For the best experience, open
https://m.newskannada.com
on your mobile browser.
Advertisement

420 ನಂಬರ್‌ನವರು 400 ಸೀಟು ಪಡೆಯುವುದಾಗಿ ಮಾತನಾಡುತ್ತಿದ್ದಾರೆ: ಪ್ರಕಾಶ್ ರೈ

420 ನಂಬರ್‌ನವರು ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಪಡೆಯುವುದಾಗಿ ಮಾತನಾಡುತ್ತಿದ್ದಾರೆ, ಏನ್‌ ಮಾಡೊದು’ ಎಂದು ಮಂಗಳೂರಿನಲ್ಲಿನಟ ಪ್ರಕಾಶ್‌ ರಾಜ್‌ ಲೇವಡಿ ಮಾಡಿದ್ದಾರೆ.
01:55 PM Mar 18, 2024 IST | Ashika S
420 ನಂಬರ್‌ನವರು 400 ಸೀಟು ಪಡೆಯುವುದಾಗಿ ಮಾತನಾಡುತ್ತಿದ್ದಾರೆ  ಪ್ರಕಾಶ್ ರೈ

ಮಂಗಳೂರು: 420 ನಂಬರ್‌ನವರು ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಪಡೆಯುವುದಾಗಿ ಮಾತನಾಡುತ್ತಿದ್ದಾರೆ, ಏನ್‌ ಮಾಡೊದು’ ಎಂದು ಮಂಗಳೂರಿನಲ್ಲಿ ನಟ ಪ್ರಕಾಶ್‌ ರಾಜ್‌ ಲೇವಡಿ ಮಾಡಿದ್ದಾರೆ.

Advertisement

ಏನು ಇದು ಅಹಂಕಾರ ಅಲ್ವಾ ? ನೀವ್ಯಾರ್ರೀ ಅದನ್ನು ಹೇಳೋಕೆ. ಯಾಕೆ ಪ್ರಜಾಪ್ರಭುತ್ವ ಇರೋದು, ಹೀಗೆ ಬಂಗಾಳ, ಕರ್ನಾಟಕದಲ್ಲಿ ಹೇಳಿದ್ರಿ ಆಯ್ತಾ ?. ಈಗ ತಮಿಳುನಾಡಿನಲ್ಲಿ ಹೇಳಿದ್ರಿ, ಅಲ್ಲಿ ಆಯ್ತಾ ಆಗಿಲ್ಲ. ಸುಮ್ಮೆ ಬಾಯಿಗೆ ಬಂದಂಗೆ ಹೇಳ್ಕಂಡು ಬರ್ತೀರಿ, ಸಾವಿರಾರು ಕೋಟಿ ಹಣ ಇದೆಯಂತ ಧೈರ್ಯಾನಾ ?. ಹಣ ಬಲದಿಂದ ಗೆದ್ದೇ ಗೆಲ್ಲುತ್ತೇವೆ ಅಂತ ಧೈರ್ಯನಾ?. ಧರ್ಮವನ್ಬು ದುರುಪಯೋಗ ಪಡಿಸಿ , ಮತಗಳನ್ನು ದುಡ್ಡು ಕೊಟ್ಟು ಖರೀದಿಸ್ತೀವಿ ಅಂತ ಧೈರ್ಯಾನಾ ?. ಸುಮ್ನೆ ಇಮೇಜ್ ಸೃಷ್ಟಿಸೋಕಷ್ಟೆ ಹೇಳಿಕೊಂಡು ತಿರುಗ್ತೀರಿ ಎಂದು ಕಿಡಿಕಾರಿದ್ದಾರೆ.

