ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಕ್ತದಾನಕ್ಕಿಂತ ಶ್ರೇಷ್ಟದಾನ ಮತ್ತೊಂದಿಲ್ಲ: ಡಾ. ಎಚ್.ಎಸ್ ಬಲ್ಲಾಳ್ ಅಭಿಪ್ರಾಯ

ರಕ್ತದಾನಕ್ಕಿಂತ ಶ್ರೇಷ್ಟದಾನ ಮತ್ತೊಂದಿಲ್ಲ ಎಂದು ಮಾಹೆಯ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
03:20 PM Dec 08, 2023 IST | Ashika S

ಉಡುಪಿ: ರಕ್ತದಾನಕ್ಕಿಂತ ಶ್ರೇಷ್ಟದಾನ ಮತ್ತೊಂದಿಲ್ಲ ಎಂದು ಮಾಹೆಯ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಎಚ್.ಡಿಎಫ್ ಸಿ ಬ್ಯಾಂಕ್, ಜ್ಞಾನ ಸುಧಾ ಪಿಯು ಕಾಲೇಜು ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಘಟಕದ ಸಹಯೋಗದಲ್ಲಿ ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಇಂದು ಹಮ್ಮಿಕೊಂಡ 15ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀವಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇಂತಹ ಜೀವ ಉಳಿಸುವ ರಕ್ತವನ್ನು ದಾನ ಮಾಡುವುದರ ಮೂಲಕ ಆರೋಗ್ಯವಂತರಾಗಿ ಬಾಳಬಹುದು. ಮಾತ್ರವಲ್ಲದೇ ಇದರಿಂದ ಅಗತ್ಯ ಇರುವವರಿಗೆ ಅನುಕೂಲವಾಗುತ್ತದೆ. ಗಾಂಧಿ ಆಸ್ಪತ್ರೆ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ ಹರೀಚ್ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಈ ಸಂದರ್ಭದಲ್ಲಿ ಎಚ್.ಡಿಎಫ್ ಸಿ ಮಾಜಿ ಟ್ರೆಸರಿ ಮುಖ್ಯಸ್ಥ ಸುರೇಶ್ ಪ್ರಭು, ಜ್ಞಾನಸುಧಾ ಪಿಯು ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಮಣಿಪಾಲ ಟೆಕ್ನಾಲಜೀಸ್ ನ ಎಂಡಿ ಅಭಯ್ ಗುಪ್ತೆ ಉಪಸ್ಥಿತರಿದ್ದರು.

Advertisement
Tags :
LatetsNewsNewsKannadaಕುಲಾಧಿಪತಿಡಾ. ಎಚ್.ಎಸ್. ಬಲ್ಲಾಳ್ಮಾಹೆರಕ್ತದಾನ
Advertisement
Next Article