಪತ್ನಿ ಮಲಗಿದ್ದನ್ನು ಗಮನಿಸಿದ ಗಂಡ ಆಕೆಯ ಮೇಲೆ ಮನೆಯಲ್ಲಿ ಟಾಯ್ಲೆಟ್‌ ಕ್ಲೀನ್‌ ಮಾಡಲು ಬಳಸುವ ಆ್ಯಸಿಡನ್ನು ಎರಚಿದ್ದಾನೆ.

Advertisement

ಮಲಗಿದ್ದಾಗ ಒಮ್ಮಿಂದೊಮ್ಮೆಗೇ ಮುಖದ ಮೇಲೆ ಏನೋ ಬಿದ್ದು ಉರಿ ಏಳುತ್ತಿದ್ದಂತೆಯೇ ನಾಜಿಯಾ ಎದ್ದು ಜೋರಾಗಿ ಬೊಬ್ಬೆ ಹೊಡೆದರು. ಹೆಂಡತಿ ಕಿರುಚಾಡುತ್ತಿದ್ದಂತೆಯೇ ಚಾಂದ್‌ ಪಾಷಾ ಬೈಕ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಸೇರಿ ನಾಜಿಯಾ ಅವರನ್ನು ಆನೇಕಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
AcidbengaluruLatestNewsNewsKarnatakaPOLICEwifi
Advertisement
Next Article