For the best experience, open
https://m.newskannada.com
on your mobile browser.
Advertisement

ಸೈನ್‌ ಲಾಂಗ್ವೇಜ್‌ ನಲ್ಲಿ ನಡೆಯಲಿದೆ ಈ ಬಾರಿಯ ಐಪಿಎಲ್‌ ಕಾಮೆಂಟ್ರಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಕ್ರಿಕೆಟ್ ಪಂದ್ಯಗಳ ನೇರಪ್ರಸಾರದಲ್ಲಿ ಸೈನ್‌ ಲಾಂಗ್ವೇಜ್‌ ಭಾಷೆಯಲ್ಲಿ (ಸಂಕೇತ ಭಾಷೆಯಲ್ಲಿ) ಕಾಮೆಂಟ್ರಿ ಪ್ರಸಾರ ಮಾಡುವ ಕಾರ್ಯಕ್ಕೆ ಸ್ಟಾರ್ಸ್‌ಸ್ಪೋರ್ಟ್ಸ್‌ ವಾಹಿನಿ ಮುಂದಾಗಿದೆ.
06:25 PM Mar 22, 2024 IST | Ashika S
ಸೈನ್‌ ಲಾಂಗ್ವೇಜ್‌ ನಲ್ಲಿ ನಡೆಯಲಿದೆ ಈ ಬಾರಿಯ ಐಪಿಎಲ್‌ ಕಾಮೆಂಟ್ರಿ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಕ್ರಿಕೆಟ್ ಪಂದ್ಯಗಳ ನೇರಪ್ರಸಾರದಲ್ಲಿ ಆಡಿಯೋ ಕಾಮೆಂಟ್ರಿ ಜೊತೆಗೆ ಸೈನ್‌ ಲಾಂಗ್ವೇಜ್‌ ಭಾಷೆಯಲ್ಲಿ (ಸಂಕೇತ ಭಾಷೆಯಲ್ಲಿ) ಕಾಮೆಂಟ್ರಿ ಪ್ರಸಾರ ಮಾಡುವ ಕಾರ್ಯಕ್ಕೆ ಸ್ಟಾರ್ಸ್‌ಸ್ಪೋರ್ಟ್ಸ್‌ ವಾಹಿನಿ ಮುಂದಾಗಿದೆ.

Advertisement

ಟೂರ್ನಿಯ ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಇಂಡಿಯಾ ಸೈನಿಂಗ್ ಹ್ಯಾಂಡ್ (ಐಎಸ್‌ಹೆಚ್‌ ನ್ಯೂಸ್‌) ಜೊತೆಗೂಡಿ ಈ ಸಂಕೇತ ಭಾಷೆಯಲ್ಲಿ ಕಾಮೆಂಟ್ರಿಯನ್ನು ಪ್ರಸಾರ ಮಾಡಲಿದೆ.

ಅಲ್ಲದೇ ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸಂಕೇತ ಭಾಷೆ ಬಳಸಿಕೊಂಡು ಕಾಮೆಂಟ್ರಿ ನೀಡಲಾಗುತ್ತದೆ. ಪ್ರತಿ ಬಾಲ್‌ ಟು ಬಾಲ್‌ ಮಾಹಿತಿಯನ್ನೂ ತಿಳಿಸಿಕೊಡಲಾಗುತ್ತದೆ ಎಂದು ಅಧಿಕೃತ ಪ್ರಸಾರಕ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಸಂಕೇತ ಭಾಷೆ ಕಾಮೆಂಟ್ರಿಯಿಂದ ಶ್ರವಣ ದೋಷವುಳ್ಳವರು ಪಂದ್ಯದ ವಿವರಣೆ ಅರಿಯಲು ಸಾಧ್ಯವಾಗಲಿದೆ.

Advertisement
Tags :
Advertisement