For the best experience, open
https://m.newskannada.com
on your mobile browser.
Advertisement

ಈರುಳ್ಳಿ ಹೆಚ್ಚು ಸೇವಿಸಿದಷ್ಟು ಆರೋಗ್ಯ ಪ್ರಾಪ್ತಿ

ನಾವು ನಿತ್ಯವೂ ಈರುಳ್ಳಿಯನ್ನು ಸೇವಿಸುತ್ತೇವೆಯಾದರೂ ಅದು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿಲ್ಲ. ಆದರೆ ಆರೋಗ್ಯವರ್ಧಕವಾಗಿರುವ ಈರುಳ್ಳಿಯ ಉಪಯೋಗವನ್ನು ಅರಿತರೆ ನಾವೆಲ್ಲರೂ ಹೆಚ್ಚು ಹೆಚ್ಚಾಗಿ ಅದನ್ನು ಬಳಸಲು ಆರಂಭಿಸುತ್ತೇವೆ.
05:19 PM Dec 21, 2023 IST | Gayathri SG
ಈರುಳ್ಳಿ ಹೆಚ್ಚು ಸೇವಿಸಿದಷ್ಟು ಆರೋಗ್ಯ ಪ್ರಾಪ್ತಿ

ನಾವು ನಿತ್ಯವೂ ಈರುಳ್ಳಿಯನ್ನು ಸೇವಿಸುತ್ತೇವೆಯಾದರೂ ಅದು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿಲ್ಲ. ಆದರೆ ಆರೋಗ್ಯವರ್ಧಕವಾಗಿರುವ ಈರುಳ್ಳಿಯ ಉಪಯೋಗವನ್ನು ಅರಿತರೆ ನಾವೆಲ್ಲರೂ ಹೆಚ್ಚು ಹೆಚ್ಚಾಗಿ ಅದನ್ನು ಬಳಸಲು ಆರಂಭಿಸುತ್ತೇವೆ.

Advertisement

ಸಾಮಾನ್ಯವಾಗಿ ನಾವು ತಯಾರಿಸುವ ಹೆಚ್ಚಿನ ಆಹಾರಕ್ಕೆ ಈರುಳ್ಳಿಯನ್ನು ಬಳಸುತ್ತೇವೆ. ಅದರಲ್ಲೂ ಮಾಂಸ ಆಹಾರ ತಯಾರು ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಬಹುಶಃ ಈರುಳ್ಳಿಯಲ್ಲಿರುವ ಔಷಧೀಯ ಗುಣದ ಮಹತ್ವವನ್ನು ಅರಿತೇ ಹಿಂದಿನ ಕಾಲದವರು ನಿತ್ಯದ ಆಹಾರ ಪದಾರ್ಥಗಳಲ್ಲಿ ಅದನ್ನು ಬಳಕೆ ಮಾಡಲು ಆರಂಭಿಸಿರಬೇಕು.

ಅಡುಗೆಗೆ ತರಕಾರಿಯೊಂದಿಗೆ ಬಳಕೆಯಾಗುವ ಈರುಳ್ಳಿಯನ್ನು ದೋಸೆ, ರೊಟ್ಟಿ, ಪಕೋಡ ಮೊದಲಾದ ತಿಂಡಿಗಳಲ್ಲಿ ಬಳಸಲಾಗುತ್ತದೆ. ಇಷ್ಟಕ್ಕೂ ಈರುಳ್ಳಿಯಲ್ಲಿ ಆರೋಗ್ಯಕ್ಕೆ ಸಹಾಯವಾಗುವ ಅಂಶ ಏನಿದೆ ಎಂಬುದನ್ನು ನೋಡುವುದಾದರೆ ಹಲವು ಪೋಷಕ ಶಕ್ತಿ, ಔಷಧೀಯ ಗುಣ ಇದರಲ್ಲಿರುವುದು ಕಂಡು ಬರುತ್ತದೆ. ಅಲ್ಲೈಲ್, ಪ್ರೋಫೈಲ್ ಮತ್ತು ಡೆಸಲ್ಫೈಡ್  ಎಂಬ ಎಣ್ಣೆ ಅಂಶ ಇದರಲ್ಲಿದ್ದು ಇದುವೇ ಈರುಳ್ಳಿಯ ವಿಲಕ್ಷಣ ರುಚಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

