ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

15 ಶಾಲೆಗಳಿಗೆ ಬಾಂಬ್ ಬೆದರಿಕೆ: ಆಘಾತಕಾರಿ ವಿಚಾರ ಬಿಚ್ಚಿಟ್ಟ ಸುರೇಶ್ ಕುಮಾರ್

ನಗರದ 15ಕ್ಕೂ ಸ್ಕೂಲ್​ಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಿಕ್ಷಣ ಸಚಿವ, ಹಾಲಿ ಶಾಸಕ ಸುರೇಶ್ ಕುಮಾರ್,  'ಮೇಲ್​ನಲ್ಲಿ ಉಗ್ರವಾದ ಬಗ್ಗೆ ಮತ್ತು ಮೂಲಭೂತವಾದದ ಬಗ್ಗೆ ಉಲ್ಲೇಖಿಸಿದ್ದಾರೆ' ಎಂದಿದ್ದಾರೆ.
01:23 PM Dec 01, 2023 IST | Ashitha S

ಬೆಂಗಳೂರು: ನಗರದ 15ಕ್ಕೂ ಸ್ಕೂಲ್​ಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಿಕ್ಷಣ ಸಚಿವ, ಹಾಲಿ ಶಾಸಕ ಸುರೇಶ್ ಕುಮಾರ್,  "ಮೇಲ್​ನಲ್ಲಿ ಉಗ್ರವಾದ ಬಗ್ಗೆ ಮತ್ತು ಮೂಲಭೂತವಾದದ ಬಗ್ಗೆ ಉಲ್ಲೇಖಿಸಿದ್ದಾರೆ" ಎಂದಿದ್ದಾರೆ.

Advertisement

ನನಗೆ ಶಾಲೆಗಳಿಗೆ ಬಾಂಬ್ ಬೆದರಿಕೆಯ ಮೇಲ್ ಬಂದಿದೆ ಎಂದು ಗೊತ್ತಾಗಿತ್ತು. ಎಲ್ಲಿ ಎಂದು ನೋಡಿದಾಗ ಯಲಹಂಕ ಶಾಲೆಗೂ ಬಂದಿದೆ ಎಂದು ತಿಳಿಯಿತು. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಬಂದು ಪರಿಶೀಲನೆ ನಡೆಸಿದೆ. ಕಳೆದ ಬಾರಿ ವಿದ್ಯಾರ್ಥಿಯೊಬ್ಬ ಬೆದರಿಕೆ ಮೇಲ್ ಮಾಡಿದ್ದ. ಈಗ ಬಂದಿರುವ ಮೇಲ್​ನಲ್ಲಿ ಉಗ್ರವಾದದ ಶಬ್ದಗಳನ್ನು ಬಳಕೆ ಮಾಡಲಾಗಿದೆ.

ಖರಿಜ್ಜಿಟಸ್​​ ಅಟ್ ಬೆಬಲ್ ಡಾಟ್ ಕಾಂ (Kharijjitas@bebble.com) ಎಂಬ ಮೇಲ್​ನಿಂದ ಬಂದಿದೆ ಎಂದು ಆಘಾತಕಾರಿ ಮಾಹಿತಿ ತಿಳಿಸಿದ್ದಾರೆ.

Advertisement

ಇನ್ನು ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, ನಿಮ್ಮ ಮಕ್ಕಳನ್ನ ಕೊಲ್ಲುತ್ತೇವೆ ಎಂದು ಮೇಲ್ ಕಳಿಸಿದ್ದಾರೆ. ನಾವು ಎಲ್ಲಿಂದ ಮೇಲ್ ಬಂದಿದೆ ಎಂದು ಪರಿಶೀಲನೆ ಮಾಡುತ್ತಿದ್ದೇವೆ. ಒಂದು ವೇಳೆ ಬಾಂಬ್ ಇದೆಯಾ ಅಂತ ವೆರಿಫೈ ಮಾಡ್ತಿದ್ದೇವೆ. ಮತಾಂತರ ಆಗಿ ಎನ್ನುವ ಸಂದೇಶ ಕೊಟ್ಟಿದ್ದಾರೆ. ಮತಾಂತರ ವಿಚಾರದಲ್ಲಿ ಕೆಲವೊಂದು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

 

 

Advertisement
Tags :
BreakingNewscrimeGOVERNMENTindiaKARNATAKALatestNewsNewsKannadaSCHOOLಬಾಂಬ್ ಬೆದರಿಕೆಸುರೇಶ್ ಕುಮಾರ್
Advertisement
Next Article