ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇದು ದೈವದ ಪವಾಡ; ಪೆರ್ಮುದೆಯ ದೈವಸ್ಥಾನದಲ್ಲಿ ಹುಲಿ ಹೆಜ್ಜೆ ಪತ್ತೆ

ಪೆರ್ಮುದೆಯ ಪಿಲಿಚಾಮುಂಡಿ ದೈವಸ್ಥಾನದ ನೇಮೋತ್ಸವಕ್ಕೆ ತಯಾರಿ ನಡೆಸುತ್ತಿದ್ದಾಗ ದೈವಸ್ಥಾನದಲ್ಲಿ ಹುಲಿ (ಪಿಲಿಚಾಮುಂಡಿ) ಹೆಜ್ಜೆ ಪತ್ತೆಯಾಗಿದೆ. ಜ. 4ರಂದು ನೇಮೋತ್ಸವ ಅದ್ದೂರಿಯಾಗಿ ನಡೆಯಲಿದೆ.
12:54 PM Jan 03, 2024 IST | Gayathri SG

ಮಂಗಳೂರು: ಪೆರ್ಮುದೆಯ ಪಿಲಿಚಾಮುಂಡಿ ದೈವಸ್ಥಾನದ ನೇಮೋತ್ಸವಕ್ಕೆ ತಯಾರಿ ನಡೆಸುತ್ತಿದ್ದಾಗ ದೈವಸ್ಥಾನದಲ್ಲಿ ಹುಲಿ (ಪಿಲಿಚಾಮುಂಡಿ) ಹೆಜ್ಜೆ ಪತ್ತೆಯಾಗಿದೆ. ಜ. 4ರಂದು ನೇಮೋತ್ಸವ ಅದ್ದೂರಿಯಾಗಿ ನಡೆಯಲಿದೆ.

Advertisement

ಕಳೆದ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುತ್ತಿದ್ದಾಗ ಒರಿಸ್ಸಾ ಮೂಲದ ಯುವಕನ ಮೈಮೇಲೆ ಪಿಲಿಚಾಮುಂಡಿ ಆವೇಶ ಬಂದು ಮುನಿಸನ್ನು ತೋರ್ಪಡಿಸಿತ್ತು. ಈ ಕುರಿತು ಪ್ರಶ್ನೆ ಇಟ್ಟಾಗ ಪಾಳುಬಿದ್ದ ದೈವಸ್ಥಾನ ಹಾಗೂ ನೇಮೋತ್ಸವ ಸ್ಥಗಿತಗೊಳಿಸಿದ ವಿಚಾರ ಮುನ್ನಲೆಗೆ ಬಂದಿದ್ದು, ಹೀಗಾಗಿ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ 18 ವರ್ಷಗಳ ಬಳಿಕ ದೈವದ ನೇಮೋತ್ಸವಕ್ಕೆ ಸಿದ್ದತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪಾಳು ಬಿದ್ದಿದ್ದ ಪಿಲಿಚಾಮುಂಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ.

ಪೆರ್ಮುದೆಯ ಪಿಲಿಚಾಮುಂಡಿ ದೈವಸ್ಥಾನದ ಕಾಮಗಾರಿ ಸಂದರ್ಭ ನಡೆದಿರುವ ಪವಾಡ ದೈವಾರಧಕರನ್ನು ಪುಳಕಗೊಳಿಸಿದೆ. ಪಿಲಿಚಾಮುಂಡಿ ದೈವದ ಜೊತೆಗೆ ನಂಟು ಹೊಂದಿರುವ ಹುಲಿಯ ಹೆಜ್ಜೆ ದೈವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಪತ್ತೆಯಾಗಿದೆ. ದೈವಸ್ಥಾನದ ಜಾಗದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಸ್ಥಳೀಯ ಯುವಕರು ಕೆಲಸ ಮಾಡುತ್ತಿದ್ದಾಗ ದೈವಸ್ಥಾನದ ಮೇಲೆ ಹಾಗೂ ಮಣ್ಣಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ ಎನ್ನಲಾಗಿದೆ. ಹುಲಿ ಹೆಜ್ಜೆಯ ಪವಾಡ ನಡೆದಿದ್ದು, 18 ವರ್ಷಗಳಿಂದ ದೈವಾರಧನೆ ಸ್ಥಗಿತಗೊಂಡ ಜಾಗದಲ್ಲಿ ಪಿಲಿಚಾಮುಂಡಿ ದೈವ ತನ್ನ ಇರುವಿಕೆಯನ್ನು ಬಿಂಬಿಸುವ ಪ್ರಯತ್ನ ನಡೆಸಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Advertisement

Advertisement
Tags :
LatestNewsNewsKannadaದೈವ
Advertisement
Next Article