For the best experience, open
https://m.newskannada.com
on your mobile browser.
Advertisement

ಭಾರತಕ್ಕೆ ನನ್ನನ್ನು ಆಮಂತ್ರಿಸಿದ ಅಂಬಾನಿ ಕುಟುಂಬಕ್ಕೆ ಧನ್ಯವಾದ ಎಂದ ಗಾಯಕಿ

ಮೊದಲ ಬಾರಿ ಭಾರತಕ್ಕೆ ಕಾಲಿಟ್ಟ ಗಾಯಕಿ ರಿಯಾನ ಅಂಬಾನಿ ಕುಟುಂಬಕ್ಕೆ ಧನ್ಯವಾದ ತಿಳಿಸಿದ್ದಾರೆ. ರಿಯಾನಾ ಅವರು ದೂರದ ಬಾರ್ಬೆಡೋಸ್​ ದೇಶದವರು. ಅವರಿಗೆ ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರ ಸಾಂಗ್ ಸೂಪರ್ ಹಿಟ್ ಆಗಿವೆ. ಇಂಗ್ಲೀಷ್‌ ಗಾಯಕಿ ಆಗಿರುವ ರಿಯಾನ ಅಂಬಾನಿಯವರ ಕೊನೆಯ ಪುತ್ರನ ಮದುವೆಯ ಮನರಂಜನಾ ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಇದೀಗ ಇದರ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.
03:39 PM Mar 02, 2024 IST | Nisarga K
ಭಾರತಕ್ಕೆ ನನ್ನನ್ನು ಆಮಂತ್ರಿಸಿದ ಅಂಬಾನಿ ಕುಟುಂಬಕ್ಕೆ ಧನ್ಯವಾದ ಎಂದ ಗಾಯಕಿ
‘ಭಾರತಕ್ಕೆ ನನ್ನನ್ನು ಆಮಂತ್ರಿಸಿದ ಅಂಬಾನಿ ಕುಟುಂಬಕ್ಕೆ ಧನ್ಯವಾದ’ ಎಂದು ಗಾಯಕಿ

ಮೊದಲ ಬಾರಿ ಭಾರತಕ್ಕೆ ಕಾಲಿಟ್ಟ ಗಾಯಕಿ ರಿಯಾನ ಅಂಬಾನಿ ಕುಟುಂಬಕ್ಕೆ ಧನ್ಯವಾದ ತಿಳಿಸಿದ್ದಾರೆ. ರಿಯಾನಾ ಅವರು ದೂರದ ಬಾರ್ಬೆಡೋಸ್​ ದೇಶದವರು. ಅವರಿಗೆ ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರ ಸಾಂಗ್ ಸೂಪರ್ ಹಿಟ್ ಆಗಿವೆ. ಇಂಗ್ಲೀಷ್‌ ಗಾಯಕಿ ಆಗಿರುವ ರಿಯಾನ ಅಂಬಾನಿಯವರ ಕೊನೆಯ ಪುತ್ರನ ಮದುವೆಯ ಮನರಂಜನಾ ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಇದೀಗ ಇದರ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

Advertisement

ಮುಕೇಶ್​ ಅಂಬಾನಿ ಅವರ ಮನೆಯಲ್ಲಿ ಶುಭ ಕಾರ್ಯ ಜರುಗುತ್ತಿದೆ. ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್ ಮದುವೆ ಆಗುತ್ತಿದ್ದಾರೆ. ಮದುವೆ ಮುನ್ನ ಅದ್ದೂರಿಯಾಗಿ ಹಲವಾರು ಕಾರ್ಯಕ್ರಮಗಳು ಕೂಡ ಜರುಗಿವೆ ಇದನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದ ಬೇಟಿ ನಿಡುತ್ತಿದ್ದಾರೆ.ಅಲ್ಲದೇ ಸೆಲೆಬ್ರೆಟಿಗಳು ಕೂಡ ಆಗಮಿಸುತ್ತೆದ್ದಾರೆ.ಈ ಮದುವೆ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಗಾಯಕಿ ರಿಯಾನಾ ಆಗಮಿಸಿದ್ದಾರೆ. ಅವರಿಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಅವರನ್ನು ಆಹ್ವಾನಿಸದ ಅಂಬಾನಿ ಕುಟುಂಬಕ್ಕೆ ಧನ್ಯವಾದ ತಿಳಿಸಿದ್ದು ಈ ವಿಡಿಯೋ ವೈರಲ್‌ ಆಗುತ್ತಿದೆ. ವಿಷೇಶ ಏನಂದ್ರೆ ರಿಯಾನ ಅವರು ಭಾರತಕ್ಕೆ ಬೇಟಿ ನೀಡಿರುವುದು ಇದೇ ಮೊದಲ ಬಾರಿ ಹಾಗೂ ಇದು ಭಾರತದಲ್ಲಿ ಅವರ ಮೊದಲ ಕಾರ್ಯಕ್ರಮವಾಗಿತ್ತು.

