For the best experience, open
https://m.newskannada.com
on your mobile browser.
Advertisement

ಸಂಧಿವಾತದ ಸಮಸ್ಯೆಗೆ ಬಿಸಿನೀರ ಬಳಕೆ ಒಳ್ಳೆಯದು!

ಕೈಕಾಲು ಎಳೆತದಂತಹ ಕಾಯಿಲೆ ಅರ್ಥಾತ್ ಸಂಧಿವಾತ ಹೆಚ್ಚು ನೀರಲ್ಲಿ ಕೆಲಸ ಮಾಡುವವರನ್ನು ಇಲ್ಲಿಲ್ಲದಂತೆ ಕಾಡುತ್ತದೆ. ಅದರಲ್ಲೂ ಶೀತ ಪ್ರದೇಶದಲ್ಲಿ ಕೆಲಸ ಮಾಡುವವರು, ಸದಾ ಹೊಲಿಗೆ ಯಂತ್ರದ ಮೇಲೆ  ಕಾಲಿಟ್ಟುಕೊಂಡಿರುವ ಟೈಲರ್ ಗಳು ಹೀಗೆ ಹಲವರನನ್ನು ಸಂಧಿವಾತ ಕಾಡಿಸುತ್ತದೆ. ಬೇಸಿಗೆಗಿಂತ ಮಳೆಗಾಲ ಮತ್ತು ಚಳಿಗಾಲದಲ್ಲಿ ಸಂಧಿವಾತದ ಸಮಸ್ಯೆ ಹೆಚ್ಚಾಗಿರುತ್ತದೆ.
03:31 PM May 15, 2024 IST | Ashika S
ಸಂಧಿವಾತದ ಸಮಸ್ಯೆಗೆ ಬಿಸಿನೀರ ಬಳಕೆ ಒಳ್ಳೆಯದು

ಕೈಕಾಲು ಎಳೆತದಂತಹ ಕಾಯಿಲೆ ಅರ್ಥಾತ್ ಸಂಧಿವಾತ ಹೆಚ್ಚು ನೀರಲ್ಲಿ ಕೆಲಸ ಮಾಡುವವರನ್ನು ಇಲ್ಲಿಲ್ಲದಂತೆ ಕಾಡುತ್ತದೆ. ಅದರಲ್ಲೂ ಶೀತ ಪ್ರದೇಶದಲ್ಲಿ ಕೆಲಸ ಮಾಡುವವರು, ಸದಾ ಹೊಲಿಗೆ ಯಂತ್ರದ ಮೇಲೆ  ಕಾಲಿಟ್ಟುಕೊಂಡಿರುವ ಟೈಲರ್ ಗಳು ಹೀಗೆ ಹಲವರನನ್ನು ಸಂಧಿವಾತ ಕಾಡಿಸುತ್ತದೆ. ಬೇಸಿಗೆಗಿಂತ ಮಳೆಗಾಲ ಮತ್ತು ಚಳಿಗಾಲದಲ್ಲಿ ಸಂಧಿವಾತದ ಸಮಸ್ಯೆ ಹೆಚ್ಚಾಗಿರುತ್ತದೆ.

Advertisement

ಚಳಿಗಾಲ ಆರಂಭವಾಗಿರುವುದರಿಂದ ಈ ವಾತಾವರಣದಿಂದ ಕೆಲವರಲ್ಲಿ ಸಂಧಿವಾತಗಳು ತೀವ್ರಗತಿಯಲ್ಲಿರುತ್ತವೆ.  ಹೀಗಾಗಿ ಒಂದಷ್ಟು ಎಚ್ಚರಿಕೆ ಮತ್ತು ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು. ಕೆಲವೊಮ್ಮೆ ಶಿಸ್ತಿನ ಜೀವನ ಕ್ರಮ ನಡೆಸದವರಿಗೂ ಇದು ಭಾದಿಸುತ್ತದೆ. ಜತೆಗೆ ಕುಟುಂಬದ ಹಿನ್ನೆಲೆ, ವಯಸ್ಸು, ಮಿತಿಮೀರಿ ಆಲ್ಕೋಹಾಲ್ ಸೇವಿಸುವುದು, ಹಳೆಯ ಕೀಲು ನೋವುಗಳು ಮತ್ತು ಬೊಜ್ಜು. ಗಂಭೀರವಾದ ಸಂಧಿವಾತಕ್ಕೆ ಕಾರಣವಾಗಬಹುದು.

