ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಂಗಳೂರಿನಲ್ಲಿ ಕುಸಿಯುತ್ತಿದೆ ಮರಗಳ ಸಂಖ್ಯೆ

ಹೆಚ್ಚುತ್ತಿರುವ ತಾಪಮಾನ. ಇದರಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಇದಕ್ಕೆ ಮೂಲ ಕಾರಣ ಅರಣ್ಯ ನಾಶ. ಮಂಗಳೂರಿನಲ್ಲೂ ಬಿಸಿಲ ಝಳ ಏರುತ್ತಿದೆ.  ಮರಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಹಾಗಾದರೆ ಮಂಗಳೂರಿನಲ್ಲಿ ಎಷ್ಟು ಪ್ರಮಾಣದ ಅರಣ್ಯವಿದೆ ಗೊತ್ತಾ ? ಅದರ ಅಂಕಿಅಂಶ ಇಲ್ಲಿದೆ ನೋಡಿ.
10:04 AM Dec 04, 2023 IST | Ashika S

ಮಂಗಳೂರು: ಹೆಚ್ಚುತ್ತಿರುವ ತಾಪಮಾನ. ಇದರಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಇದಕ್ಕೆ ಮೂಲ ಕಾರಣ ಅರಣ್ಯ ನಾಶ. ಮಂಗಳೂರಿನಲ್ಲೂ ಬಿಸಿಲ ಝಳ ಏರುತ್ತಿದೆ.  ಮರಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಹಾಗಾದರೆ ಮಂಗಳೂರಿನಲ್ಲಿ ಎಷ್ಟು ಪ್ರಮಾಣದ ಅರಣ್ಯವಿದೆ ಗೊತ್ತಾ ? ಅದರ ಅಂಕಿಅಂಶ ಇಲ್ಲಿದೆ ನೋಡಿ.

Advertisement

ನಿಟ್ಟೆ ವಿವಿ ನುಕ್ಸರ್ ರಿಸರ್ಚ್ ಸೆಂಟರ್ ಡೆಪ್ಯುಟಿ ಡೈರೆಕ್ಟರ್ ಡಾ. ಸ್ಮಿತಾ ಹೆಗ್ಡೆಯವರ ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ  'ಟ್ರೀ ಕೌಂಟ್ ಮಂಗಳೂರು' ಎಂಬ ಅಧ್ಯಯನ ನಡೆಸಿ,ನಗರದಲ್ಲಿ ಮರಗಳೆಷ್ಟಿವೆ ಎಂಬ ಲೆಕ್ಕಚಾರ ಮಾಡಲಾಯಿತು.

ಮಂಗಳೂರು ಮನಪಾ ವ್ಯಾಪ್ತಿಯ ಒಟ್ಟು 60 ವಾರ್ಡ್ ಗಳ 50 ವಾರ್ಡ್ ಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 6.24% ಮರಗಳಿವೆ. ಖಾಸಗಿ ಪ್ರದೇಶಗಳಲ್ಲಿ ಒಟ್ಟು 41.09ಶೇ. ಮರಗಳಿವೆ. ನಗರದ ದೇರೆಬೈಲ್, ಡೊಂಗರಕೇರಿ, ಕದ್ರಿ ಕಂಬಳ ವಾರ್ಡ್ ನಲ್ಲಿ ಮರಗಳ ಸಂಖ್ಯೆ ತೀರಾ ಕಡಿಯಾಗಿದ್ದು, ಇಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ 3 ಶೇ. ತಾಪಮಾನ ಏರಿಕೆಯಾಗಿದೆ. ತಿರುವೈಲ್, ಬಜಾಲ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣದೆ ಸರ್ವೆ ಪ್ರಕಾರ ಇಲ್ಲಿ ತಾಪಮಾನ ಕಡಿಮೆಯಿದೆ.

Advertisement

ಮರಗಳಗಳ ರಕ್ಷಣೆಗೆ ಬಹಳಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ನಾಶ ಮಾಡುವ ಕೆಲಸ ಕೂಡ ಭರದಿಂದ ಸಾಗುತ್ತಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪರಿಸರ ಪ್ರೇಮಿಗಳು ಮರಗಳ ಉಳಿವಿಗೆ ಹರಸಾಹಸ ಪಡುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದ್ಯಾವುದೂ ಲೆಕ್ಕಕ್ಕೆ ಬಂದಂತೆ ಕಾಣುತ್ತಿಲ್ಲ. ಹೀಗಾಗಿ ಮಂಗಳೂರಿನ ಜನರು ಇಂದಿನಿಂದಲೇ ಎಚ್ಚೆತ್ತುಕೊಂಡು ಮರಗಳ ಸಂರಕ್ಷಣೆಗೆ ಮುಂದಾಗಬೇಕಿದೆ.

ಇದೆ ರೀತಿ ಮುಂದುವರಿದರೆ ಮುಂದೊಂದು ದಿನ ಭಯಂಕರವಾದ ಬಿಸಿಲು ಹಾಗು ನೀರಿನ ಅಭಾವದಿಂದಾಗಿ ಮನುಷ್ಯ ಜಾತಿ ಹಾಗೂ ಪ್ರಾಣಿ ಸಂಕುಲಗಳು ಬಳಲುವುದಂತೂ ಖಂಡಿತ.

Advertisement
Tags :
LatetsNewsNewsKannadaಅರಣ್ಯ ನಾಶಕುಡಿಯುವ ನೀರುತಾಪಮಾನಸಂಖ್ಯೆ
Advertisement
Next Article