For the best experience, open
https://m.newskannada.com
on your mobile browser.
Advertisement

ಚಿಣ್ಣರ ಕುಂಚದಲ್ಲಿ ಮೂಡಿ ಬಂದ ʼಸೇವ್‌ ಗರ್ಲ್‌ ಚೈಲ್ಡ್‌ʼ ಕಲ್ಪನೆ, ದೇಶ ಭಕ್ತಿಯ ಕಲರವ

ನ್ಯೂಸ್ ಕರ್ನಾಟಕ, ಫಿಝ್ಹಾ ಬೈ ನೆಕ್ಸಸ್ ಸಹಯೋಗದಲ್ಲಿ ಗಣರಾಜೊತ್ಸವದ ಅಂಗವಾಗಿ ಎರಡು ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜ. 26 ರ ಇಂದು ಮಧ್ಯಾಹ್ನ 3 ಗಂಟೆಗೆ ಫಿಝ್ಹಾ ಬೈ ನೆಕ್ಸಸ್ ಮಂಗಳೂರು ಇಲ್ಲಿ “ಮೈ ವರ್ಲ್ಡ್‌ ಶೀರ್ಷಿಕೆ ಕುರಿತು” ಸೇವ್‌ ಗರ್ಲ್‌ ಚೈಲ್ಡ್‌ ಎಂಬ ವಿಷಯದ ಮೇಲೆ ಡ್ರಾಯಿಂಗ್‌ ಸ್ಫರ್ಧೆ ಹಾಗು “ಮೈ ನೇಷನ್‌ ಕುರಿತು ದೇಶ ಭಕ್ತಿಗೀತೆ ಹಾಡುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
10:07 PM Jan 26, 2024 IST | Ashika S
ಚಿಣ್ಣರ ಕುಂಚದಲ್ಲಿ ಮೂಡಿ ಬಂದ ʼಸೇವ್‌ ಗರ್ಲ್‌ ಚೈಲ್ಡ್‌ʼ ಕಲ್ಪನೆ  ದೇಶ ಭಕ್ತಿಯ ಕಲರವ

ಮಂಗಳೂರು: ನ್ಯೂಸ್ ಕರ್ನಾಟಕ, ಫಿಝ್ಹಾ ಬೈ ನೆಕ್ಸಸ್ ಸಹಯೋಗದಲ್ಲಿ ಗಣರಾಜೊತ್ಸವದ ಅಂಗವಾಗಿ ಎರಡು ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜ. 26 ರ ಇಂದು ಮಧ್ಯಾಹ್ನ 3 ಗಂಟೆಗೆ ಫಿಝ್ಹಾ ಬೈ ನೆಕ್ಸಸ್ ಮಂಗಳೂರು ಇಲ್ಲಿ “ಮೈ ವರ್ಲ್ಡ್‌ ಶೀರ್ಷಿಕೆ ಕುರಿತು” ಸೇವ್‌ ಗರ್ಲ್‌ ಚೈಲ್ಡ್‌ ಎಂಬ ವಿಷಯದ ಮೇಲೆ ಡ್ರಾಯಿಂಗ್‌ ಸ್ಫರ್ಧೆ ಹಾಗು “ಮೈ ನೇಷನ್‌ ಕುರಿತು ದೇಶ ಭಕ್ತಿಗೀತೆ ಹಾಡುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

Advertisement

“ಮೈ ವರ್ಲ್ಡ್‌ ಶೀರ್ಷಿಕೆ ಕುರಿತು” ಸೇವ್‌ ಗರ್ಲ್‌ ಚೈಲ್ಡ್‌ ಎಂಬ ವಿಷಯದ ಮೇಲೆ ನಡೆದ ಡ್ರಾಯಿಂಗ್‌ "ಎ" ವಿಭಾಗದಲ್ಲಿ ಪ್ರಥಮ ಬಹುಮಾನ ತನಿಷ್ಕಾ ಪಿ ಕೋಟ್ಯಾನ್.‌, ಎರಡನೇ ಬಹುಮಾನ ಮೋಕ್ಷಿತಾ ಎ.ಬಿ., ತೃತೀಯ ಬಹುಮಾನ ಕೃತಿ ಸಾಲ್ಯನ್‌ ಹಾಗು ಚತುರ್ಥ ಬಹುಮಾನವನ್ನು ತೃಪ್ತಿ ಪಡೆದುಕೊಂಡಿದ್ದಾರೆ. ಇನ್ನು "ಬಿ" ವಿಭಾಗದಲ್ಲಿ ನಡೆದ ಡ್ರಾಯಿಂಗ್‌ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮನ್ವಿತ್‌ ಕೆ. ಎಲ್‌., ದ್ವಿತೀಯ ಬಹುಮಾನವನ್ನು ನಿಹಾರ್‌ ಜೆ ಎಸ್.‌, ಮೂರನೇ ಬಹುಮಾನ ಕೃತಿ ಎಸ್‌ ಎ., ಚತುರ್ಥ ಬಹುಮಾನ ನಿಧೀಶ್‌ ಪಡೆದುಕೊಂಡಿದ್ದಾರೆ.