ಸಂಧಿವಾತ ಯಾವುದೇ ವಯಸ್ಸು, ಲಿಂಗ, ಜನಾಂಗ, ಅಥವಾ ಯಾವುದೇ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲೂ ಬರಬಹುದು. ಆದರೂ ಕೆಲವು ತರಹದ ಸಂಧಿವಾತಗಳು ಸಾಮಾಜಿಕ- ಆರ್ಥಿಕವಾಗಿ ಮೇಲಿನ ಸ್ಥಾನದಲ್ಲಿರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಒಟ್ಟಾರೆ, ಸಂಧಿವಾತ ಹೆಂಗಸರಲ್ಲಿ ಸಾಮಾನ್ಯವಾಗಿದೆ.  ಇದರ ತೀವ್ರತೆ ಹೇಗಿರುತ್ತದೆ ಎಂದರೆ, ಮುಂಜಾನೆ ಮತ್ತು ಚಳಿಗಾಲದಲ್ಲಿ ಸಂಧಿವಾತದ ನೋವು ತೀವ್ರವಾಗಿರುತ್ತದೆ.

Advertisement

ಈ  ವೇಳೆ ಬಿಸಿನೀರಿನ ಶಾಖ, ಬಿಸಿನೀರಲ್ಲಿ ಕೈ ಅಥವಾ ಕಾಲನ್ನು ಮುಳುಗಿಸುವುದು, ಬಿಸಿ ನೀರಸ್ನಾನ ಮಾಡುವುದು ಒಳ್ಳೆಯದು. ತೀವ್ರವಾದ ಸಂಧಿವಾತದಲ್ಲಿ ಕೀಲುಗಳು ಬೆಚ್ಚಗಿದ್ದರೆ ಕೋಲ್ಡ್ ಪ್ಯಾಕ್ ಮಾಡಬಹುದಾಗಿದೆ. ವ್ಯಾಯಾಮ ಒಳ್ಳೆಯದಾದರೂ ನೋವು ತೀವ್ರವಿದ್ದಾಗ ಮಾಡುವುದು ಒಳ್ಳೆಯದಲ್ಲ. ಹಲವು ಕೀಲುಗಳಲ್ಲಿ ನೋವಿದ್ದಾಗ ಫಿಸಿಯೋಥೆರಪಿಯಲ್ಲಿ ಸೂಚಿಸುವ ವ್ಯಾಕ್ಸ್ ಬಾತ್ ನೆರವಿಗೆ ಬರಬಹುದು.

ಸಂಧಿವಾತ ಎನ್ನುವುದು ಕೀಲುಗಳ ಉರಿಯೂತವಾಗಿದೆ. ಇದು ಬಾವು ಮತ್ತು ಗಡುಸಾಗುವಿಕೆಯಿಂದ ಕೂಡಿದ ಕೀಲು  ನೋವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಆರಂಭದಿಂದಲೂ ನಿರ್ಲಕ್ಷಿಸದೆ ಬೇಗನೆ ಚಿಕಿತ್ಸೆ ನೀಡಿದರೆ ಉತ್ತಮ. ಇಲ್ಲದೆ ಹೋದರೆ ರೋಗಿಯನ್ನು ಇನ್ನಿಲ್ಲದಂತೆ ಕಾಡಬಹುದು. ಇಲ್ಲಿ ಮುಖ್ಯವಾದ ವಿಷಯ ಏನೆಂದರೆ ಸಂಧಿವಾತ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆಯಂತೆ.

ಸಂಧಿವಾತವನ್ನು ಆರಂಭದಿಂದಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದೆ ಹೋದರೆ ಕೈ, ಪಾದ, ಮಣಿಕಟ್ಟು, ಭುಜಗಳು,  ಮೊಣಕಾಲು ಮತ್ತು ಪಾದದ ಸಣ್ಣಕೀಲುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆನ್ನೆಲುಬುಗೂ ತೊಂದರೆಯಾಗುವ ಸಾಧ್ಯತೆಯೂ ಇದೆ. ಸಂಧಿವಾತಕ್ಕೆ ಧೂಮಪಾನ ಒಂದು ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಿತ್ಯದ ವ್ಯಾಯಾಮ, ನಡೆಯುವುದು, ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಂಧಿವಾತದ ನೋವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

Advertisement
Tags :
Advertisement