ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರ್​ಸಿಬಿ ಮುಂದಿದೆ ಬಿಗ್ ಟಾರ್ಗೆಟ್; ಫ್ಯಾನ್ಸ್ ನಿಂದ ಕ್ಯಾಲ್ಕುಲೇಟರ್​ ಹಿಡಿದು ಲೆಕ್ಕಾಚಾರ

ಸೋತು ಸುಣ್ಣವಾಗಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ಯಾಂಪ್​ ಇದೀಗ ಫುಲ್​ ಜೋಶ್​ನಲ್ಲಿದೆ. ಹ್ಯಾಟ್ರಿಕ್​ ಗೆಲುವಿನಿಂದ ತಂಡದಲ್ಲಿ ಹೊಸ ಹುರುಪು ಬಂದಿದೆ. ಹಾಗಂತ ಆರ್​​ಸಿಬಿ ರಿಲ್ಯಾಕ್ಸ್​​ ಆಗುವಂತೇ ಇಲ್ಲ. ಅಸಲಿ ಅಗ್ನಿಪರೀಕ್ಷೆ ಆರ್​​ಸಿಬಿಗೆ ಈಗ ಶುರುವಾಗಿದೆ.
12:47 PM May 06, 2024 IST | Ashitha S

ಬೆಂಗಳೂರು: ಸೋತು ಸುಣ್ಣವಾಗಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ಯಾಂಪ್​ ಇದೀಗ ಫುಲ್​ ಜೋಶ್​ನಲ್ಲಿದೆ. ಹ್ಯಾಟ್ರಿಕ್​ ಗೆಲುವಿನಿಂದ ತಂಡದಲ್ಲಿ ಹೊಸ ಹುರುಪು ಬಂದಿದೆ. ಹಾಗಂತ ಆರ್​​ಸಿಬಿ ರಿಲ್ಯಾಕ್ಸ್​​ ಆಗುವಂತೇ ಇಲ್ಲ. ಅಸಲಿ ಅಗ್ನಿಪರೀಕ್ಷೆ ಆರ್​​ಸಿಬಿಗೆ ಈಗ ಶುರುವಾಗಿದೆ.

Advertisement

ಈಗಾಗಲೇ ಆಡಿದ ಮೊದಲ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿದ್ದ, ಆರ್​​ಸಿಬಿ ನಂತರದ 3 ಪಂದ್ಯದಲ್ಲಿ ಅದ್ಧೂರಿ ಗೆಲುವು ದಾಖಲಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಹೊಸ ಚೈತನ್ಯ ಬಂದಿದೆ.

ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್​ಸಿಬಿ ಹ್ಯಾಟ್ರಿಕ್​ ಗೆಲುವು ದಾಖಲಿಸಿದೆ. ವಿನ್ನಿಂಗ್​​ ಟ್ರ್ಯಾಕ್​ಗೆ ಮರಳಿದ ಬೆನ್ನಲ್ಲೇ, ಪ್ಲೇ ಆಫ್​ ಲೆಕ್ಕಾಚಾರ ಜೋರಾಗಿ ನಡೀತಿದೆ. ಬೇಸರದಿಂದ ಕುಗ್ಗಿ ಹೋಗಿದ್ದ ಫ್ಯಾನ್ಸ್​ ಇದೀಗ ಕ್ಯಾಲ್ಕುಲೇಟರ್​ ಹಿಡಿದು ಪ್ಲೇ ಆಫ್​ ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ.

Advertisement

ಆರ್​​​ಸಿಬಿ ಪ್ಲೇ ಆಫ್​ ಎಂಟ್ರಿಗೆ ಚಾನ್ಸ್​ ಇಲ್ಲ ಅಂತಿಲ್ಲ. ಸದ್ಯ ಸತತ 3 ಪಂದ್ಯ ಗೆದ್ದು, ಒಟ್ಟಾರೆ 8 ಅಂಕ ಸಂಪಾದಿಸಿದ್ರೂ ಉಳಿದ 3 ಪಂದ್ಯಗಳಲ್ಲಿ ಆರ್​​ಸಿಬಿಗೆ ಗೆಲುವು ಅನಿವಾರ್ಯವಾಗಿದೆ.ಮುಂದಿನ ಪಂಜಾಬ್, ಡೆಲ್ಲಿ ಹಾಗು ಚೆನ್ನೈ ಸೂಪರ್​ ಕಿಂಗ್ಸ್
ತಂಡಗಳ ವಿರುದ್ಧ ಪಂದ್ಯ ಗೆದ್ದು ಅದೃಷ್ಟ ಕೈಹಿಡಿದ್ರೆ ಮಾತ್ರ ಪ್ಲೇ ಆಫ್​ ಎಂಟ್ರಿ. ಆರ್​​ಸಿಬಿ ಪ್ಲೇ ಆಫ್​ ಕನಸು ಜೀವಂತವಾಗಿರಬೇಕಂದ್ರೆ ಮುಂದಿರೋ ಈಮೂರು ಕಠಿಣ ಸವಾಲನ್ನ ಗೆಲ್ಲಬೇಕಿದೆ.

 

Advertisement
Tags :
CSKindiaIPLNewsKarnatakaRCBvirat
Advertisement
Next Article