ಇನ್ನು ಮೋದಿ ಪರಿವಾರ ಬಗ್ಗೆ ವಾಗ್ದಾಳಿ ನಡೆಸಿದ ಪ್ರಕಾಶ ರಾಜ್ ಇವರ ಪರಿವಾರ ಏನಂತ ಗೊತ್ತಾಯ್ತಲ್ಲ, ಲಾಟ್ರಿ ಮಾರೋ ಮಾರ್ಟಿನ್ ಇವರ ಪರಿವಾರ, ನಿಮ್ಮದು ಫಾರ್ಮಾ ಕಂಪನಿ, ಅದಾನಿ ಪರಿವಾರ, ರೇಪ್ ಮಾಡಿರುವ ಬ್ರಿಜ್ ಭೂಷಣ್ ಪರಿವಾರ. ಮಣಿಪುರದ ಹೆಣ್ಮಕ್ಕಳ ಬಗ್ಗೆ ಮಾತಾಡಲ್ಲ,ಮಹಿಳಾ ದಿನದಂದು ಗ್ಯಾಸ್ ಗೆ ನೂರು ರೂ. ಕಡಿಮೆ ಮಾಡ್ತಾರೆ. ಎರಡು ರೂ. ಪೆಟ್ರೋಲ್ ಕಡಿಮೆ ಮಾಡಿದ್ರಲ್ಲಿ ಅರ್ಥ ಇದೆಯಾ?. ಇಲೆಕ್ಟೊರಲ್ ಬಾಂಡ್ ಮೂಲಕ 12 ಸಾವಿರ ಕೋಟಿಯಂತೆ, ನಮಗೆ ಸೊನ್ನೆ ಎಷ್ಟು ಅಂತ ಗೊತ್ತಾಗಲ್ಲ, ಚುನಾವಣೆ ಗೆಲ್ಲೋಕೆ ಬಾಂಡ್ ಮಾಡಿದೀರಿ. ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಇಲ್ವೋ ಗೊತ್ತಿಲ್ಲ, ಆದರೆ ನಮ್ಮ ಮನೆಯ ಟೈಲರಿಗಂತೂ ಕೆಲಸ ಕೊಟ್ಟಿದೀರಿ.

Advertisement

ಮಹಾಪ್ರಭುಗಳೇ ಇಂಟರ್ ನೆಟ್ ನ ಒಂದು ಜಿಬಿ ಹತ್ತು ರೂ. ಅದು ನೀವು ಮಾಡಿದ್ದಾ ?. ಅದು ಪ್ರಗತಿ, ವಿಜ್ಞಾನ ಬೆಳೆದಂತೆ ವಸ್ತುಗಳ, ಸವಲತ್ತುಗಳ ಬೆಲೆ ಬದಲಾಗುತ್ತೇ. ಎಲ್ಲವನ್ನೂ ಸುಳ್ಳು ಹೇಳ್ಕಂಡು ತಿರುಗೋದು ತಪ್ಪು. ಜನರನ್ನು ಹೀಗೆಲ್ಲಾ ಮಂಗ ಮಾಡಬಾರದು. ಚುನಾವಣೋತ್ತರ ಸಮೀಕ್ಷೆ ಎನ್ನುವುದು ವ್ಯಾಪಾರ. ಹಣ ಕೊಟ್ಟು ಮಾಡಿಸುವಂಥ ಸಮೀಕ್ಷೆ ಗಳು ಇವು. ಇವತ್ತು ಪತ್ರಿಕೆ ಓಪನ್ ಮಾಡ್ತಾರಂದ್ರೆ ಯಾವ ಪಕ್ಷದ್ದು ಅಂತ ಗೊತ್ತಾಗುತ್ತದೆ. ಒಳ್ಳೆಯ ಅಭ್ಯರ್ಥಿಗಳು ಗೆದ್ರೆ ನೀವು ಗೆದ್ದಂತೆ, ಅದಕ್ಕಾಗಿ ಒಳ್ಳೆಯ ಅಭ್ಯರ್ಥಿ ಗೆಲ್ಲಿಸಿ. ನಾನು ಚುನಾವಣೆ ನಿಲ್ಲಲ್ಲ, ಯಾವ ಪಕ್ಷದ ಪರವು ಪ್ರಚಾರ ಮಾಡಲ್ಲ. ಜನರ ಪಕ್ಷ ನಾವು, ಎಲ್ಲಾ ಪಕ್ಷದವರು ಒಂದೇ, ಅವನ ಬಿಲ್ಡಿಂಗಲ್ಲಿ ಇವನ ಬಾರಿದೆ, ಎಲ್ಲ ಪಕ್ಷದ ನಾಯಕರಲ್ಲು ಹೊಂದಾಣಿಕೆ ಇದೆ. ಮೋದಿಯವರನ್ನು ಮಹಾಪ್ರಭುಗಳು ಅಂತೇನೆ. ಹೆಸರು ಕರೆದ್ರೆ ಬೇಜಾರಾಗುತ್ತೆ, ನಾ ಖಾವೂಂಗಾ ನಾ ಖಾನೆ ದೂಂಗಾ ಅಂತಾರೆ, ನಿಮ್ಮಲ್ಲಿ ಭ್ರಷ್ಟಾಚಾರ ನಡೀತಿದೆಯಲ್ಲಾ, ನೀವೂ ಸರಿಯಿಲ್ಲ ಅಂತಲ್ವಾ. ಯಾರೂ ದೇವರಲ್ಲ ಇಲ್ಲಿ, ಜನ ಅರ್ಥ ಮಾಡ್ಕೋಬೇಕಿದೆ.