Advertisement

ಅಷ್ಟೇ ಅಲ್ಲದೆ ಈರುಳ್ಳಿಯಲ್ಲಿ ಸಸಾರಜನಕ, ಪಿಷ್ಠ, ಕೊಬ್ಬು, ಸುಣ್ಣ, ರಂಜಕ, ಕಬ್ಬಿಣ, ಗಂಧಕ, ಸೋಡಿಯಂ, ಪೊಟಾಷಿಯಂ, ಎ, ಬಿ1, ಬಿ2 ಮತ್ತು ಸಿ ಜೀವಸತ್ವಗಳ ಹೇರಳವಾಗಿದ್ದು, ದೇಹಕ್ಕೆ ಶಕ್ತಿ ನೀಡುವ ಮೂಲಕ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

ಔಷಧೀಯ ಗುಣಗಳಿರುವುದರಿಂದಲೇ ಅನಾರೋಗ್ಯಗಳು ಕಾಣಿಸಿಕೊಂಡಾಗ ಮನೆಮದ್ದಾಗಿ ಬಳಸಿಕೊಳ್ಳಲಾಗುತ್ತದೆ. ನೆಗಡಿಯಾದಾಗ ಈರುಳ್ಳಿ ರಸದಲ್ಲಿ ಹತ್ತಿಯನ್ನು ಅದ್ದಿ ತೆಗೆದು ಮೂಗಿನ ಎರಡೂ ಹೊಳ್ಳೆಗಳಲ್ಲಿ ಹದಿನೈದು ನಿಮಿಷಗಳಂತೆ ದಿನದಲ್ಲಿ ಮೂರು ಬಾರಿ  ಇಟ್ಟುಕೊಂಡರೆ ನೆಗಡಿ ದೂರವಾಗುತ್ತದೆ.  ಪ್ರತಿನಿತ್ಯ ಊಟದಲ್ಲಿ ಒಂದು ಸಣ್ಣ ಹಸಿ ಈರುಳ್ಳಿಯನ್ನು ತಿನ್ನುವುದರಿಂದ  ಕಣ್ಣುನೋವು, ಕಣ್ಣುಚುಚ್ಚುವಿಕೆ, ತಲೆನೋವು ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಈರುಳ್ಳಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಇದರ ಸೇವನೆಯಿಂದ ರಕ್ತಹೀನತೆ ದೂರವಾಗುತ್ತದೆ. ಈರುಳ್ಳಿಯನ್ನು ಚಿಕ್ಕಗಾತ್ರಗಳಾಗಿ ಕತ್ತರಿಸಿ ತಿನ್ನುವ ಬದಲು  ಸಿಪ್ಪೆ ಬಿಡಿಸಿ ಕಚ್ಚಿ ತಿನ್ನುವುದರಿಂದ ಹಲ್ಲು, ಬಾಯಿಗೆ ರಕ್ಷಣೆ ದೊರೆಯುತ್ತದೆ. ಜತೆಗೆ ಜೀರ್ಣಶಕ್ತಿಯೂ ವೃದ್ಧಿಸುತ್ತದೆ

ಕಾಡುವ ತಲೆನೋವನ್ನು ದೂರ ಮಾಡಬೇಕಾದರೆ ಈರುಳ್ಳಿ ಜಜ್ಜಿ   ರಸ ತೆಗೆದು ಆ ರಸವನ್ನು  ಹಣೆಗೆ ಹಚ್ಚುವುದರಿಂದ ನೋವು ಮಾಯವಾಗಿ ಆರಾಮ ಸಿಗುತ್ತದೆ. ಅರಿಶಿನ ಓಂಕಾಳು  ಮತ್ತು ಈರುಳ್ಳಿ ಕಟ್ಟಿದರೆ ತಕ್ಷಣವೇ ಕುರು ಒಡೆದು ಕೀವು, ರಕ್ತವೆಲ್ಲ ಸೋರಿ ಹೋಗಿ ಆರಾಮವೆನಿಸುತ್ತದೆ. ಕೆಮ್ಮು ಕಫ ಸಮಸ್ಯೆಗೆ ಈರುಳ್ಳಿ ರಸದೊಂದಿಗೆ ಜೇನು ಬೆರೆಸಿ ಸೇವಿಸಿದರೆ ಒಂದಷ್ಟು ರಿಲೀಫ್ ಆಗುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ತರಕಾರಿಯಾಗಿ ಬಾಯಿಗೆ ರುಚಿಸುವುದರೊಂದಿಗೆ, ದೇಹಕ್ಕೂ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Advertisement
Tags :
Advertisement