For the best experience, open
https://m.newskannada.com
on your mobile browser.
Advertisement

ಒಟಿಟಿಗೆ ಎಂಟ್ರಿ ಕೊಟ್ಟ ‘ದಿ ಕೇರಳ ಸ್ಟೋರಿ’

ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಮುನ್ನ ಹಾಗೂ ಬಿಡುಗಡೆ ಆದ ಬಳಿಕವೂ ಸಾಕಷ್ಟು ಚರ್ಚೆ ಎಬ್ಬಿಸಿದ್ದ ‘ದಿ ಕೇರಳ ಸ್ಟೋರಿ‘ ಸಿನಿಮಾ ಯಾವುದೇ ಒಟಿಟಿಯಲ್ಲಿ ಬಿಡುಗಡೆ ಆಗಿರಲಿಲ್ಲ. ತಿಂಗಳ ಹಿಂದೆ ಮಾಧ್ಯಮದವರೊಟ್ಟಿಗೆ ಮಾತನಾಡಿದ್ದ ಸಿನಿಮಾದ ನಿರ್ಮಾಪಕರು ನಮ್ಮ ಸಿನಿಮಾವನ್ನು ಯಾವುದೇ ಒಟಿಟಿಗಳು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಆದರೆ ಸತ್ಯ ಬೇರೆಯೇ ಇದೆ ಎಂಬ ಮಾಹಿತಿ ಇತ್ತೀಚೆಗೆ ಬಹಿರಂಗವಾಗಿದೆ.
06:20 PM Feb 06, 2024 IST | Ashitha S
ಒಟಿಟಿಗೆ ಎಂಟ್ರಿ ಕೊಟ್ಟ ‘ದಿ ಕೇರಳ ಸ್ಟೋರಿ’

ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಮುನ್ನ ಹಾಗೂ ಬಿಡುಗಡೆ ಆದ ಬಳಿಕವೂ ಸಾಕಷ್ಟು ಚರ್ಚೆ ಎಬ್ಬಿಸಿದ್ದ ‘ದಿ ಕೇರಳ ಸ್ಟೋರಿ‘ ಸಿನಿಮಾ ಯಾವುದೇ ಒಟಿಟಿಯಲ್ಲಿ ಬಿಡುಗಡೆ ಆಗಿರಲಿಲ್ಲ. ತಿಂಗಳ ಹಿಂದೆ ಮಾಧ್ಯಮದವರೊಟ್ಟಿಗೆ ಮಾತನಾಡಿದ್ದ ಸಿನಿಮಾದ ನಿರ್ಮಾಪಕರು ನಮ್ಮ ಸಿನಿಮಾವನ್ನು ಯಾವುದೇ ಒಟಿಟಿಗಳು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಆದರೆ ಸತ್ಯ ಬೇರೆಯೇ ಇದೆ ಎಂಬ ಮಾಹಿತಿ ಇತ್ತೀಚೆಗೆ ಬಹಿರಂಗವಾಗಿದೆ.

Advertisement

ಇತ್ತೀಚಿನ ಕೆಲವು ವರದಿಗಳ ಪ್ರಕಾರ, ‘ದಿ ಕೇರಳ ಸ್ಟೋರಿ’ ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕು ಮಾರಾಟಕ್ಕೆ ನಿರ್ಮಾಪಕರು ಭಾರಿ ಮೊತ್ತವನ್ನು ಡಿಮ್ಯಾಂಡ್ ಮಾಡಿದ್ದರಂತೆ. ಇದೇ ಕಾರಣಕ್ಕೆ ಒಟಿಟಿ ವೇದಿಕೆಗಳು ಹಾಗೂ ಟಿವಿ ಸಂಸ್ಥೆಗಳು ಹಕ್ಕು ಖರೀದಿಯಿಂದ ಹಿಂದೆ ಸರಿದಿದ್ದವು ಎನ್ನಲಾಗುತ್ತಿದೆ. ನಿರ್ಮಾಪಕ ವಿಫುಲ್ ಶಾ, ತಮ್ಮ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾರಾಟ ಮಾಡಲು 75 ರಿಂದ 100 ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದ್ದರಂತೆ. ಇದು ಬಹಳ ದೊಡ್ಡ ಮೊತ್ತವಾದ್ದರಿಂದ ಯಾವುದೇ ಟಿವಿ ಹಾಗೂ ಒಟಿಟಿ ವೇದಿಕೆಗಳು ಸಿನಿಮಾವನ್ನು ಖರೀದಿಸಿರಲಿಲ್ಲ.

ಆದರೆ ಅದೇ ಸಿನಿಮಾದ ನಟಿ ಅದಾ ಶರ್ಮಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿರುವ ಪ್ರಕಾರ, ಇತ್ತೀಚೆಗಷ್ಟೆ ಸಿನಿಮಾವನ್ನು ಒಟಿಟಿಯೊಂದು ಖರೀದಿ ಮಾಡಿದ್ದು ಆದಷ್ಟು ಶೀಘ್ರವಾಗಿ ಸಿನಿಮಾ ಬಿಡುಗಡೆ ಆಗಲಿದೆ. ಯಾವ ಒಟಿಟಿ ಎಂದು ನಾನು ಈಗಲೇ ಹೇಳಲಾರೆ ಆದರೆ ಕೆಲವೇ ದಿನಗಳಲ್ಲಿ ನಮ್ಮ ಸಿನಿಮಾ ಒಟಿಟಿಗೆ ಬರುತ್ತದೆ ಎಂದಿದ್ದರು.

Advertisement

ಇನ್ನು ಪ್ರಸ್ತುತ ವಿಚಾರ ನೋಡುವುದಾದರೇ, ಥಿಯೇಟರ್​ನಲ್ಲಿ ಬ್ಲಾಕ್​ ಬಸ್ಟರ್​ ಹಿಟ್​ ಆದ ‘ದಿ ಕೇರಳ ಸ್ಟೋರಿ’ ಚಿತ್ರದ ಒಟಿಟಿ ಬಿಡುಗಡೆಗೆ ಹತ್ತು ಹಲವು ವಿಘ್ನಗಳು ಎದುರಾಗಿದ್ದವು. ಅದೆಲ್ಲವನ್ನೂ ನಿವಾರಿಸಿಕೊಂಡು ಈಗ ಒಟಿಟಿಗೆ ಈ ಸಿನಿಮಾ ಎಂಟ್ರಿ ನೀಡುತ್ತಿದೆ. ‘ಜೀ5’ ಒಟಿಟಿ (Zee5 OTT) ಮೂಲಕ ಫೆಬ್ರವರಿ 16ರಿಂದ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ವಿಶ್ವಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ ‘ದಿ ಕೇರಳ ಸ್ಟೋರಿ’ ಗಳಿಸಿದ್ದು ಬರೋಬ್ಬರಿ 303 ಕೋಟಿ ರೂಪಾಯಿ.

ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಸುದೀಪ್ತೋ ಸೇನ್​ ನಿರ್ದೇಶನ ಮಾಡಿದ್ದಾರೆ. ಕೇರಳದಲ್ಲಿ ಹಿಂದೂ ಯುವತಿಯರನ್ನು ಮತಾಂತರ ಮಾಡಿ, ನಂತರ ಅವರನ್ನು ಬೇರೆ ರಾಷ್ಟ್ರಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಕಥೆಯನ್ನು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ತೋರಿಸಲಾಗಿದೆ.

Advertisement
Tags :
Advertisement