ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪೊಲೀಸರ ದಿಕ್ಕು ತಪ್ಪಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ !

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾಮಾರಿಸಲು ಆರೋಪಿ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಆರೋಪಿ ಶರ್ಟ್ ಮತ್ತು ಮತ್ತು ಪ್ಯಾಂಟ್ ಬದಲಿಸಿ ಹೋಗಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
11:08 AM Mar 03, 2024 IST | Ashitha S

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾಮಾರಿಸಲು ಆರೋಪಿ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಆರೋಪಿ ಶರ್ಟ್ ಮತ್ತು ಮತ್ತು ಪ್ಯಾಂಟ್ ಬದಲಿಸಿ ಹೋಗಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ದಾರಿ ಮಧ್ಯೆ ಆರೋಪಿ ಬಟ್ಟೆ ಬದಲಿಸಿ ಹೋಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದ್ದು, ಶರ್ಟ್ ಮೇಲೆ ಶರ್ಟ್, ಪ್ಯಾಂಟ್ ಮೇಲೆ ಪ್ಯಾಂಟ್ ಹಾಕಿಕೊಂಡು ಮುಂದೆ ಹೋಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಸಾಕ್ಷ್ಯ ಸಿಕ್ಕಿದೆ.

ಅಲ್ಲದೇ 3-4 ಬಸ್ ಬದಲಿಸಿ ಪ್ರಯಾಣ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಗಡಿ ಬಿಟ್ಟು ಹೊರರಾಜ್ಯಕ್ಕೆ ಎಸ್ಕೇಪ್ ಆಗಿರುವ ಬಗ್ಗೆ ಶಂಕಿಸಿದ್ದು, ಸಿಸಿಬಿ, ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ತಲಾಶ್ ನಡೆಸಲಾಗುತ್ತಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 48 ಗಂಟೆಗಳು ಕಳೆದರೂ ಈವರೆಗೂ ಆರೋಪಿಯ ಬಗ್ಗೆ ಸುಳಿವು ಸಿಕ್ಕಿಲ್ಲ. ಸಿಸಿಟಿವಿ, ಮೊಬೈಲ್ ಟವರ್ ಡಂಪ್ ಅನಾಲಿಸಿಸ್ ಮಾಡಿದರೂ ಯಾವುದೇ ಸುಳಿವು ದೊರೆತಿಲ್ಲ. ಸಿಸಿಟಿವಿಯಲ್ಲಿ ಆತ ಯಾರೊಂದಿಗೂ ಫೋನಿನಲ್ಲಿ ಮಾತನಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಆದರೆ ತನಿಖೆಗೆ ಇಳಿದಾಗ ಆತ ಡಮ್ಮಿ ಫೋನ್ ಅನ್ನು ಬಳಸಿದ್ದು, ಈ ಫೋನ್ ಬಳಸಿದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ

Advertisement

Advertisement
Tags :
GOVERNMENTindiaKARNATAKALatestNewsNewsKannadaನವದೆಹಲಿಬೆಂಗಳೂರುಶಂಕಿತ
Advertisement
Next Article