ಪಾಪರಾಜಿ ವೀರಲ್ ಭಯಾನಿ ಅವರು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಿಯಾನಾ ಅವರು ಅಂಬಾನಿ ಕುಟುಂಬಕ್ಕೆ ಥ್ಯಾಂಕ್ಸ್ ಎಂದಿದ್ದಾರೆ. ‘ಭಾರತಕ್ಕೆ ನನ್ನನ್ನು ಆಮಂತ್ರಿಸಿದ ಅಂಬಾನಿ ಕುಟುಂಬಕ್ಕೆ ಧನ್ಯವಾದ’ ಎಂದು ಹೇಳಿದ್ದಾರೆ. ವಿಡಿಯೋ ಮೂಲಕ ಧನ್ಯವಾದ ತಿಳಿಸಿದ ಇವರು " ‘ಎಲ್ಲರಿಗೂ ಶುಭಸಂಜೆ. ಇಂದು ಇಲ್ಲಿರೋದಕ್ಕೆ ಖುಷಿ ಆಗುತ್ತಿದೆ. ನಾನು ಈವರೆಗೆ ಭಾರತಕ್ಕೆ ಬಂದಿರಲಿಲ್ಲ. ಅಂಬಾನಿ ಕುಟುಂಬಕ್ಕೆ ಧನ್ಯವಾದ. ಅನಂತ್ ಹಾಗೂ ರಾಧಿಕಾಗೆ ಧನ್ಯವಾದ. ಅವರಿಗೆ ಅಭಿನಂದನೆ’ ಎಂದು ಹೇಳಿದ್ದಾರೆ.ಅಲ್ಲದೇ ಅಂಬಾನಿ ಕುಟುಂಬ ಉಡುಗೊರೆಯಾಗಿ ನೀಡಿರುವ ಹೆಡ್‌ಫೋನ್‌ ಫೋಟೋವನ್ನು ಕೂಡ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು ಈ ಹೆಡ್​​ ಫೋನ್​​ ಬೆಲೆ 9,000 ಡಾಲರ್​​​ ಅಂದರೆ 7ಲಕ್ಷದ 46ಸಾವಿರ ರೂಪಾಯಿ ಎಂದು ಪೋಸ್​ಟ್​​​ನ ಕ್ಯಾಪ್ಷನ್​​ನಲ್ಲಿ ಬರೆಯಲಾಗಿದೆ.

Advertisement

ಗಾಯಕಿ ರಿಯಾನ ಅವರು ಒಂದು ದಿನದ ಕಾರ್ಯಕ್ರಮಕ್ಕೆ 74 ಕೋಟಿ ಸಂಭಾವನೆ ಪಡೆದಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿತ್ತು ಅಲ್ಲದೆ ಅದರ ಜೊತೆಗೆ ದುಬಾರಿ ಹಾಗೂ ವಿಷೇಶ ಹೆಡ್‌ಫೋನ್‌ ನೀಡಿರುವುದು ಇನ್ನು ಅಚ್ಚರಿ ಮೂಡಿಸಿದೆ.
ಮದುವೆ ಸಮಾರಂಭಕ್ಕೆ ಶಾರುಖ್ ಖಾನ್, ಸಲ್ಮಾನ್ ಖಾನ್, ಸಿದ್ದಾರ್ಥ್ ಮಲ್ಹೋತ್ರ, ಕಿಯಾರಾ ಅಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಮೊದಲಾದವರು ಭಾಗಿ ಆಗಿದ್ದಾರೆ.

ರಿಯಾನ ಅವರ ಇನ್ನೊಂದು ವಿಡಿಯೋ ಕೂಡ ವೈರಲ್‌ ಆಗಿದ್ದು ಅದಕ್ಕೆ ನಾನ ರೀತಿಯ ಕಮೆಂಟ್‌ಗಳು ಬಂದಿವೆ. ರಿಯಾನಾ ಅವರ ಜೊತೆ ಒಂದು ಮೂರು ದೊಡ್ಡ ದೊಡ್ಡ ಲಗೇಜ್ ಬ್ಯಾಗ್​ಗಳು ಬಂದವು. ಗುಜರಾತ್​ನ ಜಾಮ್​ನಗರದ ​ ವಿಮಾನ ನಿಲ್ದಾಣದಲ್ಲಿ ರಿಯಾನಾ ಲಗೇಜ್ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವು ವಿಡಿಯೋ ವೈರಲ್ ಆಗಿತ್ತು.
‘ರಿಯಾನಾ ಅವರು ಮನೆಯ ಎಲ್ಲಾ ಲಗೇಜ್ ತೆಗೆದುಕೊಂಡು ಬಂದಿದ್ದಾರೆ. ಬಹುಶಃ ಇಂಡಿಯಾದಲ್ಲೇ ಸೆಟಲ್ ಆಗಬಹುದು’ ಎನ್ನುವ ಕಮೆಂಟ್​ಗಳು ಬಂದಿದ್ದವು.

Advertisement
Tags :
Advertisement