ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನನ್ನನ್ನು ರಾಜಕೀಯವಾಗಿ ಮುಗಿಸಲು ದೊಡ್ಡ ಪಿತೂರಿ ನಡೆಯುತ್ತಿದೆ

ನನ್ನ ಮೇಲೆ ದೌರ್ಜನ್ಯ ನಡೆಸಿ ಹಾಗೂ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂತ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ದೊಡ್ಡ ದೊಡ್ಡವರಿದ್ದಾರೆ, ದೊಡ್ಡ ಪಿತೂರಿ ನಡೆಯುತ್ತಿದೆ, ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  ಹೇಳಿದ್ದಾರೆ.
04:06 PM Jan 01, 2024 IST | Ashika S

ಬೆಂಗಳೂರು: ನನ್ನ ಮೇಲೆ ದೌರ್ಜನ್ಯ ನಡೆಸಿ ಹಾಗೂ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂತ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ದೊಡ್ಡ ದೊಡ್ಡವರಿದ್ದಾರೆ, ದೊಡ್ಡ ಪಿತೂರಿ ನಡೆಯುತ್ತಿದೆ, ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅವರೊಬ್ಬರಿಗೆ ನೋಟಿಸ್ ಕೊಟ್ಟಿಲ್ಲ ಹಾಪ್ ಕಾಮ್ಸ್ ಸಬ್ ರಿಜಿಸ್ಟರ್ ಎಲ್ಲರಿಗೂ ಕೊಟ್ಟಿದೆ. ಸರ್ಕಾರ ಈಗಾಗಲೇ ಕೇಸ್ ವಿತ್‍ಡ್ರಾ ಮಾಡಿದೆ. ಆದರೂ ಯಾವ ಲೆಕ್ಕಾಚಾರದಲ್ಲಿ ಕೊಟ್ಟಿದ್ದಾರೆ ಗೊತ್ತಿಲ್ಲ. ನನಗೆ ನೊಟೀಸ್ ಬಂದಿಲ್ಲ, ನನ್ನ ಸಂಸ್ಥೆಗೆ ಬಂದಿದೆ. ಹೆಂಡತಿ, ಮಕ್ಕಳ ವಿಚಾರಕ್ಕೆಲ್ಲಾ ಬಂದಿದೆ. ಆಮೇಲೆ ವೈಯಕ್ತಿಕವಾಗಿ ನನ್ನ ಬಳಿ ಬರುತ್ತಾರೆ. ಅವರಿಗೆ ಒಳಗೆ ಹಾಕುವ ಆಸಕ್ತಿ ಇದ್ದರೆ ಹಾಕಿಕೊಳ್ಳಲಿ ಎಂದರು.

ನಾನು ಏನು ತಪ್ಪು ಮಾಡಿಲ್ಲ ನಾನು ಹೆದರಲ್ಲ. ಸರ್ಕಾರ ಇದನ್ನ ಈಗಾಗಲೇ ಲೋಕಾಯುಕ್ತಕ್ಕೆ ಕೊಟ್ಟಿದೆ. ಮುಂದಿನ ಪ್ರೊಸೀಜರ್ ಲೋಕಾಯುಕ್ತ ನೋಡಿಕೊಳ್ಳುತ್ತದೆ ತನಿಖೆ ನಡೆಸುತ್ತೆ ಎಂದು ಹೇಳಿದರು.

Advertisement

10 ರಂದು ಶಾಸಕರು ಪದಾಧಿಕಾರಿಗಳ ಜೊತೆ ಸಭೆ ಇದೆ. ಆ ಸಭೆಯಲ್ಲಿ ಸಿಎಂ ಕೂಡ ಭಾಗಿಯಾಗುತ್ತಾರೆ. ಸಚಿವರುಗಳಿಗೆ ಜವಾಬ್ದಾರಿ ಕೊಟ್ಟಿದ್ದೇವೆ ಅವರು ರಿಪೋರ್ಟ್ ಕೊಡುತ್ತಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಕೆಲವು ಸಚಿವರು ಸ್ಪರ್ಧೆ ಮಾಡುವ ಸಂದರ್ಭ ಬರಬಹುದು ನೋಡೋಣ ಪಕ್ಷ ಏನ ತೀರ್ಮಾನ ಮಾಡುತ್ತೆ ನೋಡೋಣ ಎಂದರು.

ಇದೇ ವೇಳೆ ಲೋಕಸಭೆಗೆ ಸಚಿವರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ,ಸ್ಪರ್ಧೆ ಮಾಡುತ್ತಾರೆ ಅನ್ನೋದೆಲ್ಲಾ ಸುಳ್ಳು. ನಾನಿನ್ನು ವರದಿಯನ್ನೇ ಕೊಟ್ಟಿಲ್ಲ. ನಾಲ್ಕರಂದು ದೆಹಲಿಯಲ್ಲಿ ಮೀಟಿಂಗ್ ಇದೆ. ಎಲ್ಲಾ ಉಸ್ತುವಾರಿ ಸಚಿವರು ರಿಪೋರ್ಟ್ ಕೊಟ್ಟಿದ್ದಾರೆ. ನನ್ನ ಸಿಎಂ ಅವರನ್ನ ಹೈಕಮಾಂಡ್ ಕರೆದಿದ್ದಾರೆ. ನಾವು ಹೋಗ್ತಾ ಇದ್ದೇವೆ ಅಲ್ಲಿ ಗೈಡ್ ಲೈನ್ಸ್ ಮಾಡೋದನ್ನ ನಾವು ಫಾಲೋ ಮಾಡಿದ್ದೇವೆ. ನಾವು ಯಾವ ಸಚಿವರ ಬಳಿ ಮಾತಾಡಿಲ್ಲ ಎಂದರು.

Advertisement
Tags :
LatetsNewsNewsKannadaಡಿ ಕೆ ಶಿವಕುಮಾರ್ದೌರ್ಜನ್ಯಪಿತೂರಿರಾಜಕೀಯಷಡ್ಯಂತ್ರ
Advertisement
Next Article