ಚುನಾವಣಾ ಬಾಂಡ್ ಬಗ್ಗೆ ಯಾಕೆ ಗೌಪ್ಯವಾಗಿಟ್ಟಿದೀರಿ. 320 ಎಂಪಿಗಳಿದ್ದಾರೆ, ಅದನ್ನು ಹಂಚಿದ್ರೆ ಕಡಿಮೆ ಬರತ್ತೆ ಅಂತಾರೆ. ಮನ್ ಕಿ‌ ಬಾತ್‌ನಲ್ಲಿ‌ ನೀವು‌ ಯಾಕೆ‌ ಸತ್ಯ ಹೇಳಲ್ಲ. ಲಾಟರಿ ಮಾರ್ಟಿನಲ್ಲಿ ಹಣ ತಗೊಂಡಿದ್ದನ್ನು ನೀವ್ಯಾಕೆ ಹೇಳಿಲ್ಲ ?. ಲಾಟರಿ ಕಂಪನಿ ಒಂದು ಸಾವಿರ ಕೋಟಿ ಲಂಚ ಕೊಟ್ಟಿದೆ. ಐನೂರು ಕೋಟಿ ಲಂಚ ಕೊಟ್ಟಿದ್ದಕ್ಕೆ ಒಂದೂವರೆ ಸಾವಿರ ಕೋಟಿ ಕಾಂಟ್ರಾಕ್ಟ್ ಕೊಡ್ತೀರಿ ಅಂದ್ರೆ ಏನರ್ಥ?

ಈ ದುಡ್ಡಿನಲ್ಲಿ ಶಾಸಕರನ್ನು ಖರೀದಿಸ್ತೀರಾ ? ನೀವು ಡ್ರೆಸ್ ಖರೀದಿ ಮಾಡ್ತೀರಾ ?. ಇಲೆಕ್ಟೋರಲ್ ಬಾಂಡ್ ಕೊಟ್ಟವರಿಗೆ ಕಾಂಟ್ರಾಕ್ಟ್ ಕೊಡ್ತೀರಿ. ಇಡಿ ರೇಡ್ ಆದ ಕಂಪನಿ ಮಾರನೇ ದಿನವೇ 200 ಕೋಟಿ ಇಲೆಕ್ಟೋರಲ್ ಬಾಂಡ್ ತಕೊಂಡ್ರೆ ಓಕೇನಾ. ನಿಮ್ಮಲ್ಲಿ ಯಾಕೆ ಇಡಿ ರೇಡ್ ಆಗಲ್ಲ, ನೀವು ದುಡ್ಡು ತಗೋತಿಲ್ವಾ ಅದನ್ನು ಕೇಳಬಾರದಾ ?. ನಿಮ್ಮ ಮನ್ ಕಿ ಬಾತ್ ನಲ್ಲಿ ಅದನ್ನೆಲ್ಲ ಹೇಳುತ್ತೀರಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement
Tags :
Advertisement