ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಿರ್ದೇಶಕನಿಗೆ ರಾಷ್ಟ್ರ ಪ್ರಶಸ್ತಿ ಹಿಂದಿರುಗಿಸಿ ವಿಶ್‌ ಮಾಡಿ ಕ್ಷಮೆಯಾಚಿಸಿದ ಕಳ್ಳರು!

ವಿಲಕ್ಷಣ ಘಟನೆಯೊಂದರಲ್ಲಿ, ದರೋಡೆಕೋರರ ಗುಂಪೊಂದು ತಮಿಳು ನಿರ್ದೇಶಕ ಮಣಿಕಂದನ್ ಅವರ ಮಧುರೈ ನಿವಾಸದಿಂದ ಕದ್ದ ರಾಷ್ಟ್ರೀಯ ಪ್ರಶಸ್ತಿ ಪದಕಗಳನ್ನು ಹಿಂದಿರುಗಿಸಿದ್ದೇ ಅಲ್ಲದೆ, ಜೊತೆಗೆ ಕ್ಷಮೆಯಾಚನೆಯ ಟಿಪ್ಪಣಿಯನ್ನು ಸಹ ಕಳುಹಿಸಿದ್ದಾರೆ.
01:02 PM Feb 14, 2024 IST | Ashitha S

ತಮಿಳುನಾಡು: ವಿಲಕ್ಷಣ ಘಟನೆಯೊಂದರಲ್ಲಿ, ದರೋಡೆಕೋರರ ಗುಂಪೊಂದು ತಮಿಳು ನಿರ್ದೇಶಕ ಮಣಿಕಂದನ್ ಅವರ ಮಧುರೈ ನಿವಾಸದಿಂದ ಕದ್ದ ರಾಷ್ಟ್ರೀಯ ಪ್ರಶಸ್ತಿ ಪದಕಗಳನ್ನು ಹಿಂದಿರುಗಿಸಿದ್ದೇ ಅಲ್ಲದೆ, ಜೊತೆಗೆ ಕ್ಷಮೆಯಾಚನೆಯ ಟಿಪ್ಪಣಿಯನ್ನು ಸಹ ಕಳುಹಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದೆ ತಮಿಳುನಾಡಿನ ಮಧುರೈನಲ್ಲಿರುವ ಮಣಿಕಂದನ್ ಅವರ ಉಸಿಲಂಪಟ್ಟಿ ನಿವಾಸದಲ್ಲಿ ಕಳ್ಳತನ ನಡೆದಿತ್ತು. ಈ ಸಮಯದಲ್ಲಿ ಮನೆ ಮಂದಿಯೆಲ್ಲ ಚೆನ್ನೈಗೆ ತೆರಳಿದ್ದರು. ಈ ವೇಳೆ ನಗದು ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದ್ದು, ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕೆಲವು ದಿನಗಳ ಬಳಿಕ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ, ಮನೆಯ ಕಾಂಪೌಂಡ್ ಗೋಡೆಗೆ ನೇತಾಡುತ್ತಿದ್ದ ಪಾಲಿಥಿನ್ ಬ್ಯಾಗ್, ಅದರೊಳಗೆ ಮಣಿಕಂದನ್ ಅವರ ರಾಷ್ಟ್ರೀಯ ಪ್ರಶಸ್ತಿ ಪದಕ ಮತ್ತು ಕ್ಷಮೆ ಯಾಚನೆಯ ಟಿಪ್ಪಣಿಯನ್ನು ಕಂಡುಕೊಂಡರು. 'ಸರ್, ದಯವಿಟ್ಟು ನಮ್ಮನ್ನು ಕ್ಷಮಿಸಿ, ನಿಮ್ಮ ಶ್ರಮದ ಫಲ ನಿಮ್ಮದೇ' ಎಂದು ಟಿಪ್ಪಣಿ ಬರೆಯಲಾಗಿದೆ.

Advertisement

ಕಳ್ಳರು, ನಿರ್ದೇಶಕರ ಮನೆಯ ಕಳ್ಳತನಕ್ಕೇ ಟ್ವಿಸ್ಟ್ ಕೊಟ್ಟು ಅವರಿಗೆ ಕ್ಷಮೆಯಾಚನೆ ಪತ್ರ ಬರೆದಿದ್ದಾರೆ. ಜೊತೆಗೆ, ರಾಷ್ಟ್ರ ಪ್ರಶಸ್ತಿ ಫಲಕ ಹಿಂದಿರುಗಿಸಿದ್ದಾರೆ. ಮಣಿಕಂದನ್ ಅವರು 'ಕಾಕ ಮುತ್ತೈ' ಚಿತ್ರದ ನಿರ್ದೇಶನದೊಂದಿಗೆ ಗುರುತಿಸಿಕೊಂಡರು. ಇದು ಅತ್ಯುತ್ತಮ ಮಕ್ಕಳ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಅವರ ಕೊನೆಯ ಚಿತ್ರ 'ಕಡೈಸಿ ವಿವಸಾಯಿ' ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Advertisement
Tags :
apologyAWARDindiaKaakaMuttaiLatestNewsMADURAINewsKannadaREPORTEDನವದೆಹಲಿ
Advertisement
Next Article