For the best experience, open
https://m.newskannada.com
on your mobile browser.
Advertisement

ಲಾರಿಯನ್ನು ಕದ್ದ ಕಳ್ಳರು : ಇಬ್ಬರು ಪೊಲೀಸರ ವಶಕ್ಕೆ

ಲಾರಿಯನ್ನು ಕದ್ದ  ಕಳ್ಳರನ್ನು ಬಂಧಿಸಿದ ಘಟನೆ ನಡೆದಿದೆ. ಭಾರತಿ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
10:32 AM May 01, 2024 IST | Chaitra Kulal
ಲಾರಿಯನ್ನು ಕದ್ದ ಕಳ್ಳರು   ಇಬ್ಬರು ಪೊಲೀಸರ ವಶಕ್ಕೆ

ಬೆಂಗಳೂರು: ಲಾರಿಯನ್ನು ಕದ್ದ ಕಳ್ಳರನ್ನು ಬಂಧಿಸಿದ ಘಟನೆ ನಡೆದಿದೆ. ಭಾರತಿ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Advertisement

ರಾಜ, ರಂಜಿತ್ ಕುಮಾರ್ ಬಂಧಿತ ಆರೋಪಿಗಳು. ಇವರು 12 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನ ಕದಿದ್ದರು. ಕೋಲ್ಸ್ ಪಾರ್ಕ್ ಪಕ್ಕ ಪಾರ್ಕಿಂಗ್ ಮಾಡಿದ್ದ ತಮಿಳುನಾಡು ರಿಜಿಸ್ಟ್ರೇಷನ್ ಲಾರಿಯನ್ನು ಕದ್ದಿದ್ದರು. ಈ ಸಂಬಂಧ ಕೇಸ್ ದಾಖಲಾಗಿತ್ತು.

ಭಾರತಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಇವರಿಬ್ಬರು ಅನುಮಾನಾಸ್ಪದವಾಗಿ ಕಂಡು ಬಂದಿದ್ದರು. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಿಳುನಾಡು ಮೂಲದ ಲಾರಿಯನ್ನು ಕದ್ದಿರೋದು ಬೆಳಕಿಗೆ ಬಂದಿದೆ. ಬಂಧನಕ್ಕೆ ಒಳಗಾಗಿರುವ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement

Advertisement
Tags :
Advertisement