Advertisement

ಇನ್ನು "ಸಿ" ವಿಭಾಗದಲ್ಲಿ ಪ್ರಥಮ ಬಹುಮಾನ ಅಕ್ಷಯ್‌ ಜೆ ಪಡೆದುಕೊಂಡರೆ, ದ್ವೀತಿಯ ಬಹುಮಾನ ಜ್ಯೋತಿಕಾ ಪಡೆದುಕೊಂಡರೆ, ತೃತೀಯ ಬಹುಮಾನ ರಿತೀಷ ಕೆಜೆ ಹಾಗು ನಾಲ್ಕನೇ ಬಹುಮಾನ ಹೆಚ್‌ ಶರಣ್ಯಾ ಕಾಮತ್‌ ಪಡೆದುಕೊಂಡಿದ್ದಾರೆ.

ಇನ್ನು ಎಲ್‌ ಕೆಜಿ ಯಿಂದ 1ನೇ ತರಗತಿಗೆ ನಡೆದ ದೇಶ ಭಕ್ತಿ ಸ್ಪರ್ಧೆಯ "1"ನೇ ವಿಭಾಗದಲ್ಲಿ ಪ್ರಥಮ ಬಹುಮಾನ ಚಿರಾಂತ್‌ ವೈ ದೇವಾಡಿಗ., ದ್ವಿತೀಯ ಬಹುಮಾನ ಅನಘ ಎಸ್‌ ಕೆ., ಮೂರನೇ ಬಹುಮಾನ ತ್ರಿಷಿಕಾ ಹಾಗೂ ನಾಲ್ಕನೇ ಬಹುಮಾನ ವಿಹಾನ್‌ ಪಡೆದುಕೊಂಡಿದ್ದಾರೆ.

"2"ನೇ ವಿಭಾಗದಲ್ಲಿ ಪ್ರಥಮ ಬಹುಮಾನ ದೃಷ್ಠಿ ವಿ.ಕೆ. ದ್ವಿತೀಯ ಬಹುಮಾನ ಕೃತಿ., ತೃತೀಯ ಬಹುಮಾನ ದಿಯಾನ್‌ ಕೊಟ್ಯಾನ್.‌, ಚತುರ್ಥ ಬಹುಮಾನ ಸಿದಿಕ್ಷಾ ಪಡೆದುಕೊಂಡಿದ್ದಾರೆ.

ಇನ್ನು 3ನೇ ವಿಭಾಗದಲ್ಲಿ ಪ್ರಥಮ ಬಹುಮಾನ ಸಮಾರ್ಥ್‌ ಶೆಟ್ಟಿ ಪಡೆದುಕೊಂಡರೆ, ದ್ವಿತೀಯ ಬಹುಮಾನ ಮೇಘಾನ ವಿ ರಾವ್‌, ತೃತೀಯ ಬಹುಮಾನ ವಸುಂದರ ಹಾಗು ನಾಲ್ಕನೇ ಬಹುಮಾನ ವೈದೇಹಿ ಪಡೆದುಕೊಂಡಿದ್ದಾರೆ.

ಇನ್ನು ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಣೆಯನ್ನು ಫಿಝ್ಹಾ ಬೈ ನೆಕ್ಸಸ್ ನ ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿರುವ ಶ್ರೀನಿಧಿ., ಕಾರ್ಯಕ್ರಮದ ಶೀರ್ಷಿಕೆ ಪ್ರಾಯೋಜಕತ್ವರಾದ ಮೆಡಿಕ್ವೆಸ್ಟ್‌ ಹೆಲ್ತ್‌ ಕೇರ್‌ ಇದರ ಮ್ಯಾನೇಜರ್‌ ಡೈರಕ್ಟರ್ ರೀನಾ ಟಿ.ಬಿ.‌, ಪಾಟ್ನರ್‌ ಆಗಿ ರಾಘವೇಂದ್ರ ಗಂಗೂಳ್ಳಿ ಅವರು ನಡೆಸಿಕೊಟ್ಟರು.

ಈ ವಿಶೇಷ ಕಾರ್ಯಕ್ರಮದಲ್ಲಿ ಡ್ರಾಯಿಂಗ್‌ ಸ್ಪರ್ಧೆಯ ನಿರ್ಣಾಯಕರಾಗಿ ಆಗಿ ಕಲಾವಿದ ಅನುದೀಪ್‌ ಕರ್ಕೆರ, ದೇಶಭಕ್ತಿ ಸ್ಪರ್ಧೆಯ ನಿರ್ಣಾಯಕರಾಗಿ ಮೋಹನ್‌ ಪ್ರಸಾದ್‌ ನಂತೂರು,ಕೆ. ವೀಣಾ ರಾವ್ ಅವರು ಸಹಕರಿಸಿದರು.

ನ್ಯೂಸ್‌ ಕರ್ನಾಟಕದ ಆಪರೇಷನ್ ಮ್ಯಾನೇಜರ್ ಹರ್ಷಿತ್‌ ಹೊಳ್ಳ, ಮಾರ್ಕೆಟಿಂಗ್‌ ಮ್ಯಾನೇಜರ್ ಮೊಹಮ್ಮದ್‌ ಚಮಾಡಿಯಾ, ಮಾರ್ಕೆಟಿಂಗ್‌ ಆಂಡ್ ಬ್ರಾಂಡ್ ಅವೇರ್ನೆಸ್ ಆಫೀಸರ್ ಪ್ರತಿಮಾ ಪವಾರ್‌ ಇದ್ದರು.

Advertisement
Tags :
Advertisement